ಒಣದ್ರಾಕ್ಷಿ ಆರೋಗ್ಯ ಪ್ರಯೋಜನಗಳು

ಒಣದ್ರಾಕ್ಷಿ ಆರೋಗ್ಯ ಪ್ರಯೋಜನಗಳು

ಸಾಮಾನ್ಯವಾಗಿ ನಾವೆಲ್ಲರೂ ಒಣ ದ್ರಾಕ್ಷಿಯನ್ನು ಅಡುಗೆಯ ರುಚಿಯನ್ನು ಹೆಚ್ಚಿಸಲು ಮತ್ತು ಅಡುಗೆ ಅಲಂಕಾರಕ್ಕೆ ಒಣ ದ್ರಾಕ್ಷಿಯನ್ನು ಬಳಸುತ್ತೇವೆ.

ಒಣದ್ರಾಕ್ಷಿಯನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ದ್ರಾಕ್ಷಿ ಮತ್ತು ನೀರನ್ನು ಸೇವಿಸುವುದರಿಂದ ಹಲವಾರು ಆರೋಗ್ಯ ಮತ್ತು ಚರ್ಮದ ಸಮಸ್ಯೆಗಳನ್ನು ನಿವಾರಿಸಬಹುದು.

ಒಣದ್ರಾಕ್ಷಿ ಎಂದಾಗ ನಮಗೆ ನೆನಪಾಗುವುದು ಸಿಹಿಪದಾರ್ಥಗಳ ಅಂದ ಹೆಚ್ಚಿಸಲು ಬಳಸಲ್ಪಡುವ ಒಣಫಲ ಎಂದೇ ನಮ್ಮಲ್ಲಿ ಹೆಚ್ಚಿನವರು ಪರಿಗಣಿಸಿದ್ದಾರೆ.

ಆದರೆ ಆರೋಗ್ಯ ತಜ್ಞರ ಪ್ರಕಾರ ಒಣ ದ್ರಾಕ್ಷಿಯಲ್ಲಿ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ. ಅದರಲ್ಲೂ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಪ್ರಥಮ ಆಹಾರವಾಗಿ ಒಣದ್ರಾಕ್ಷಿ ನೆನೆಸಿಟ್ಟ ನೀರನ್ನು ಸೇವಿಸುವುದರಿಂದ ಆರೋಗ್ಯಕ್ಕೆ ದುಪ್ಪಟ್ಟು ಲಾಭಗಳಿವೆ

ಆರೋಗ್ಯ ತಜ್ಷರ ಪ್ರಕಾರ ಒಣದ್ರಾಕ್ಷಿ ನೆನೆಸಿಟ್ಟ ನೀರನ್ನು ಸತತವಾಗಿ ನಾಲ್ಕು ದಿನ ನಿತ್ಯ ಸೇವಿಸಿದರೆ ಕರುಳುಗಳ ಸ್ವಚ್ಛತೆ ಲಭಿಸುತ್ತದೆ.

ಒಣದ್ರಾಕ್ಷಿ ನೆನೆಸಿಟ್ಟ ನೀರನ್ನು ನಾಲ್ಕು ದಿನಗಳ ಕಾಲ ಸೇವಿಸಿದರೆ ಹೃದಯ ಮತ್ತು ಯಕೃತ್ ನ ತೊಂದರೆಗಳು ಇಲ್ಲವಾಗುತ್ತವೆ.

ದಿನನಿತ್ಯ ಖಾಲಿ ಹೊಟ್ಟೆಗೆ ಒಣ ದ್ರಾಕ್ಷಿ ನೆನೆಸಿಟ್ಟ ನೀರಿನ ಸೇವನೆಯಿಂದ ರಕ್ತ ಶುದ್ದೀಕರಣಗೊಳ್ಳುವ ಜೊತೆಗೇ ಯಕೃತ್‌ನ ಕಾರ್ಯ ಕ್ಷಮತೆಯೂ ಉತ್ತಮಗೊಳ್ಳುವ ಮೂಲಕ ಜೀರ್ಣಶಕ್ತಿಯೂ ಉತ್ತಮಗೊಳ್ಳುತ್ತದೆ.

ಪ್ರತಿದಿನ ಖಾಲಿ ಹೊಟ್ಟೆಗೆ ನೆನೆಸಿಟ್ಟ ಒಣದ್ರಾಕ್ಷಿ ನೀರಿನ ಸೇವನೆಯಿಂದ ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟ ಹೆಚ್ಚುವುದರ ಜೊತೆಗೆ ರಕ್ತದ ಶುದ್ಧೀಕರಣ ಸಾಧ್ಯವಾಗುತ್ತದೆ.

Related