ಬರಹದ ಮೂಲಕ ಜನಮೆಚ್ಚುಗೆ ಪಡೆದ ಗಿರಿಜಮ್ಮ ನಿಧನ

  • In State
  • August 17, 2021
  • 490 Views
ಬರಹದ ಮೂಲಕ ಜನಮೆಚ್ಚುಗೆ  ಪಡೆದ ಗಿರಿಜಮ್ಮ ನಿಧನ

ದಾವಣಗೆರೆ: ವೈದ್ಯೆ, ಲೇಖಕಿ, ಸಾಹಿತಿ, ಪ್ರಖ್ಯಾತ, ಸ್ತ್ರಿ ರೋಗ ಪ್ರಸೂತಿ ತಜ್ಞರಾದ ಡಾ. ಹೆಚ್. ಗಿರಿಜಮ್ಮ[70] ಮಂಗಳವಾರ ಬೆಳಗ್ಗೆ ದಾವಣಗೆರೆಯ ಎಸ್ ಬಡಾವಣೆಯಲ್ಲಿ ತಮ್ಮ ನಿವಾಸದಲ್ಲಿ ಹೃದಯಘಾತದಿಂದ ನಿಧನರಾದರು.
ಡಾ. ಹೆಚ್. ಗಿರಿಜಮ್ಮ ಹುಟ್ಟಿದ್ದು ಹರಿಹರದಲ್ಲಿ. ಇಲ್ಲಿಯೇ ಪಿಯುಸಿ ಮುಗಿಸಿ, ನಂತರ ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣ ಮುಗಿಸಿದರು. ಯಶಸ್ವಿ ವೈದ್ಯಳಾಗಬೇಕು ಎನ್ನುವ ಅವರ ತಾಯಿಯ ಆಸೆ ಗಿರಿಜಮ್ಮ ಅವರನ್ನು ವೈದ್ಯಕೀಯ ಅಧ್ಯಯನದಲ್ಲಿ ತೊಡಗಿಕೊಳ್ಳುವಂತೆ ಮಾಡಿತ್ತು.
ಗಿರಿಜಮ್ಮ ಚಿಕ್ಕ ವಯಸ್ಸಿನಲ್ಲಿ ಕಾದಂಬರಿಗಾರ್ತಿ ತ್ರಿವೇಣಿ ಬರಹದಿಂದ ಪ್ರಭಾವಿತರಾಗಿದ್ದರು. ಗಿರಿಜಮ್ಮ ಅವರ ಮೊದಲ ಕತೆ “ಹೂಬಳ್ಳಿಗೆ ಈ ಆಸರೆ” ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾಯಿತು. ಚಂದಮಾಮ, ತಮಸೋಮ ಜ್ಯೋತಿರ್ಗಮಯ ಅಂಬರತಾರೆ, ಸೇರಿದಂತೆ ಒಟ್ಟು 27 ಕಾದಂಬರಿಗಳು ಪ್ರಕಟವಾಗಿವೆ. ಅರ್ಧಾಂಗಿ,ಸಂಜೆಮಲ್ಲಿಗೆ, ಅನಾವರಣ, ಅನೇಕ ನೀಳ್ಗತೆಗಳು ಮಯೂರದಲ್ಲಿ ಪ್ರಕಟವಾಗಿವೆ. ಒಟ್ಟು 50 ಕತೆಗಳನ್ನು ಬರೆದಿದ್ದಾರೆ. ಐದು ಕಥಾಸಂಗ್ರಹಗಳು ಪ್ರಕಟವಾಗಿವೆ.
ಗ್ರಾಮೀಣಭಾಗದಲ್ಲಿ ಮಹಿಳೆಯರಿಗೆ ಸ್ವಚ್ಚತೆಯ ಅರಿವು ಮೂಡಿಸಿದ್ದರು, ಅವರುಸುದೀರ್ಘ 20ವರ್ಷ ಬೆಂಗಳೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯನಿರ್ವಹಿಸಿದ್ದರು. ಇದಲ್ಲದೇ ಕಿರುಚಿತ್ರ, ಧಾರಾವಾಹಿಗಳಲ್ಲಿಯೂ ಅಭಿನಯಸಿದ್ದಾರೆ. ಅವರು ಅನೇಕ ಲೇಖನ ಗಳ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಬೆಳಕು ಮೂಡಿಸಿದ್ದಾರೆ.

Related