ಮುಂಬೈ, ಮಾ. 4 : ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ಸುದ್ದಿಯಾಗಿದ್ದಾರೆ. ಭರ್ಜರಿ ಪ್ರದರ್ಶನ ನೀಡುವ ಮೂಲಕ ಹುಬ್ಬೇರಿಸುವಂತೆ ಮಾಡಿದ್ದಾರೆ.
ವಾಣಿಜ್ಯ ನಗರಿ ಮುಂಬೈನಲ್ಲಿ ಮಂಗಳವಾರ ನಡೆದ ಡಿವೈ ಪಾಟೀಲ್ ಟಿ20 ಕಪ್ ಟೂರ್ನಿಯಲ್ಲಿ ರಿಲಯನ್ಸ್ 1 ತಂಡದ ಪರವಾಗಿ ಆಡಿದ ಹಾರ್ದಿಕ್ ಪಾಂಡ್ಯ ಸಿಎಜಿ ತಂಡದ ವಿರುದ್ಧ 7 ಬೌಂಡರಿ, 10 ಸಿಕ್ಸರ್ ನೆರವಿನಿಂದ 39 ಎಸೆತಗಳಲ್ಲಿ ಬರೋಬ್ಬರಿ 105 ರನ್ ಸಿಡಿಸಿದರು.
ಗಾಯದ ಸಮಸ್ಯೆಯಿಂದಾಗಿ ಟೀಮ್ ಇಂಡಿಯಾದದಿಂದ ಹೊರಗುಳಿದಿದ್ದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಇದೀಗ ಚೇತರಿಸಿಕೊಂಡಿದ್ದು, ಭರ್ಜರಿ ಪ್ರದರ್ಶನದ ಮೂಲಕ ಭಾರತ ತಂಡವನ್ನು ಸೇರಿಕೊಳ್ಳವ ತವಕದಲ್ಲಿದ್ದಾರೆ.
ಕೇವಲ 37ನೇ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ ತಮ್ಮ ಶತಕ ಪೂರೈಸಿದ್ದರು. ವಿ. ಜೀವರಾಜನ್ ಓವರ್ನಲ್ಲಿ 26 ರನ್ ಚಚ್ಚಿದ ಪಾಂಡ್ಯ, ರಿಲಯನ್ಸ್ ತಂಡ 20 ಓವರ್ಗಳಲ್ಲಿ 5 ವಿಕೆಟ್ಗೆ 252 ರನ್ ಪೇರಿಸಲು ನೆರವಾದರು.
What an innings it was 👏👏
37 ball century …
Well played Hardikkkkkkkk #DYPATILT20 pic.twitter.com/FyYHZ823rS— 𝟕𝟏𝐬𝐭 𝐢𝐬 𝐂𝐨𝐦𝐢𝐧𝐠 ….. (@Viratgalaxy18) March 3, 2020