ಕೊರಲೆ ಬೆಳೆಯನ್ನು ಬೆಳೆದ ರೈತ, ಉತ್ತಮ ಇಳುವರಿ ಕಂಡಿದ್ದು ಹೇಗೆ?

  • In State
  • October 24, 2024
  • 167 Views
ಕೊರಲೆ ಬೆಳೆಯನ್ನು ಬೆಳೆದ ರೈತ, ಉತ್ತಮ ಇಳುವರಿ ಕಂಡಿದ್ದು ಹೇಗೆ?

ಮಾಲೂರು: ಮಾಲೂರು ತಾಲೂಕಿನ ಪುರ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಮತ್ತು ಕೃಷಿ ವಿಜ್ಞಾನ ಕೇಂದ್ರ ಕೋಲಾರ ಇವರ ಸಂಯುಕ್ತ ಆಶ್ರಯದಲ್ಲಿ ಚಿನ್ನಯ್ಯ ರೈತರ ಜಮೀನಿನಲ್ಲಿ ರೈತ ಕ್ಷೇತ್ರ ಪಾಠಶಾಲಾ ತರಬೇತಿಯಲ್ಲಿ ಸಿರಿಧಾನ್ಯ ಬೆಳೆಯಾದ ಕೊರಲೆ ಬೆಳೆಯನ್ನು ಬೆಳೆದು ಉತ್ತಮ ಇಳುವರಿ ಬರಲು ಮತ್ತು ಯಾವುದೇ ರೋಗ ಬಾರದಂತೆ ತಡೆಗಟ್ಟುವ ವಿಧಾನಗಳ ಬಗ್ಗೆ ಕೋಲಾರದ ಕೃಷಿ ವಿಜ್ಞಾನಿಗಳಾದ ಡಾ.ಚಿಕ್ಕನನವರು ಮಾಹಿತಿ ನೀಡಿದರು. ಇದನ್ನೂ ಓದಿ: ನ.9 ಅಥವಾ 10 ರಂದು ವಾಲ್ಮೀಕಿ ಜಯಂತಿ ಅಚರಣೆ!

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾಲೂರು ತಾಲೂಕಿನ  ಧರ್ಮಸ್ಥಳದ ಕೃಷಿ ಅಧಿಕಾರಿಯಾದ ಮಧುರಾಜ್ ಮಾತನಾಡಿ, ಧರ್ಮಸ್ಥಳ ಸಂಸ್ಥೆ ವತಿಯಿಂದ ಸಿರಿಧಾನ್ಯ ಬೆಳೆಯಲು ಒಂದು ಸಾವಿರ ಸಹಾಯಧನ ಸಂಘದ ಸದಸ್ಯರಿಗೆ ಸಿಗುತ್ತದೆ ಕಡಿಮೆ ನೀರಿನಲ್ಲಿ ಗೊಬ್ಬರ ಹಾಕದೆ  ಬೆಳೆಯಬಹುದು. ಸಿರಿಧಾನ್ಯ ನಾರಿನಾಂಶ ಇರುವ ಕಾರಣ ಸೇವನೆ ಮಾಡುವುದರಿಂದ ಶುಗರ್ ಬಿಪಿ ನಮ್ಮ ಮೂಳೆ ಮತ್ತು ಸಾವಿರಾರು ಕಾಯಿಲೆಗಳನ್ನು ಗುಣಪಡಿಸಲು ಉತ್ತಮವಾದ ಆಹಾರ ಈ ಕೊರ್ಲೆ ಸಿರಿಧಾನ್ಯವನ್ನು ಬಾಸುಮತಿ ಅಕ್ಕಿ ಸಮಾನವಾಗಿ ಕನಿಷ್ಠ ನೂರರಿಂದ 200 ರೂ ಒಂದು ಕೆಜಿಗೆ ಬೇಡಿಕೆ ಇರುತ್ತದೆ ಇದನ್ನು ಅತಿ ಹೆಚ್ಚು ಅಮೆರಿಕದಲ್ಲಿ ಬಳಸುತ್ತಾರೆ.ನಮ್ಮ ರೈತರು ಬೆಳೆದರೆ ಉತ್ತಮವಾಗಿ ನಮ್ಮ ಆರೋಗ್ಯವನ್ನ ಕಾಪಡಿಕೊಳ್ಳಬಹುದು ಎಂದರು. ಈ

ಸಂದರ್ಭದಲ್ಲಿ ಡಾ. ಶಶಿಧರ ಕೃಷಿ ವಿಜ್ಞಾನಿಗಳು ಹಾಗೂ ಲಕ್ಕೂರು ವಲಯದ ಪುರುಷೋತ್ತಮ್ ಸೇವಾ ಪ್ರತಿನಿಧಿಗಳಾದ ಪುಷ್ಪ ಮಂಜುಳಾ ರೈತರು ಹಾಗೂ ಸಂಘದ ಸದಸ್ಯರು ಭಾಗವಹಿಸಿದರು.

Related