ಗ್ಯಾಂಗ್ರೇಪ್ ಕೇಸ್ : ಆರೋಪಿಗಳ ಮಾತು ಕೇಳಿ ಪೊಲೀಸರೇ ಶಾಕ್

ಗ್ಯಾಂಗ್ರೇಪ್ ಕೇಸ್ : ಆರೋಪಿಗಳ ಮಾತು ಕೇಳಿ ಪೊಲೀಸರೇ ಶಾಕ್

ಮೈಸೂರು: ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಎಂಬಿಎ ವಿದ್ಯಾರ್ಥಿನಿ ಮೇಲೆ ನಡೆದ ಗ್ಯಾಂಗ್ರೇಪ್ ಪ್ರಕರಣದ ಐವರು ಆರೋಪಿಗಳನ್ನು ಮೈಸೂರು ಪೊಲೀಸರು ಬಂಧಿಸಿದ್ದು, ತಲೆ ಮರೆಸಿಕೊಂಡಿರುವ ಇನ್ನೊರ್ವ ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಈಗಾಗಲೇ ಹಾಜರುಪಡಿಸಿ 10 ದಿನಗಳ ಕಾಲ ಪೊಲೀಸರು ತಮ್ಮ ಕಸ್ಟಡಿಗೆ ಪಡೆದುಕೊಂಡು ವಿಚಾರಣೆಯನ್ನು ಚುರುಕುಗೊಳಿಸಿದ್ದಾರೆ. ಪೊಲೀಸ್ ತನಿಖೆಯ ವೇಳೆ ಕಿರಾತಕರು ಪೊಲೀಸರೆ ಶಾಕ್ ಆಗುವಂತಹ ವಿಚಾರವನ್ನು ಬಾಯ್ಬಿಟ್ಟಿದ್ದಾರೆ. ಈ ಹಿಂದಿನ ಪ್ರಕರಣಗಳಲ್ಲಿ ಸಂತ್ರಸ್ತರು ಪೊಲೀಸರಿಗೆ ದೂರು ಕೊಡದಿರುವುದೇ ಆರೋಪಿಗಳಿಗೆ ಪ್ಲಸ್ ಪಾಯಿಂಟ್ ಆಗಿರುವ ವಿಚಾರ ಬಯಲಾಗಿದೆ.

ಹಿಂದೆ ಸಾಕಷ್ಟು ದರೋಡೆ ಪ್ರಕರಣಗಳನ್ನ ನಡೆಸಿದ್ರೂ ಕೂಡ ಮರ್ಯಾದೆಗೆ ಅಂಜಿ ಯಾರೊಬ್ಬರು ಆರೋಪಿಗಳ ವಿರುದ್ಧ ದೂರು ಕೊಡಲು ಮುಂದಾಗಿಲ್ಲ. ದೂರು ಕೊಟ್ಟರೆ ಎಲ್ಲಿ ತಮ್ಮ ಮರ್ಯಾದೆ ಹೋಗುತ್ತದೆ ಎಂದು ಹೆದರುತ್ತಿದ್ದರು. ಹೀಗಾಗಿ ತಾವು ಮಾಡುವ ಕ್ರೈಂ ಪೊಲೀಸರಿಗೆ ಗೊತ್ತಾಗುತ್ತಿಲ್ಲ ಎಂಬುದು ಆರೋಪಿಗಳಿಗೆ ಪದೇಪದೆ ಕ್ರೈಂ ಮಾಡಲು ಪ್ರಚೋದನೆ ನೀಡಿದೆ.

ಈ ಹಿಂದೆ ನಡೆದ ಪ್ರಕರಣದಲ್ಲಿ ಯಾರಾದರೂ ಒಬ್ಬರು ದೂರು ಕೊಟ್ಟಿದ್ದರೂ ಸಹ ಇಂದು ಸಾಂಸ್ಕೃತಿಕ ನಗರಿಯೇ ತಲೆತಗ್ಗಿಸುವಂತ ಹೇಯ ಕೃತ್ಯ ನಡೆಯುತ್ತಿರಲಿಲ್ಲ. ಯಾರು ದೂರು ಕೊಡುವುದಿಲ್ಲ… ಇದೊಂದು ರೀತಿಯಲ್ಲಿ ಚೆನ್ನಾಗೇ ಇದೆ ಅಂದು ಕೊಂಡು ಆರೋಪಿಗಳು ಹೇಯ ಕೃತ್ಯಗಳನ್ನು ಮಾಡುತ್ತಿದ್ದರು. ತಮ್ಮ ಕೃತ್ಯಕ್ಕೆ ಮೈಸೂರಿನ ಈ ಸ್ಥಳ ಸೇಫ್ ಅಂದುಕೊಂಡಿದ್ದರು. ಹೀಗಾಗಿಯೇ ತಮಿಳುನಾಡಿನವರಾದರು ಆಗಾಗ ಇಲ್ಲಿಗೆ ಭೇಟಿ ನೀಡುತ್ತಿದ್ದರು. ತಮಗೆ ಚಿರಪರಿಚಿತವಾಗಿದ್ದ ಚಾಮುಂಡಿ ಬೆಟ್ಟದ ಸುತ್ತಮುತ್ತ ಕೃತ್ಯ ನಡೆಸುತ್ತಿರುವುದಾಗಿ ಬಾಯ್ಬಿಟ್ಟಿದ್ದಾರೆ.

Related