ಭಾರಿ ಮಳೆ ಬೀಳುವ ಸಾಧ್ಯತೆ :ಎಚ್ಚರಿಕೆ!

ಭಾರಿ ಮಳೆ ಬೀಳುವ ಸಾಧ್ಯತೆ :ಎಚ್ಚರಿಕೆ!

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮೂರು ದಿನಗಳಲ್ಲಿ ಭಾರಿ ಮಳೆಯಾಗುವ ಭಾರಿ ಸಾಧ್ಯತೆ ಇದೆ. ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಹಳದಿ ಮತ್ತು ಕಿತ್ತಳೆ ಎಚ್ಚರಿಕೆ ಐಎಂಡಿ ಮುನ್ಸೂಚನೆ ನೀಡಿದೆ.

ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮುಂಗಾರು ಮಳೆ ಜಿಲ್ಲೆಯಲ್ಲಿ ಗುರುವಾರದಿಂದಲೇ ಸುರಿಯಲಾರಂಭಿಸಿದ್ದು, ಜೂನ್ 12 ರಂದು ಸುಮಾರು 64 ಮಿ.ನಿಂದ 115 ಮಿ.ಮೀ., ಜೂನ್ 13 ರಂದು 115.6 ಮಿ.ಮೀ ನಿಂದ 204.4 ಮಿ.ಮೀ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದ್ದು, ಜನರು ಹೊರಗೆ ಹೋಗದಂತೆ ಎಚ್ಚರಿಕೆ ನೀಡಲಾಗಿದೆ.

ಭಾರಿ ವಾಹನಗಳ ನಿರಂತರ ಸಂಚಾರದಿಂದ ಭೂಕುಸಿತಗಳು ಸಂಭವಿಸಿ ರಸ್ತೆಗೆ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಗುರುವಾರ ತಿಳಿಸಿದ್ದಾರೆ.

Related