ಸರ್ಕಾರವೇ ನಿಮ್ಮದು, ಯಾವ ಸರ್ಕಾರದಲ್ಲಿ ಯಾವ ಹಗರಣವಾಗಿದೆ ತನಿಖೆ ಮಾಡಿಸಿ: ರೇಣುಕಾಚಾರ್ಯ

ಸರ್ಕಾರವೇ ನಿಮ್ಮದು, ಯಾವ ಸರ್ಕಾರದಲ್ಲಿ ಯಾವ ಹಗರಣವಾಗಿದೆ ತನಿಖೆ ಮಾಡಿಸಿ: ರೇಣುಕಾಚಾರ್ಯ

ದಾವಣಗೆರೆ: ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಬಹುಕೋಟಿ ಹೆಗ್ಗಣಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಸರ್ಕಾರದ ಮೇಲೆ ವಿರೋಧ ಪಕ್ಷದ ನಾಯಕರುಗಳು ಆರೋಪಗಳ ಮೇಲೆ ಆರೋಪ ಮಾಡುತ್ತಿದ್ದಾರೆ.

ಇನ್ನು ಇದಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ ಅವರು ಪ್ರತಿಕ್ರಿಯೆಸಿದ್ದು, ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರೇ ಬ್ಲಾಕ್ ಮೇಲ್ ಮಾಡುವ ಬದಲು ಸರ್ಕಾರವೇ ನಿಮ್ಮ ಕೈಯಲ್ಲಿದೆ ಯಾವ ಸರ್ಕಾರದಲ್ಲಿ ಯಾವ ಹಗರಣವಾಗಿದೆ ಎಂದು ತನಿಖೆ ಮಾಡಿಸಿ ಎಂದು ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಅವರು ಸಿದ್ದರಾಮಯ್ಯ ಅವರಿಗೆ ಹೇಳಿದ್ದಾರೆ. ಇದನ್ನೂ ಓದಿ: ಆರ್‌ ಅಶೋಕ್ ವಿರುದ್ಧ ಹಕ್ಕು ಚ್ಯುತಿ ಮಂಡನೆ ಮಾಡಿದ ಪ್ರದೀಪ್‌ ಈಶ್ವರ್‌

ನಗರದ ಲೋಕೋಪಯೋಗಿ ಇಲಾಖೆಯ ಸರ್ಕ್ಯೂಟ್ ಹೌಸ್‌ನಲ್ಲಿ ಭದ್ರಾ ಅಚ್ಚುಕಟ್ಟು ರೈತರ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ಸರ್ಕಾರಗಳ ಅವಧಿಯಲ್ಲಿ ಆಗಿರುವ ಹಗರಣಗಳ ತನಿಖೆ ಮಾಡಿಸಿ. ಬೇಡ ಅಂದವರು ಯಾರು ಎಂದು ಹೇಳಿದರು.

ವಾಲ್ಮೀಕಿ ಹಗರಣದ ತನಿಖೆಯನ್ನು ಎಸ್‌ಐಟಿ ಮೂಲಕ ಮಾಡಿಸಿ, ಮಾಜಿ ಸಚಿವ ನಾಗೇಂದ್ರಗೆ ಕ್ಲೀನ್ ಚಿಟ್ ನೀಡುವ ಕೆಲಸ ಸಿದ್ದರಾಮಯ್ಯ ಮಾಡಿದ್ದಾರೆ. ಎಸ್ಐಟಿ ಅಂದ್ರೆ ಸಿದ್ದರಾಮಯ್ಯ ಇನ್‌ವೆಸ್ಟಿಗೇಷನ್ ಟೀಂ ಆಗಿದೆ. ಅಧಿಕಾರವೂ ನಿಮ್ಮ ಕೈಯಲ್ಲೇ ಇದ್ದು, ಎಲ್ಲ ಸರ್ಕಾರಗಳ ಅವಧಿಯ ಭ್ರಷ್ಟಾಚಾರ, ಹಗರಣದ ತನಿಖೆ ಮಾಡಿಸಿ ಎಂದು ತಿಳಿಸಿದರು.

 

Related