ಟಿ20 ಆಡಲು ಅವಕಾಶ ನೀಡಿ

ಟಿ20 ಆಡಲು ಅವಕಾಶ ನೀಡಿ

ನವದೆಹಲಿ: ವಿದೇಶಿ ಟಿ–20 ಕ್ರಿಕೆಟ್ ಲೀಗ್ಗಳ ಲ್ಲಿ ಆಡುವ ಅವಕಾಶ ನೀಡುವಂತೆ ಕರ್ನಾಟಕ ಕ್ರಿಕೆಟಿಗ ರಾಬಿನ್ ಉತ್ತಪ್ಪ ಬಿಸಿಸಿಐಗೆ ಮನವಿ ಮಾಡಿದ್ದಾರೆ.
ಬಿಬಿಸಿಐ ಸುದ್ದಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಉತ್ತಪ್ಪ, ಐಪಿಎಲ್ ಹೊರತುಪಡಿಸಿ ಭಾರತ ಪುರುಷರ ತಂಡದ ಆಟಗಾರರು ಯಾವುದೇ ವಿದೇಶಿ ಕ್ರಿಕೆಟ್ ಲೀಗ್ಗಳಲ್ಲಿ ಭಾಗವಹಿಸುವಂತಿಲ್ಲ ಎಂದು ಬಿಸಿಸಿಐ ನಿರ್ಬಂಧ ವಿಧಿಸಿದೆ. ಹಿರಿಯ ಕ್ರಿಕೆಟಿಗ ಸುರೇಶ್ ರೈನಾ ಮತ್ತು ಇರ್ಫಾನ್ ಪಠಾಣ್ ಮಾತನಾಡಿದ್ದರು.
ಬಿಸಿಸಿಐ ಈ ಕಟ್ಟುಪಾಡನ್ನು ತೆಗೆದುಹಾಕಬೇಕು. ಇದರಿಂದ ಭಾರತೀಯ ಕ್ರಿಕೆಟಿಗರು ಸಾಧ್ಯವಾದಷ್ಟನ್ನು ಕಲಿಯಲು ಮತ್ತು ಬೆಳೆಯಲು ಸಾಧ್ಯವಾಗಲಿದೆ ಎಂದು ಮನವಿ ಮಾಡಿದ್ದಾರೆ.
‘ದಯವಿಟ್ಟು ನಮಗೆ ಪ್ರಾಮಾಣಿಕವಾಗಿ ಆಡಲು ಅನುಮತಿ ನೀಡಿ. ಆಡಲು ಅವಕಾಶ ಇಲ್ಲವಾದರೆ ನೋವುಂಟಾಗಲಿದೆ. ವಿದೇಶಿ ಲೀಗ್ಗಳಲ್ಲಿ ಆಡಲು ಅವಕಾಶ ಸಿಕ್ಕಿ, ನಾವು ಹೋಗುವಂತಾದರೆ ಚೆನ್ನಾಗಿರುತ್ತದೆ. ಏಕೆಂದರೆ, ಕ್ರಿಕೆಟ್ಅನ್ನು ಕಲಿಯುವಂತಹವರಾದರೆ ನೀವು ಸಾಧ್ಯವಾದಷ್ಟನ್ನು ಕಲಿಯಲು ಮತ್ತು ಬೆಳೆಯಲು ಬಯಸುತ್ತೀರಿ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಆಸ್ಟ್ರೇಲಿಯಾದ ಬಿಗ್ ಬಾಷ್ ಲೀಗ್ (ಬಿಬಿಎಲ್), ಕೆರಿಬಿಯನ್ ಪ್ರಿಮಿಯರ್ ಲೀಗ್ (ಸಿಪಿಎಲ್) ಅಥವಾ ಇಂಗ್ಲೆಂಡ್ನಲ್ಲಿ ಆರಂಭವಾಗಲಿರುವ ದಿ ಹಂಡ್ರೆಡ್ನಂತಹ ಟೂರ್ನಿಗಳಲ್ಲಿ ಆಡಲು ಭಾರತ ಆಟಗಾರರಿಗೆ ಅವಕಾಶವಿಲ್ಲ. ಇದರಿಂದಾಗಿ ವಯಸ್ಸಾದ ಹಿರಿಯ ಕ್ರಿಕೆಟಿಗರು ಮತ್ತು ಬಹಳ ದಿನಗಳಿಂದ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗಿರುವ ಆಟಗಾರರ ಪಾಲಿಗೆ ಕಠಿಣವಾಗಿ ಪರಿಣಮಿಸಿದೆ. ಕ್ರಿಕೆಟ್ನಲ್ಲಿ ಉಳಿಯಲು ಮತ್ತು ವೃತ್ತಿ ಬದುಕನ್ನು ಮತ್ತಷ್ಟು ವಿಸ್ತರಿಸಿಕೊಳ್ಳಲು ಲೀಗ್ಗಳಲ್ಲಿ ಆಡುವ ಅವಕಾಶ ಬೇಕು ಎಂಬುದು ಅವರ ಬೇಡಿಕೆಯಾಗಿದೆ.

Related