ಗ್ರಾಮ ಯೋಜನೆ ಭೂಮಿ ಪೂಜೆಗೆ ಚಾಲನೆ..

ಗ್ರಾಮ ಯೋಜನೆ ಭೂಮಿ ಪೂಜೆಗೆ ಚಾಲನೆ..

ಬಾಗಲಕೋಟೆ, ಆ 06 : ತಾಲೂಕಿನ ಗದ್ದನಕೇರಿ ಗ್ರಾಮದಲ್ಲಿ ಪಂಚಾಯತ ರಾಜ್ಯ  ಇಂಜಿನಿಯರ್ ಉಪ ವಿಭಾಗ ಬಾಗಲಕೋಟೆ ವತಿಯಿಂದ ಮುಖ್ಯಮಂತ್ರಿ ಮಾದರಿ ಗ್ರಾಮ ಯೋಜನೆಯ ಭೂಮಿ ಪೂಜೆಗೆ ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವರು, ಬೀಳಗಿ ಮತ ಕ್ಷೇತ್ರದ ಜನಪ್ರಿಯ ಶಾಸಕರಾದ ಮಾನ್ಯ ಶ್ರೀ ಮುರುಗೇಶ್ ನಿರಾಣಿ ಅವರು ಚಾಲನೆ ನೀಡಿದರು.

2017-18 ಹಾಗೂ 2018-19 ನೇ ಸಾಲಿನ ಅಂದಾಜು ಮೊತ್ತ 100 ಲಕ್ಷ ರೂಪಾಯಿ ಯೋಜನೆಗೆ ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವರಾದ ಮಾನ್ಯ ಶ್ರೀ ಮುರುಗೇಶ್ ನಿರಾಣಿ ಅವರು ಭೂಮಿ ಪೂಜೆ ನೇರವೇರಿಸಿದರು. ಗದ್ದನಕೇರಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಈ ಸಮಾರಂಭಕ್ಕೆ ಸಚಿವರು ಬರುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಸೇರಿದ್ದ ಗ್ರಾಮಸ್ಥರು ಘೋಷಣೆ ಕೂಗಿ‌ ಅಭಿನಂದನೆ ಸೂಚಿಸಿದರು.

ಇದೇ ವೇಳೆ ಸಚಿವರಿಗೆ ‌ಮುತ್ತೈದೆಯರು ಆರತಿ ಬೆಳಗಿ‌ ಸ್ವಾಗತಿಸಿದ್ರೆ, ಗ್ರಾಮಸ್ಥರು ಪ್ರೀತಿಯ ಸ್ವರೂಪವಾಗಿ ಶಾಲು ಹೊದಿಸಿ ಹೂವಿನ ಹಾರ ಹಾಕಿ ಸಚಿವರನ್ನು ಸನ್ಮಾನಿಸಿದರು.

Related