ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರಾ ನಟಿ ತ್ರಿಷಾ.!

  • In Cinema
  • August 19, 2022
  • 103 Views
ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರಾ ನಟಿ ತ್ರಿಷಾ.!

ವರ್ಷಂ ಚಿತ್ರದ ಮೂಲಕ ತೆಲುಗು ಪ್ರೇಕ್ಷಕರನ್ನು ಸ್ವಾಗತಿಸಿದ ನಟಿ ತ್ರಿಶಾ ಒಂದು ಕಾಲದಲ್ಲಿ ಟಾಲಿವುಡ್​ನಲ್ಲಿ ನಂಬರ್ ವನ್ ನಾಯಕಿ. ಕಾಲಿವುಡ್​ನಲ್ಲಿಯೂ ನಟಿ ಮಿಂಚುತ್ತಿದ್ದಾರೆ. ಟಾಲಿವುಡ್​ನಲ್ಲಿ ಅವರು ಮಹೇಶ್ ಬಾಬು, ನಾಗಾರ್ಜುನ, ಚಿರಂಜೀವಿ ಮತ್ತು ಪ್ರಭಾಸ್‌ ನಂತಹ ಎಲ್ಲಾ ಟಾಪ್ ಹೀರೋಗಳೊಂದಿಗೆ ನಟಿಸಿದ್ದಾರೆ. ಆದರೆ ಈಗ ತ್ರಿಷಾ ರಾಜಕೀಯಕ್ಕೆ ಬರಲು ನಿರ್ಧರಿಸಿದ್ದಾರೆ.

ತ್ರಿಷಾ ಸೌತ್ ಸಿನಿಮಾ ಇಂಡಸ್ಟ್ರಿಯ ಹೆಸರಾಂತ ನಾಯಕಿ. ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅನೇಕ ಸೂಪರ್ ಹೀರೋಗಳೊಂದಿಗೆ ಕೆಲಸ ಮಾಡಿದ್ದಾರೆ. ಪ್ರಭಾಸ್ ಮತ್ತು ಮಹೇಶ್ ಬಾಬು ಜೊತೆ ತ್ರಿಷಾ ನಟಿಸಿದ ಚಿತ್ರಗಳು ಹಿಟ್ ಆಗಿದ್ದು, ತ್ರಿಶಾ ಕೃಷ್ಣನ್ ಎರಡು ದಶಕಗಳಿಂದ ಚಿತ್ರರಂಗದಲ್ಲಿ ನಾಯಕಿಯಾಗಿದ್ದಾರೆ.

ತಮಿಳು, ತೆಲುಗು, ಕನ್ನಡ, ಹಿಂದಿ ಹೀಗೆ ನಾನಾ ಭಾಷೆಗಳಲ್ಲಿ ಟಾಪ್ ಹೀರೋಯಿನ್ ಆಗಿ ಮಿಂಚುತ್ತಿದ್ದಾರೆ. 39ರ ಹರೆಯದಲ್ಲೂ ನಾಯಕಿಯಾಗಿ ನಟಿಸುತ್ತಿರುವ ತ್ರಿಷಾಗೆ ಮಣಿಶರ್ಮಾ ನಿರ್ದೇಶನದ ಪೊನ್ನಿಯನ್ ಸೆಲ್ವನ್ ಚಿತ್ರದಲ್ಲೂ ಅವಕಾಶ ಸಿಕ್ಕಿದೆ. ಸತತ ಅವಕಾಶಗಳನ್ನು ಪಡೆದು ಮುಂದುವರಿಯುತ್ತಿದ್ದಾರೆ ಈ ನಟಿ.

ಆದರೆ ಈಗ ತ್ರಿಷಾಗೆ ಸಂಬಂಧಿಸಿದ ಸುದ್ದಿಯೊಂದು ಎಲ್ಲೆಡೆ ಚರ್ಚೆಯಾಗಿದೆ. ಅದು ನಟಿಯ ರಾಜಕೀಯ ಪ್ರವೇಶ. ಜಯಲಲಿತಾ. ಎಂಜಿಆರ್ ತರಹ ರಾಜಕೀಯಕ್ಕೆ ಎಂಟ್ರಿ ಕೊಡಲು ತ್ರಿಷಾ ರೆಡಿಯಾಗುತ್ತಿದ್ದಾರೆ ಎಂದು ವರದಿಯಾಗಿದೆ. ಈ ಹಿಂದೆ ತ್ರಿಷಾ ಅವರನ್ನು ರಾಜಕೀಯಕ್ಕೆ ಸೇರುವ ಸಾಧ್ಯತೆ ಇದೆಯೇ ಎಂದು ಕೇಳಿದಾಗ ಅವರು ಹೌದು ಎಂದು ಹೇಳಿದರು.

 

Related