ಲಕ್ಷಾಂತರ ರೂ. ಅನುದಾನ ನೀರಿನಲ್ಲಿ ಹೋಮ..!!

  • In Crime
  • June 18, 2022
  • 223 Views
ಲಕ್ಷಾಂತರ ರೂ. ಅನುದಾನ ನೀರಿನಲ್ಲಿ ಹೋಮ..!!

ಮೂರು-ನಾಲ್ಕು ವರ್ಷ ಕಳೆದರು ಶೌಚಾಲಯಗಳು ನಿರ್ವಹಣೆ ಕೊರತೆ ಗಿಡಗಂಟಿಗಳು ಬೆಳೆದು ಹಂದಿ, ನಾಯಿಗಳ ವಾಸಸ್ಥಾನ   ಸಮರ್ಪಕವಾಗಿ ನೀರು ಇಲ್ಲ. ತಾಲೂಕಿನ ಬಾಗೇವಾಡಿ ಗ್ರಾಮದ ತುಂಗಭದ್ರಾ ನದಿಗೆ ತೆರಳುವ ರಸ್ತೆ ಬದಿಯಲ್ಲಿ ಮೂರನೇ ವಾರ್ಡ್ನಲ್ಲಿ ಸಾಮೂಹಿಕ ಶೌಚಾಲಯ ೨೦೧೮-೧೯ನೇ ಸಾಲಿನಲ್ಲಿ ಸ್ವಚ್ಛ ಭಾರತ ಮಿಷನ್ ಅಭಿಯಾನ ಯೋಜನೆಯಡಿಯಲ್ಲಿ ೨೫ ಸಾಮೂಹಿಕ ಶೌಚಾಲಯ ನಿರ್ಮಿಸಿದರೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ನಿರ್ವಹಣೆ ಕೊರತೆಯಿಂದ ಗಬ್ಬು ವಾಸನೆ ಬೀರುತ್ತಿದೆ. ಪರಿಣಾಮ ಸಾಮೂಹಿಕ ಶೌಚಾಲಯ ಸುತ್ತ ಗಿಡಗಂಟಿಗಳು ಬೆಳೆದಿದು ತುಂಗಭದ್ರಾ ನದಿಗೆ ಹೋಗುವ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಗ್ರಾಮೀಣ ಭಾಗದಲ್ಲಿ ಬಯಲು ಮುಕ್ತ ಶೌಚಾಲಯ ಮಾಡುವ ಕನಸು ಕಂಡಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಶೌಚಾಲಯ ನಿರ್ಮಾಣ ಮಾಡಲು ಸರ್ಕಾರ ಅನುದಾನ ಬಿಡುಗಡೆ ಮಾಡಿದ್ದು ಗ್ರಾಮದ ನಿವಾಸಿಗಳು ಶೌಚಾಲಯ ನಿರ್ಮಿಸಿಕೊಳ್ಳಲು ಧನ ಸಹಾಯ ಬಿಡುಗಡೆ ಮಾಡಲಾಗಿದ್ದು.

ಆದರೆ ಗ್ರಾಮದ ಬಹುತೇಕ ನಿವಾಸಿಗಳು ಮನೆಯ ಮುಂದೆ ಜಾಗದ ಕಾರಣ ಸರಿ ಸುಮಾರು ೩-೪ ವರ್ಷ ಕಳೆದರು ಶೌಚಾಲಯಗಳು ನಿರ್ವಹಣೆ ಕೊರತೆಯಿಂದಾಗಿ ಶೌಚಾಲಯ ಸುತ್ತ ಗಿಡಗಂಟಿಗಳು ಬೆಳೆದಿದು ಹಂದಿ, ನಾಯಿಗಳ ವಾಸ ಮಾಡುತ್ತಿರುವುದು ಒಂದಡೆಯಾದರೆ ಮತ್ತೊಂದು ಕಡೆ ಶೌಚಾಲಯಕ್ಕೆ ಸಮರ್ಪಕವಾಗಿ ನೀರು ಇಲ್ಲದೆ  ಗ್ರಾಮದ ನಿವಾಸಿಗಳು ಶೌಚಾಲಯ ಬಳಸಲು ಹಿಂದೇಟು ಹಾಕುತ್ತಿದ್ದರೆ.  ಸಾಮೂಹಿಕ ಶೌಚಾಲಯಗಳು ಸಂಪೂರ್ಣ ಬಳಕೆಬಾರದಂತಾಗಿದ್ದು ಸರ್ಕಾರ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಅನುದಾನವು ನೀರಿನಲ್ಲಿ ಹೋಮವಾಗಿದೆ.

Related