ಮೂಡಲಗಿ : ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಸತ್ತಿಗೇರಿ ತೋಟದಲ್ಲಿ ಕಿಡಿಗೇಡಿಗಳು ಮಸೀದಿ ಮೇಲೆ ಕೇಸರಿ ಧ್ವಜ ಹಾರಿಸಿರುವ ಘಟನೆ ನಡೆದಿದೆ. ಅರಭಾವಿ ಗ್ರಾಮದ ಹತ್ತಿರ 3 ಕಿಲೋ ಮೀಟರ್ ಉತ್ತರಕ್ಕೆ ಸತ್ತಿಗೇರಿ ಮಡ್ಡಿ ತೋಟವಿದ್ದು ಒಟ್ಟು 645 ಜನ ವಾಸಿಸುತ್ತಿದ್ದಾರೆ. ಮುಸ್ಲಿಂ ಬಾಂಧವರು ಮುಂಜಾನೆ ನಮಾಜ್ಗೆ ಆಗಮಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.
ಸ್ಥಳೀಯ ಹಿಂದೂ-ಮುಸ್ಲಿಂ ಹಿರಿಯರು ಕೂಡಿಕೊಂಡು ಮಸೀದಿ ಮೇಲಿನ ಕೇಸರಿ ಧ್ವಜ ತೆಗೆಸಿದ್ದಾರೆ. ಅಲ್ಲದೇ ಕೇಸರಿ ಧ್ವಜ ಹಾರಿಸಿದ ಕಿಡಿಗೇಡಿಗಳ ಬಂಧನಕ್ಕೆ ಒತ್ತಾಯಿಸಿದ್ದಾರೆ. ಸದ್ಯ ಘಟನೆ ನಡೆದ ಸ್ಥಳದಲ್ಲಿ ವಾತಾವರಣ ಶಾಂತವಿದ್ದು, ಪೊಲೀಸರು ಬಿಗಿ ಬಂದೋಬಸ್ತ್ ನಿಯೋಜಿಸಿದ್ದಾರೆ.