ಮನಗೂಳಿ ಮನೆತನಕ್ಕೆ ಚಾಟಿ ಬೀಸಿದ ಎಚ್.ಡಿ ದೇವೆಗೌಡ

ಮನಗೂಳಿ ಮನೆತನಕ್ಕೆ ಚಾಟಿ ಬೀಸಿದ ಎಚ್.ಡಿ ದೇವೆಗೌಡ

ಸಿಂದಗಿ : ದಿ.ಎಂ.ಸಿ.ಮನಗೂಳಿ ಅವರು ನನ್ನ ಒಡನಾಡಿ, ಅವರು ಪಕ್ಷಕ್ಕೆ ಸೇರಿದಾಗಿನಿಂದ ಉಸಿರು ಇರುವವರೆಗೂ ಮಂತ್ರಿ ಮಾಡಿದ್ದೇನೆ ಅವರಿಗೆ ದ್ರೋಹ ಬಗೆಯಲು ಹೇಗೆ ಸಾಧ್ಯ. ಅವರ ಪುತ್ರರು ಜೆಡಿಎಸ್ ಪಕ್ಷದವರ ಮೇಲೆ ಆಪಾದನೆ ಮಾಡುತ್ತಿರುವುದು ಸರಿಯೇ ಅವರಿಗೆ ಜನರೇ ಉತ್ತರ ನೀಡುತ್ತಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಮನಗೂಳಿ ಮನೆತನಕ್ಕೆ ಚಾಟಿ ಬೀಸಿದರು.

ಪಟ್ಟಣದ ದಿ.ಐ.ಬಿ. ಅಂಗಡಿ ಮಂಜೀಲ್‌ದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದಿ.ಎಂ.ಸಿ.ಮನಗೂಳಿ ಅವರ ಒಡನಾಡಿ ಹಾಗಿತ್ತು ಅಂತೆಯೇ ಅವರ ಉಸಿರು ಇರುವವರೆಗೂ ಜೆಡಿಎಸ್ ಪಕ್ಷವನ್ನು ಬಿಟ್ಟಿಲ್ಲ ವಿನಾಕಾರಣ ಎಂ.ಸಿ.ಮನಗೂಳಿ ಅವರ ಮೇಲೆ ನಾನೆಂದು ಆಪಾದನೆ ಮಾಡಲಾರೆ. ಮನಗೂಳಿ ತೀರಿಹೋದಾಗ ನಾನು ದೆಹಲಿಯಲ್ಲಿದ್ದೆ. ಆದರೂ ಕುಮಾರಸ್ವಾಮಿ ಮತ್ತು ರೇವಣ್ಣ ಬಂದು ಹೋಗಿದ್ದಾರೆ. ನಾನು ಬಂದ ನಂತರ ಪಕ್ಷ ವರಿಷ್ಠನಾಗಿ ಅವರ ಒಡನಾಡಿಯಾಗಿ ಕೆಲಸ ಮಾಡಿದ್ದೇವೆ ಎನ್ನುವ ಕಾರಣಕ್ಕೆ ಎಲ್ಲ ಶ್ರದ್ಧಾ ಕಾರ್ಯಗಳನ್ನು ಮಾಡಿದ್ದೇನೆ.

ಈ ಉಪಚುನಾವಣೆಗೆ 9ಜನ ಆಕಾಂಕ್ಷಿಗಳಾಗಿದ್ದರೂ ಅವರೆಲ್ಲರ ಅಭಿಪ್ರಾಯಗಳನ್ನು ಸಂಗ್ರಹಿಸಿ ಒಪ್ಪಿಗೆ ಮೇರೆಗೆ ಜಾತಿ ಭೇದ ಮಾಡದೇ ಎಲ್ಲ ಸಮುದಾಯಕ್ಕೆ ನ್ಯಾಯಕೊಡುವ ನಿಟ್ಟಿನಲ್ಲಿ ಒಬ್ಬ ವಿದ್ಯಾವಂತ ಮುಸ್ಲಿಂ ಮಹಿಳೆಗೆ ಟಿಕೇಟ್ ನೀಡಲು ನಿರ್ಧರಿಸಲಾಗಿದೆ ಬೇರೆ ಪಕ್ಷಗಳ ಮುಖಂಡರ ಮಾತುಗಳನ್ನು ಲಘುವಾಗಿ ತೆಗೆದುಕೊಳ್ಳುವುದಿಲ್ಲ ನನಗೆ ಯಾರ ಭಯವೂ ಇಲ್ಲ ಸ್ವತಂತ್ರವಾಗಿ ಮತಯಾಚನೆ ಮಾಡುತ್ತೇನೆ ಎಂದು ಹೇಳಿದ ಅವರು ನಾನು ಯಾರನ್ನು ಟೀಕಿಸಲಾರೆ ಜೆಡಿಎಸ್ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಎಲ್ಲ ಕಾರ್ಯತಂತ್ರಗಳನ್ನು ರೂಪಿಸಿ ಪ್ರಚಾರ ಕಣಕ್ಕೆ ಇಳಿಯುತ್ತೇನೆ. ಪ್ರಚಾರ ಸಂದರ್ಭದಲ್ಲಿ ನನ್ನ ಅವಧಿಯಲ್ಲಿನ ಎಲ್ಲ ಸಾಧನೆಗಳನ್ನು ಹಂಚಿಕೊಳ್ಳುವುದರ ಮೇಲೆ ಜನ ನಮ್ಮ ಪಕ್ಷಕ್ಕೆ ಆಶೀರ್ವದಿಸುತ್ತಾರೆ ಎನ್ನುವ ಭರವಸೆ ನನಗಿದೆ ಎಂದರು.

ಜಿಲ್ಲಾಧಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಮಾತನಾಡಿ, 5 ಜನ ಸದಸ್ಯರು ಜೆಡಿಎಸ್ ಪಕ್ಷದಲ್ಲಿಯೇ ಇದ್ದಾರೆ. ಪಕ್ಷ ತೊರೆದ ಡಾ ಶಾಂತವೀರ ಮನಗೂಳಿ ಅವರಿಗೆ ಪಕ್ಷದ ವತಿಯಿಂದ ನೋಟಿಸ್ ನೀಡಲಾಗಿದ್ದು ಮುಂಬರುವ ದಿನಗಳಲ್ಲಿ ಪಕ್ಷದ ವರಿಷ್ಠರು ಕ್ರಮ ಜರುಗಿಸುತ್ತಾರೆ ಎಂದು ತಿಳಿಸಿದರು.

ನಾಗಠಾಣ ಶಾಸಕ ದೇವಾನಂದ ಚವ್ಹಾಣ ಮಾತನಾಡಿ, ದಿ.ಎಂ.ಸಿ.ಮನಗೂಳಿ ಅವರಿಗೆ ಜನರೇ ಉತ್ತರ ನೀಡುತ್ತಾರೆ. ಪಕ್ಷದ ಅಭ್ಯರ್ಥಿ ನಾಜೀಯಾ ಅಂಗಡಿ ಗೆಲ್ಲುವ ವಿಶ್ವಾಸ ನನಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಅಭ್ಯರ್ಥಿ ನಾಜೀಯ ಅಂಗಡಿ, ಮಾಜಿ ಸಚಿವ ಬಂಡೇಪ್ಪ ಕಾಶಂಪೂರೆ, ಬಿ.ಜಿ.ಪಾಟೀಲ ಹಲಸಂಗಿ, ರಾಜುಗೌಡ ಪಾಟೀಲ ಕುದರಿಸಾಲೋಡಗಿ, ಮಂಗಳಾದೇವಿ ಬಿರಾದಾರ, ಕಸ್ತೂರಿಬಾಯಿ ದೊಡಮನಿ, ಗುರುರಾಜ ಪಾಟೀಲ, ಕೇದಾರಲಿಂಗಯ್ಯ ಹಿರೇಮಠ, ಗೋಲ್ಲಾಳಪ್ಪಗೌಡ ಪಾಟೀಲ ಗೋಲಗೇರಿ, ಸಿದ್ದನಗೌಡ ಪಾಟೀಲ ಖಾನಾಪುರ, ಶಿವಣ್ಣ ಕೊಟಾರಗಸ್ತಿ ಸೇರಿದಂತೆ ಹಲವರು ಇದ್ದರು.

Related