ಜಿ. ಪರಮೇಶ್ವರ್ ಬಿಜೆಪಿಗೆ ಹೋಗ್ತಾರಾ..?

ಜಿ. ಪರಮೇಶ್ವರ್ ಬಿಜೆಪಿಗೆ ಹೋಗ್ತಾರಾ..?

ತುಮಕೂರು, ಜೂ 24 : ಅಗ್ನಿಪಥ್ ಯೋಜನೆಯಂತೆ ಸೇನೆಗೆ ಸೇರುವವರಿಗೆ 6 ತಿಂಗಳು ತರಬೇತಿ ಬಳಿಕ ಅವರ ಸೇವಾ ಅವಧಿ ಕೂಡಾ ಕೇವಲ ನಾಲ್ಕು ವರ್ಷ. ನಾಲ್ಕು ವರ್ಷ ಕಳೆದ ಮೇಲೆ ಅವರ ಮುಂದಿನ ದಾರಿ ಏನು ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಕೇಂದ್ರದ ಅಗ್ನಿಪಥ್ ಯೋಜನೆ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ತುಮಕೂರಿನ ಕೊರಟಗೆರೆಯ ಸಿದ್ದರಬೆಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಲ್ಕು ವರ್ಷ ಕಳೆದ ಮೇಲೆ ಏನು..? ಹಣ ಉಳಿಸಲು ಹೋಗಿ ದೇಶವನ್ನು ಅಭದ್ರ ಮಾಡುತ್ತೀರಾ..? ಈ ದೇಶದ ಭದ್ರತೆ ಬಹಳ‌ ಮುಖ್ಯ. ತಕ್ಷಣವೇ ಇದನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

ಇನ್ನು ಜಿ.ಪರಮೇಶ್ವರ್ ಬಿಜೆಪಿಗೆ ಹೋಗುತ್ತಾರೆ ಎನ್ನುವ ವದಂತಿ ಬಗ್ಗೆ ಮಾತನಾಡಿದ ಅವರು, ನನಗೆ ಯಾರು ಹೇಳಿಲ್ಲ. ನನಗೆ ಯಾರು ಸಂಪರ್ಕ ಮಾಡಿಲ್ಲ. ಮುಂದೆ ಏನಾಗುತ್ತದೆ ಎಂದು ಕಾದು ನೋಡಿ ಎನ್ನುವ ಕುತೂಹಲದ ಉತ್ತರ ನೀಡಿದ್ದಾರೆ.

Related