ಗಾಂಧೀಜಿ ಜಯಂತಿ ಚಿತಾ ಭಸ್ಮ ಸ್ಮಾರಕಕ್ಕೆ ಗೌರವ 

  • In State
  • October 3, 2024
  • 276 Views
ಗಾಂಧೀಜಿ ಜಯಂತಿ ಚಿತಾ ಭಸ್ಮ ಸ್ಮಾರಕಕ್ಕೆ ಗೌರವ 

ಕೂಡ್ಲಿಗಿ: ಪಟ್ಟಣದ ಮಹಾತ್ಮ ಗಾಂಧೀಜಿ ಚಿತಾ ಭಸ್ಮ ರಾಷ್ಟ್ರೀಯ ಸ್ಮಾರಕದಲ್ಲಿ, ಅ2 ರಂದು ತಾಲೂಕಾಡಳಿತ ಹಾಗೂ ಗಾಂಧೀ ಸ್ಮಾರಕ ಸಮಿತಿ ಸಹಯೋಗದಲ್ಲಿ. ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ155ನೇ ಜನ್ಮ ದಿನ, ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ120ನೇ ಜನ್ಮ ದಿನವನ್ನು ಆಚರಿಸಲಾಯಿತು. ಶಾಸಕರಾದ ಡಾ.ಎನ್.ಟಿ.ಶ್ರೀನಿವಾಸ್ ರವರು, ಮಹಾತ್ಮ ಗಾಂದೀಜಿಯವರ ಭಾವಚಿತ್ರಕ್ಕೆ ಹಾಗೂ ಚಿತಾಭಸ್ಮಕ್ಕೆ. ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಭಾವಚಿತ್ರಕ್ಕೆ, ಪುಷ್ಪಗುಚ್ಚ ಅರ್ಪಿಸಿ ನಮಿಸುವ ಮೂಲಕ ಗೌರವ ಸರ್ಪಿಸಿದರು.

ಅಖಿಲ ಭಾರತ ಕಾಂಗ್ರೇಸ್ ಅಧಿವೇಶನಕ್ಕೆ ಶತಮಾನೋತ್ಸವ -ಗಾಂಧೀ ನಡಿಗೆ_ 1924ರ ಅಖಿಲ ಭಾರತ ಕಾಂಗ್ರೇಸ್ ಸಮಿತಿ, ಪ್ರಥಮ ಅಧಿವೇಶನ ಜರುಗಿ ಈಗ್ಗೆ ನೂರು ವರ್ಷಗಳು ಸಂದಿವೆ. ಪ್ರಯಕ್ತ ಕಾಂಗ್ರೇಸ್ ಪಕ್ಷ ರಾಷ್ಟ್ರಾಧ್ಯಂತ ಶತಮಾನೋತ್ಸವ ಸಂಭ್ರಮಾಚರಣೆ ಆಚರಿಸಿತು, ಕಾರ್ಯಕರ್ತರು ಪಟ್ಟಣ ಸೇರಿದಂತೆ ತಾಲೂಕಿನೆಲ್ಲೆಡೆಗಳಲ್ಲಿ ಸಂಭ್ರಮಾಚರಣೆ ಆಚರಿಸಿದರು. ಈ ಹಿನ್ನಲೆಯಲ್ಲಿ ಶಾಸಕ ಡಾ. ಎನ್.ಟಿ.ಶ್ರೀನಿವಾಸ್ ನೇತೃತ್ವದಲ್ಲಿ “ಗಾಂಧೀ ನಡಿಗೆ” ಹೆಸರಲ್ಲಿ, ಪಟ್ಟಣದಲ್ಲಿ ಪಾದಯಾತ್ರೆ ಜಾಥಾ ನಡೆಸಲಾಯಿತು. ಇದನ್ನೂ ಓದಿ: ಕೂಡ್ಲಿಗಿ: ಗಾಂಧೀಜಿ ಜಯಂತಿ ಚಿತಾ ಭಸ್ಮ ಸ್ಮಾರಕಕ್ಕೆ ಗೌರವ

ಈ ಸಂದರ್ಭದಲ್ಲಿ, ತಹಶಿಲ್ದಾರರಾದ ಎಮ್.ರೇಣುಕಮ್ಮ ಸೇರಿದಂತೆ ತಾಲೂಕಿನ ವಿವಿದ ಇಲಾಖೆಗಳ ಅಧಿಕಾರಿಗಳು, ಹಾಗೂ ಸಿಬ್ಬಂದಿಯವರು ಹಾಜರಿದ್ದರು. ಪಟ್ಟಣ ಪಂಚಾಯ್ತಿ ಅಧ್ಯಕ್ಷರಾದ ಕಾವಲ್ಲಿ ಶಿವಪ್ಪನಾಯಕ, ಪಪಂ ಉಪಾಧ್ಯಕ್ಷರು ಸ್ಥಾಯಿ ಸಮಿತಿ ಅಧ್ಯಕ್ಷರು, ಹಾಗೂ ವಿವಿದ ವಾರ್ಡ್ ಗಳ ಸದಸ್ಯರು ಮತ್ತು ಪಪಂ ಅಧಿಕಾ ರಿಗಳು ಸಿಬ್ಬಂದಿಯವರು. ವಿವಿದ ಜನಪ್ರತಿನಿಧಿಗಳು, ಗಾಂದೀಜಿ ಸ್ಮಾರಕ ಸಮಿತಿ ಪ್ರಮುಖರಾದ ನಿವೃತ್ತ ದೈಹಿಕ ಶಿಕ್ಷಕರಾದ ಡಿ.ನಾಗರಾಜಪ್ಪ ಸೇರಿದಂತೆ, ಸಮಿತಿ ಪದಾಧಿಕಾರಿಗಳು ಸದಸ್ಯರು ಭಾಗಿಯಾಗಿದ್ದರು.

Related