ಮನೆಯಲ್ಲೇ ಕ್ರಿಕೆಟ್ ಆಡಿದ ಪಾಂಡ್ಯ ಬ್ರದರ್ಸ್

ನವದೆಹಲಿ, ಮಾ. 31 : ಕೋವಿಡ್​-19 ದೇಶಾದ್ಯಂತ 21 ದಿನಗಳ ಕಾಲ ಲಾಕ್‌ಡೌನ್‌ ಮಾಡಲಾಗಿದೆ. ಸದ್ಯ ಮಾ. 29ರಿಂದ ಶುರುವಾಗಬೇಕಿದ್ದ ಐಪಿಎಲ್ (​ಇಂಡಿಯನ್‌ ಪ್ರೀಮಿಯರ್ ಲೀಗ್‌ ಟೂರ್ನಿ)ಏ. 15ಕ್ಕೆ ಮುಂದೂಡಲಾಗಿದೆ. ಐಪಿಎಲ್‌ ಆಡಬೇಕಿದ್ದ ಎಲ್ಲ ಆಟಗಾರರು ತಮ್ಮ-ತಮ್ಮ ಮನೆಗಳು ಉಳಿದುಕೊಂಡಿದ್ದಾರೆ. ಇನ್ನು ಆಟಗಾರರು ಮನೆಗಳಲ್ಲಿ ಇದ್ದರೂ ಕೂಡ ಒಂದಲ್ಲ ಒಂದು ಹವ್ಯಾಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ.  ಕೆಲವರಂತು ಫಿಟ್ನೆಸ್‌ ಕಡೆ ಹೆಚ್ಚು ಗಮನ ಹರಿಸಿದರೆ, ಮತ್ತೆ ಕೆಲವರು ಹಾಸ್ಯಭರಿತ ಚಟುವಟಿಕೆಗಳನ್ನು ಭಾಗಿಯಾಗಿರುತ್ತಾರೆ.

ಸದ್ಯ ಟೀಮ್‌ ಇಂಡಿಯಾದಲ್ಲಿ ಪಾಂಡ್ಯ ಬ್ರದರ್ಸ್‌ ಎಂದೇ ಖ್ಯಾತಿ ಗಳಿಸಿರುವ ಹಾರ್ದಿಕ್‌ ಪಾಂಡ್ಯ ಮತ್ತು ಕೃನಾಲ್‌ ಪಾಂಡ್ಯ ಅವರು ಇಂಡೋರ್‌ನಲ್ಲಿ ಕ್ರಿಕೆಟ್‌ ಆಡುವುದನ್ನು ನಿಲ್ಲಿಸಿಲ್ಲ. ಅವರು ತಮ್ಮ ಮನೆಯಲ್ಲಿಯೇ ಕ್ರಿಕೆಟ್‌ ಆಡುವ ಮೂಲಕ ‘ಎಲ್ಲರೂ ಮನೆಯಲ್ಲಿಯೇ ಇರಿ, ಸುರಕ್ಷಿತವಾಗಿರಿ’ ಎಂಬ ಮೇಸೆಜ್​ ಕೊಟ್ಟಿದ್ದಾರೆ. ಈ ವೀಡಿಯೋವನ್ನು ಇನ್‌ಸ್ಟಾಗ್ರಾಮ್‌ ಹಾಗೂ ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

 

 

Related