ಅಂತರ್ಜಲ ಮಟ್ಟ ತೀವ್ರ ರೀತಿಯಲ್ಲಿ ಕುಸಿದಿದೆ

ಅಂತರ್ಜಲ ಮಟ್ಟ ತೀವ್ರ ರೀತಿಯಲ್ಲಿ ಕುಸಿದಿದೆ

ಹನೂರು: ಜಿಲ್ಲೆಯಲ್ಲಿ ತೀವ್ರ ನೀರಿನ ಸಮಸ್ಯೆ ಎದುರಾಗಬಹುದಾದ ಮಾರ್ಟಳ್ಳಿ ಗ್ರಾಪಂ ವ್ಯಾಪ್ತಿಯ 22 ಹಳ್ಳಿಗಳ ಮೇಲೆ ಜಿಲ್ಲಾ ಪಂಚಾಯಿತಿ ಹೆಚ್ಚಿನ ನಿಗಾ ವಹಿಸಿದೆ. ಬಹುಗ್ರಾಮ ಯೋಜನೆಯಡಿ ಈಗಾಗಲೇ ಚಾಮರಾಜನಗರ ಹಾಗೂ ಗುಂಡ್ಲುಪೇಟೆ ತಾಲೂಕಿನ ಗ್ರಾಮಗಳಿಗೆ ನದಿ ಮೂಲದಿಂದ ನೀರು ಪೂರೈಕೆಯಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಜಿಲ್ಲಾಪಂಚಾಯಿತಿಯ ನೀರು, ನೈರ್ಮಲ್ಯ ಇಲಾಖೆ ಈ ಪ್ರದೇಶವನ್ನು ವಿಶೇಷವಾಗಿ ಪರಿಗಣಿಸಿ, ಸಮಸ್ಯೆ ತಲೆದೋರದಂತೆ ಮಾಡುವ ನಿಟ್ಟಿನಲ್ಲಿ  ಪರ್ಯಾಯ ವ್ಯವಸ್ಥೆಗೆ ಮುಂದಾಗಿದೆ. ಹನೂರು ತಾಲೂಕಿನಲ್ಲಿ ಅಂತರ್ಜಲ ಮಟ್ಟ ತೀವ್ರ ರೀತಿಯಲ್ಲಿ ಕುಸಿದಿದೆ.

ಮಾರ್ಟಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ 1200 ಅಡಿ ಕೊರೆದರೂ ನೀರು ಸಿಗದ ಪರಿಸ್ಥಿತಿ ಇದೆ. ಆದರೂ ಸರಕಾರಿ ಭೂಮಿಯಲ್ಲಿರುವ ಕೊಳವೆ ಬಾವಿಗಳನ್ನು ರೀಡ್ರಿಲ್‌ ಮಾಡಲು ತೀರ್ಮಾನಿಸಲಾಗಿದೆ . ಈ ಹಿಂದೆ 400 ರಿಂದ 500 ಅಡಿಯಷ್ಟೇ ಕೊಳವೆ ಬಾವಿಗಳನ್ನು ಕೊರೆಯಲಾಗಿತ್ತು. ಇದೀಗ ಅವುಗಳನ್ನು ಆಳ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಕ್ರಮ ವಹಿಸಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.

Related