ಶಿಕ್ಷಣ ಸಾಮಾಗ್ರಿಗಳ ಮೇಲೆ ಜಿಎಸ್ ಟಿ ಹೊರೆ..!

ಶಿಕ್ಷಣ ಸಾಮಾಗ್ರಿಗಳ ಮೇಲೆ ಜಿಎಸ್ ಟಿ ಹೊರೆ..!

ನರೇಂದ್ರ ಮೋದಿ ನೇತೃತ್ವದ ಒಕ್ಕೂಟ ರ್ಕಾರ ಶಿಕ್ಷಣದ ಸಾಮಾಗ್ರಿಗಳಾದ ಪೆನ್ಸಿಲ್, ಷರ್ಪನರ್, ರೈಟಿಂಗ್ಡ್ರಾಯಿಂಗ್-ಪ್ರಿಂಟಿಂಗ್ ಇಂಕ್, ಪೇಪರ್, ಚರ್ಟ್ಸ್, ಗ್ರಾಫ್ ಪೇಪರ್, ನೋಟ್ ಬುಕ್ ಮೇಲೆ ಜಿಎಸ್ಟಿ ಹಾಕಿರುವುದು ವಿದ್ಯರ್ಥಿಗಳಿಗೆ ‘ಹೊರೆಯಾಗಲಿದೆ’ ಎಂದು ಪ್ರತಿಪಾದಿಸಿರುವ ಭಾರತ ವಿಧ್ಯರ್ಥಿ ಫೆಡರೇಷನ್(ಎಸ್ಎಫ್ಐ) ರ್ಕಾರದ ಈ ನಡೆಯು ‘ಶಿಕ್ಷಣ ವಿರೋಧಿ ನೀತಿ’ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಹೊಸ ಜಿಎಸ್ಟಿ ಬಗ್ಗೆ ಎಸ್ಎಫ್ಐ ರಾಜ್ಯ ಸಮಿತಿ, “ಮೋದಿ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಶಿಕ್ಷಣದ ಮೇಲೆ ದಾಳಿಗಳು ಹೆಚ್ಚಾಗಿವೆ. ಶಿಕ್ಷಣದ ವ್ಯಾಪಾರೀಕರಣ ತೀವ್ರಗೊಂಡು ತಳಸಮುದಾಯದ ಮಕ್ಕಳು ಶಿಕ್ಷಣದಿಂದ ಹೊರ ಹೋಗುತ್ತಿರುವುದು ಹೆಚ್ಚಾಗುತ್ತಿದೆ” ಎಂದು ಆರೋಪಿಸಿದೆ.

ಒಕ್ಕೂಟ ಸರ್ಕಾರದ ಈ ನೀತಿಯು ಪರೋಕ್ಷವಾಗಿ, ಪ್ರತ್ಯಕ್ಷವಾಗಿ ಶಿಕ್ಷಣದ ವೆಚ್ಚ ವಿಪರೀತ ಏರಿಕೆ ಮಾಡಲಿದೆ. ಇದು ತಳಸಮುದಾಯಗಳ ಬಡ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ವಂಚಿಸುವ ಕ್ರಮಗಳಾಗಿವೆ ಎಂದು ಎಸ್ಎಫ್ಐ ಆರೋಪಿಸಿದೆ.

“ಕೂಡಲೇ ಶಿಕ್ಷಣದ ಸಾಮಾಗ್ರಿಗಳ ಮೇಲೆ ವಿಧಿಸಿರುವ ಲೂಟಿಕೋರ ಜಿಎಸ್ ಟಿ ತೆರಿಗೆಯನ್ನು ವಾಪಸ್ ಪಡೆಯಬೇಕು. ಶಿಕ್ಷಣದ ಸಮಗ್ರ ಅಭಿವೃದ್ದಿಗೆ ಒಟ್ಟು ರಾಷ್ಟ್ರೀಯ ಉತ್ಪನ್ನ ಜಿಡಿಪಿಯ ೬% ಅಥವಾ ಕೇಂದ್ರ ಬಜೆಟ್ ನಲ್ಲಿ ೧೦% ಹಣವನ್ನು ಶಿಕ್ಷಣಕ್ಕೆ ಮೀಸಲಿಡಬೇಕು” ಎಂದು ಎಸ್ಎಫ್ಐ ಒತ್ತಾಯಿಸಿದೆ.

Related