ಹೆಚ್.ವಿಶ್ವನಾಥ್‌ ಬೈರತಿ ಸುರೇಶ್ ಗೆ ನಾನು ತಕ್ಕ ಉತ್ತರ ನೀಡುತ್ತೇನೆಂದಿಯಾಕೆ?

ಹೆಚ್.ವಿಶ್ವನಾಥ್‌ ಬೈರತಿ ಸುರೇಶ್ ಗೆ ನಾನು ತಕ್ಕ ಉತ್ತರ ನೀಡುತ್ತೇನೆಂದಿಯಾಕೆ?

ಮೈಸೂರು: ರಾಜ್ಯ ರಾಜಕೀಯದಲ್ಲಿ ಆಡಳಿತ ಪಕ್ಷದ ಮೇಲೆ ವಿರೋಧ ಪಕ್ಷದ ನಾಯಕರುಗಳು ಒಂದಲ್ಲ ಒಂದು ಆರೋಪ ಮಾಡುವುದರ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಪ್ರತಿಭಟನೆ ಮಾಡುವುದರ ಜೊತೆಗೆ ಪಾದಯಾತ್ರೆಯನ್ನು ಕೂಡ ನಡೆಸಿದರು.

ಮತ್ತೆ ಇದರ ಬೆನ್ನಲ್ಲೇ ಇದೀಗ ವಿಧಾನ ಪರಿಷತ್ ಸದಸ್ಯರಾಗಿರುವಂತಹ ಎಚ್ ವಿಶ್ವನಾಥ್ ಅವರು ಅಚ್ಚರಿಯ ಹೇಳಿಕೆಯನ್ನು ಒಂದು ನೀಡಿದ್ದಾರೆ.

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ನನ್ನ ವಿರುದ್ಧ 50 ಕೋಟಿ ರೂ ಮಾನನಷ್ಟ ಮೊಕದ್ದಮೆ ಕೇಸ್ ಹಾಕಿದ್ದಾರೆ. ಈ ಕುರಿತು ನನಗೆ ನೋಟಿಸ್ ಬಂದಿದೆ. ನಾನೂ ಲಾಯರ್ ಆಗಿದ್ದವನು. ಇದಕ್ಕೆಲ್ಲ ಉತ್ತರ ನೀಡುತ್ತೇನೆ ಹೆಚ್. ವಿಶ್ವನಾಥ್‌ ಹೇಳಿದರು. ಇದನ್ನೂ ಓದಿ: ಕೇಂದ್ರ ಸರ್ಕಾರದ ವಿರುದ್ಧ ಸಿಡಿದೆದ್ದ ಸಿಎಂ

ಬೈರತಿ ಸುರೇಶ್ ಮುಡಾ ಪ್ರಾಧಿಕಾರಕ್ಕೆ ಬಂದು ಹೋದ ಮೇಲೂ ಮುಡಾದಲ್ಲಿ 500 ಸೈಟ್ ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ಜನಾಂದೋಲನ, ಮೈತ್ರಿ ಪಕ್ಷದ ಪಾದಯಾತ್ರೆ ಸಮಾವೇಶ ಕುರಿತು ಪ್ರತಿಕ್ರಿಯಿಸಿ, ಸಮಾವೇಶ, ಪಾದಯಾತ್ರೆ ಮೂಲಕ ರಾಜ್ಯದ ಜನತೆಗೆ ಯಾವ ಸಂದೇಶ ನೀಡಿಲ್ಲ. ಸಮಾವೇಶದುದ್ದಕ್ಕೂ ಪರಸ್ಪರ ಬೈದಾಡಿಕೊಂಡಿದ್ದೀರಿ. ಎರಡು ಬಾರಿ ಸಿದ್ದರಾಮಯ್ಯ ಸಿಎಂ ಆದರೂ ಜನ ಸಾಮಾನ್ಯರಿಗೆ ಒಂದು ನಿವೇಶನ ಹಂಚಿಕೆ ಮಾಡಲು ಆಗಲಿಲ್ಲ. ಮುಡಾದಲ್ಲಿ 86 ಸಾವಿರ ಜನ ಅರ್ಜಿ ಹಾಕಿದ್ದಾರೆ. ಜನರಿಗೆ ಸೈಟ್‌ ಕೊಡುವುದನ್ನು ಬಿಟ್ಟು, ಸಿದ್ದರಾಮಯ್ಯ ತನ್ನ ಹೆಂಡತಿ ಹೆಸರಿನಲ್ಲಿ ಸೈಟ್‌ ಪಡೆದಿದ್ದಾರೆ. ಹೀಗೆ ಪಡೆದ ಬದಲಿ ನಿವೇಶನಗಳನ್ನು ಮೊದಲು ವಾಪಸ್‌ ನೀಡಿ ಎಂದು ಒತ್ತಾಯಿಸಿದರು.

 

Related