ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸಣ್ಣ ಮಕ್ಕಳಿಂದ ಹಿಡಿದು ಯುವಕ ಯುವತಿಯರು ವಯಸ್ಕರು ಸೇರಿದಂತೆ ಬಿಳಿಕೂದಲಿನ ಸಮಸ್ಯೆ ಪ್ರತಿಯೊಬ್ಬರಲ್ಲಿ ಕಂಡುಬರುವುದನ್ನು ನೋಡಿದ್ದೇವೆ. ಈ ಸಮಸ್ಯೆ 40 ವರ್ಷಗಳ ನಂತರ ಬರುವ ಸಮಸ್ಯೆಆಗಿದೇ, ಆದರೆ ಇದು ಅತೀ ಚಿಕ್ಕ ವಯಸ್ಸಿನಲ್ಲಿಯೇ ಬರುತ್ತಿದೆ. ಇದರಿಂದ ಪ್ರತಿಯೊಬ್ಬರು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಆದರೆ ಈ ಬಿಳಿ ಕೂದಲು ಸಮಸ್ಯೆ ಹೇಗೆ ಬರುತ್ತೆ? ಇದಕ್ಕೆ ಕಾರಣ ಏನು? ಇದಕ್ಕೆ ಹೇಗೆ ಪರಿಹಾರವನ್ನು ಕಂಡುಕೊಳ್ಳಬಹುದು ಎನ್ನುವುದಕ್ಕೆ ಇಲ್ಲಿದೆ ಮನೆ ಮದ್ದು.
ನಮ್ಮ ಕೂದಲಿನ ಕಿರುಚೀಲಗಳು ಕೂದಲಿಗೆ ಬಣ್ಣವನ್ನು ನೀಡುವ ಮೆಲನಿನ್ ಅನ್ನು ಉತ್ಪಾದಿಸುವುದನ್ನು ನಿಲ್ಲಿಸಿದಾಗ ಬಿಳಿ ಕೂದಲು ಸಂಭವಿಸುತ್ತದೆ. ಇದಕ್ಕೆ ಕಾರಣ ಒತ್ತಡ, ಅನುವಂಶಿಕ ಅಂಶಗಳು, ವಿಟಮಿನ್, ಪ್ರೋಟಿನ್, ಕಾರ್ಬೋಹೈಡ್ರೇಟ್ ಕೊರತೆಯಿಂದ ಬಿಳಿಕೂದಲಿಗೆ ಕಾರಣವಾಗುತ್ತದೆ.
ಅನೇಕರಿಗೆ ಕಾಲಕಾಲಕ್ಕೆ ಪ್ರತಿದಿನ ಕಾಫಿ ಅಥವಾ ಟೀ ಕುಡಿಯುವ ಹವ್ಯಾಸ ಇರುತ್ತದೆ. ಕೆಲವರು ಒಂದು ಕಫ್ ಕಾಫಿಯೊಂದಿಗೆ ತಮ್ಮ ದಿನವನ್ನು ಪ್ರಾರಂಭಿಸಿಸುತ್ತಾರೆ. ಇದನ್ನೂ ಓದಿ: ಅಕ್ಕಿ ಬದಲಿಗೆ ಈ ಪದಾರ್ಥಗಳನ್ನು ಉಪಯೋಗಿಸಿ..!
ಆದರೆ ಇದೇ ಕಾಫಿ ಪುಡಿಯನ್ನು ಕೊಬ್ಬರಿ ಎಣ್ಣೆಯಲ್ಲಿ ಬೆರೆಸಿ ಹಚ್ಚಿಅರ್ಧಗಂಟೆ ಬಿಟ್ಟುತೊಳೆದರೇ ಕೂದಲಿನ ಹಲವಾರು ಸಮಸ್ಯೆಗೆ ಮುಕ್ತಿ ಸಿಗುತ್ತದೆ ಜೊತೆಗೆ ಬಿಳಿ ಕೂದಲು ತ್ವರಿತವಾಗಿ ಕಡುಕಪ್ಪಾಗಬಹುದು.
ಹಾಗೆ ಕಾಫಿಪುಡಿ ಬೆರೆಸಿದ ಕೊಬ್ಬರಿ ಎಣ್ಣೆಯಲ್ಲಿ ಸ್ವಲ್ಪ ಅಲೋವೆರಾ ಹಾಕಿ ಹಚ್ಚಿ ಸ್ವಲ್ಪ ಸಮಯದ ನಂತರ ತೊಳೆಯುವುದರಿಂದ ನಮ್ಮ ತಲೆಯ ಕೂದಲು ಸ್ಮೂತ್ ಗೀ ಸಾಫ್ಟ್ ಆಗಿ ಇರಲು ಸಹಾಯ ಮಾಡುತ್ತದೆ.
ಅಷ್ಟೇ ಅಲ್ಲದೆ ವಾರಕ್ಕೆ ಎರಡು ಬಾರಿ ದಾಸವಾಳ ಎಲೆ, ಹೂವು, ಅಲೋವೆರಾ, ಕರಿಬೇವಿನ ಸೊಪ್ಪು ಜೊತೆಗೆ ಮೆಂತೆ ಕಾಳುಗಳನ್ನು ರುಬ್ಬಿ ಹಚ್ಚುವುದರಿಂದ ಕೂದಲು ದಟ್ಟವಾಗಿ ಬೆಳೆಯುತ್ತದೆ.
ಇದರಿಂದ ತಲೆಯಲ್ಲಿ ಇರುವಂತಹ ಹೊಟ್ಟು ಅಥವಾ ಡ್ರಾಂಡಪ್ ಕೂಡ ಕಡಿಮೆಯಾಗುತ್ತದೆ. ಅಲ್ಲದೆ ನಮ್ಮ ಕೂದಲಿನ ಆರೋಗ್ಯಕ್ಕೆ ಮನೆಯಲ್ಲಿಯೇ ಸಿಗುವಂತಹ ನೈಸರ್ಗಿಕ ಪದಾರ್ಥಗಳನ್ನು ಬಳಸಿ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಿ.