ಕೂದಲಿನ ಆರೈಕೆಗೆ ಮನೆಮದ್ದು

ಕೂದಲಿನ ಆರೈಕೆಗೆ ಮನೆಮದ್ದು

ಕೂದಲು ಯಾರಿಗೆಲ್ಲ ಇಷ್ಟ ಇಲ್ಲ ಹೇಳಿ ಕೂದಲೆಂದರೆ ಎಲ್ಲರಿಗೂ ಇಷ್ಟ ಅದರಲ್ಲೂ ಹೆಣ್ಣು ಮಕ್ಕಳಿಗೆ ಕೂದಲಿಂದನೇ ಹೆಣ್ಣು ಮಕ್ಕಳ ಸೌಂದರ್ಯ ಹೆಚ್ಚಾಗುತ್ತದೆ ಎಂದು ನಮಗೆಲ್ಲ ತಿಳಿದಿರುವ ವಿಷಯ. ಈ ಕೂದಲಿನ ಆರೈಕೆಯ ಬಗ್ಗೆ ನಾವಿಂದು ತಿಳಿಯೋಣ.

ಕೂದಲಿನ ಶೇ.25ರಷ್ಟು ಜೀವಕೋಶಗಳು ನೀರಿನಿಂದ ನಿರ್ಮಿತವಾಗಿರುತ್ತದೆ. ದೇಹ ನಿರ್ಜಲೀಕರಣಗೊಳ್ಳುವುದರಿಂದ ಕೂದಲು ಉದುರುವ ಸಮಸ್ಯೆ ಹೆಚ್ಚಾಗುತ್ತದೆ. ಕೂದಲಿನ ಬೇರುಗಳು ಗಟ್ಟಿಯಾಗಿರಲು ದೇಹದಲ್ಲಿ ನೀರಿನ ಪ್ರಮಾಣ ಸರಿಯಾಗಿರುವುದು ಅತ್ಯಂತ ಅಗತ್ಯ. ದಿನವೊಂದರಲ್ಲಿ ಕನಿಷ್ಟ 8 ಲೋಟಗಳಷ್ಟು ನೀರು ಕುಡಿಯುವುದನ್ನು ಒಳ್ಳೆಯದು.

ಕೆಲವರು ತಲೆಗೆ ಎಣ್ಣೆ ಹಾಕಿ ಮಸಾಜ್ ಮಾಡುವುದನ್ನು ಮರೆತೇ ಬಿಡುತ್ತಾರೆ. ಅಷ್ಟೇ ಏಕೆ, ಅನೇಕರು ತಲೆಗೆ ಎಣ್ಣೆ ಹಾಕುವ ಅಭ್ಯಾಸವನ್ನೇ ಇಟ್ಟುಕೊಳ್ಳುವುದಿಲ್ಲ. ವಾರದಲ್ಲಿ ಕನಿಷ್ಠ 20 ನಿಮಿಷದಷ್ಟು ಕಾಲ ತಲೆಗೆ ಎಣ್ಣೆ ಹಾಕಿ ಮಸಾಜ್ ಮಾಡಿದರೆ ಕೂದಲಿಗೆ ಬೇಕಾದ ಆರೈಕೆ ಸಿಗುತ್ತದೆ. ಇದರಿಂದಾಗಿ ಕೂದಲು ಸೊಂಪಾಗಿ ಬೆಳೆಯುವುದು.

ದೈಹಿಕ ಆರೋಗ್ಯ ಕಾಪಾಡಿಕೊಳ್ಳುವುದೂ ಕೂದಲಿನ ರಕ್ಷಣೆಯ ಒಂದು ಮಾರ್ಗ ಎನ್ನಲಾಗುತ್ತದೆ.. ದಿನನಿತ್ಯ ಕೊಂಚ ಕಾಲ ದೈಹಿಕವಾಗಿ ವ್ಯಾಯಾಮ ಮಾಡುವುದು, ಚಟುವಟಿಕೆಗಳಲ್ಲಿ ನಿರತವಾಗಿರುವುದು ದೇಹದ ಆರೋಗ್ಯಕ್ಕೆ ಹಾಗೂ ಕೂದಲಿನ ಬೆಳವಣಿಗೆಗೂ ಒಳ್ಳೆಯದು.

ಈರುಳ್ಳಿಯ ರಸವನ್ನು ತಲೆಗೆ ಹಚ್ಚಿ ಅರ್ಧ ಗಂಟೆಯ ನಂತರ ಸ್ನಾನ ಮಾಡಿದರೆ ತಲೆ ಹೊಟ್ಟು ನಿಧಾನವಾಗಿ ನಿವಾರಣೆಯಾಗುತ್ತದೆ. ವಾರದಲ್ಲಿ ಎರಡು ಬಾರಿ ಹೀಗೆ ಮಾಡಿದರೆ ಉತ್ತಮ ಫಲಿತಾಂಶ ಸಿಗುತ್ತದೆ.

ಒಂದು ಚಮಚ ಕೊಬ್ಬರಿ ಎಣ್ಣೆಯ ಜತೆಗೆ ಒಂದು ಚಮಚ ಈರುಳ್ಳಿ ರಸ, ಒಂದು ಚಮಚ ಬಾದಾಮಿ ಎಣ್ಣೆ ಮಿಶ್ರಣ ಮಾಡಿಕೊಂಡು ತಲೆಗೆ ಮಸಾಜ್ ಮಾಡುವುದರಿಂದ ಕೂದಲಿಗೆ ಕಾಂತಿ ಬರುವುದರ ಜತೆಗೆ ಹೊಟ್ಟು ಕೂಡ ನಿವಾರಣೆಯಾಗುತ್ತದೆ.

ಈರುಳ್ಳಿಗೆ ಜೇನುತುಪ್ಪ ಸೇರಿಸಿಕೊಂಡು ದಿನನಿತ್ಯ ಸೇವಿಸುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ.

ತೆಂಗಿನೆಣ್ಣೆಯನ್ನು ಬಿಸಿ ಮಾಡಿ, ತಲೆಕೂದಲಿನ ಬುಡಕ್ಕೆ ಹಚ್ಚಿ ಮೆಲ್ಲನೆ ಮಸಾಜ್ ಮಾಡಿ, ಹೀಗೆ ಮಾಡುವುದರಿಂದ ರಕ್ತ ಸಂಚಾರ ಹೆಚ್ಚುವುದು, ನಂತರ ಒಂದು ಟವಲ್ ಅನ್ನು ಬಿಸಿ ನೀರಿನಲ್ಲಿ ಅದ್ದಿ, ಹಿಂಡಿ ನಂತರ ತಲೆಗೆ ಸುತ್ತಿ.

ಹೀಗೆ ಮಾಡುವುದರಿಂದ ಕೂದಲಿನ ಬುಡ ಎಣ್ಣೆಯನ್ನು ಹೀರಿಕೊಂಡು ಬಲವಾಗುತ್ತದೆ ಹಾಗೂ ಕೂದಲು ಉದುರುವುದು ಕಡಿಮೆಯಾಗಿ ಸೊಂಪಾಗಿ ಬೆಳೆಯುವುದು.

 

Related