ಹುಬ್ಬಳ್ಳಿ: ಪಾಕಿಸ್ತಾನದ ಉಗ್ರರನ್ನು ಸೆದೆಬಡೆದ ಭಾರತ ಸೈನಿಕರನ್ನು ಗೌರವಿಸಲು ಹಾಗೂ ಧೈರ್ಯ ನೀಡುವ ಸಲುವಾಗಿ ರಾಜ್ಯದಾದ್ಯಂತ ತಿರಂಗಾ ಯಾತ್ರೆಯನ್ನು ಕೈಗೊಂಡಿದ್ದು ಮೇ 11 ರಿಂದ 11 ದಿನಗಳ ಕಾಲ ಕರ್ನಾಟಕ ಬಿಜೆಪಿಯು ತಿರಂಗ ಯಾತ್ರೆಯನ್ನು ಕೈಗೊಂಡಿದ್ದು ಇಂದು (ಶುಕ್ರವಾರ ಮೇ.16 ರಂದು ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿತಿರಂಗಾ ಯಾತ್ರೆಯನ್ನು ಕೈಗೊಂಡಿದೆ.
ಹೌದು, ಹುಬ್ಬಳ್ಳಿ-ಧಾರವಾಡ ಮಹಾನಗರದ ಸಹಯೋಗದಲ್ಲಿ ಬಿಜೆಪಿ ಪಕ್ಷವು “ರಾಷ್ಟ್ರ ರಕ್ಷಣೆಗಾಗಿ ನಾಗರಿಕರು” ಎಂಬ ಘೋಷಣೆಯೊಂದಿಗೆ ಇಂದು ಹಮ್ಮಿಕೊಂಡಿದ್ದ “ತಿರಂಗಾ ಯಾತ್ರೆ” ಕಾಲ್ನಡಿಗೆಯಲ್ಲಿ ಕೇಂದ್ರ ಸಚಿವರು ಪ್ರಹ್ಲಾದ್ ಜೋಶಿ ಹಾಗೂ ಅರವಿಂದ್ ಬೆಲ್ಲದ್ ಸೇರಿದಂತೆ ಸಾವಿರಾರು ದೇಶಭಕ್ತ ನಾಗರಿಕರೊಂದಿಗೆ ಪಾಲ್ಗೊಂಡಿದ್ದರು.
‘ಆಪರೇಷನ್ ಸಿಂದೂರ್’ ಯಶಸ್ವಿಯಾಗಿ ನಡೆಸಿದ ನಂತರ ಸಶಸ್ತ್ರ ಪಡೆಗಳ ಧೈರ್ಯ ಮತ್ತು ತ್ಯಾಗವನ್ನು ಗೌರವಿಸಲು ಈ ಯಾತ್ರೆಯನ್ನು ನಡೆಸಲಾಗುತ್ತಿದೆ. ಭಾರತೀಯ ಜನತಾ ಪಕ್ಷವು ಮೇ 13 ರಿಂದ 11 ದಿನಗಳ ‘ತಿರಂಗ ಯಾತ್ರೆ’ಯನ್ನು ಕೈಗೊಂಡಿದ್ದು, ಇಂದು ಜರುಗಿದ ಹುಬ್ಬಳ್ಳಿಯ ಈ ತಿರಂಗಾ ಯಾತ್ರೆಯನ್ನು ಡಾ.ಬಿ.ಆರ್.ಅಂಬೇಡ್ಕರ ಅವರ ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ ಮುಕ್ತಾಯಗೊಂಡಿತು. ಇದನ್ನೂ ಓದಿ: ಬಿಬಿಎಂಪಿ ಚುನಾವಣೆಗೆ ಸಿಕ್ತು, ಗ್ರೀನ್ ಸಿಗ್ನಲ್
ಈ ಸಂದರ್ಭದಲ್ಲಿ ಶಾಸಕರಾದ ಮಹೇಶ್ ಟೆಂಗಿನಕಾಯಿ, ಎಂ. ಆರ್ ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಸಂಕನೂರು, ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು, ಮುಖಂಡರು, ನಾಗರಿಕರು, ನಗರದ ವಿವಿಧ ಕಾಲೇಜು ಹಾಗೂ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.