ಗಾಳಿಪಟ-2 ಪ್ರಾಯಶಃ ಹಾಡಿನ ಬಿಡುಗಡೆ

  • In Cinema
  • August 5, 2022
  • 40 Views
ಗಾಳಿಪಟ-2 ಪ್ರಾಯಶಃ ಹಾಡಿನ ಬಿಡುಗಡೆ

ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಗಾಳಿಪಟ 2 ಸಿನಿಮಾದ ಮತ್ತೊಂದು ಹಾಡು ಬಿಡುಗಡೆ ಆಗಿದ್ದು, ಪ್ರಾಯಶಃ ಹೆಸರಿನೊಂದಿಗೆ ಬಂದಿರುವ ಈ ಗೀತೆಯನ್ನು ಕಿಚ್ಚ ಸುದೀಪ್ ಇಂದು ಬಿಡುಗಡೆ ಮಾಡಿದ್ದಾರೆ. ಹಾಡಿನ ಕುರಿತು ಮಾತನಾಡಿ, ಒಂದೊಳ್ಳೆ ಸಿನಿಮಾ ಇದಾಗಲಿದೆ ಎಂದು ಶುಭ ಹಾರೈಸಿದ್ದಾರೆ.

ಯೋಗರಾಜ್ ಭಟ್ ಮತ್ತು ಗಣೇಶ್ ಕಾಂಬಿನೇಷನ್ ನಲ್ಲಿ ಈ ಹಿಂದೆ ಗಾಳಿಪಟ ಸಿನಿಮಾ  ರಿಲೀಸ್ ಆಗಿತ್ತು. ಆ ಸಿನಿಮಾದಲ್ಲಿ ಗಣೇಶ್, ದಿಗಂತ್ ಮತ್ತು ಗಾಯಕ ರಾಜೇಶ್ ಕೃಷ್ಣನ್ ತಾರಾ ಬಳಗದಲ್ಲಿದ್ದರು. ಈ ಬಾರಿ ರಾಜೇಶ್ ಕೃಷ್ಣನ್ ಬದಲು, ಪವನ್ ಕುಮಾರ್ ಬಂದಿದ್ದಾರೆ. ಉಳಿದಂತೆ ಗಣೇಶ್ ಮತ್ತು ದಿಗಂತ್ ತಮ್ಮ ತಮ್ಮ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಈಗಾಗಲೇ ಗಾಳಿಪಟ 2 ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಅದ್ಭುತ ರೆಸ್ಪಾನ್ಸ್ ಬಂದಿದೆ. ಅಲ್ಲದೇ, ಎರಡು ಹಾಡುಗಳು ಕೂಡ ಬಿಡುಗಡೆಯಾಗಿ ಜನರನ್ನು ರಂಜಿಸಿವೆ. ಹೀಗಾಗಿ ಗಾಳಿಪಟ 2 ಸಿನಿಮಾ ಕೂಡ ಭರವಸೆ ಮೂಡಿಸಿದೆ. ಯೋಗರಾಜ್ ಭಟ್ ಮತ್ತು ನಿರ್ಮಾಪಕ ರಮೇಶ್ ರೆಡ್ಡಿ ಕಾಂಬಿನೇಷನ್ ನ ಮೊದಲ ಸಿನಿಮಾ ಇದಾಗಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜನೆಯಲ್ಲಿ ಹಾಡುಗಳು ಮೂಡಿ ಬಂದಿವೆ.

Related