ಆಸೀಸ್-ಟೆಸ್ಟ್-ಗೆ-ಭಾರತ-ರೆಡಿ

ಆಸೀಸ್-ಟೆಸ್ಟ್-ಗೆ-ಭಾರತ-ರೆಡಿ

ಸಿಡ್ನಿ,ಫೆ. 17 : ಬಾಂಗ್ಲಾದೇಶ ವಿರುದ್ಧ ಮೊದಲ ಹೊನಲು ಬೆಳಕಿನ ಟೆಸ್ಟ್ ಪಂದ್ಯವಾಡಿದ್ದ ಟೀಂ ಇಂಡಿಯಾ ಈಗ ಆಸ್ಟ್ರೇಲಿಯಾದಲ್ಲೂ ಪಿಂಕ್ ಬಾಲ್ ನಲ್ಲಿ ಟೆಸ್ಟ್ ಆಡಲು ಸಜ್ಜಾಗಿದೆ.
ಈ ವರ್ಷಾಂತ್ಯಕ್ಕೆ ಆಸ್ಟ್ರೇಲಿಯಾ ಪ್ರವಾಸ ಮಾಡಲಿರುವ ಟೀಂ ಇಂಡಿಯಾ ಒಂದು ಪಂದ್ಯವನ್ನು ಹಗಲು ರಾತ್ರಿಯಾಗಿ ಆಡಲಿದೆ ಎಂದು ಬಿಸಿಸಿಐ ಮೂಲಗಳು ಹೇಳಿವೆ.

ವಿರಾಟ್ ಕೊಹ್ಲಿ ಕೂಡಾ ಈ ಹಿಂದೆ ಆಸ್ಟ್ರೇಲಿಯಾದಲ್ಲೂ ಹೊನಲು ಬೆಳಕಿನ ಟೆಸ್ಟ್ ಆಡಲು ರೆಡಿ ಎಂದಿದ್ದರು. ಅದರಂತೆ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಕೂಡಾ ಈ ಐತಿಹಾಸಿಕ ಟೆಸ್ಟ್ ಪಂದ್ಯ ಆಯೋಜಿಸಲು ಉತ್ಸುಕವಾಗಿದೆ.

Related