ಸಂಪೂರ್ಣ ಭರ್ತಿಯಾದ ವಾಣಿ ವಿಲಾಸ ಸಾಗರ..!

ಸಂಪೂರ್ಣ ಭರ್ತಿಯಾದ ವಾಣಿ ವಿಲಾಸ ಸಾಗರ..!

ಚಿತ್ರದುರ್ಗ ಆಗಸ್ಟ್ 09 :  ಬರದ ನಾಡು ಎಂದು ಕರೆಸಿಕೊಳ್ಳೊತ್ತಿದ್ದ ಚಿತ್ರದುರ್ಗ ಜಿಲ್ಲೆ ಜನರಿಗೆ ಜೀವ ನಾಡಿಯಾಗಿರುವ ವಾಣಿ ವಿಲಾಸ ಸಾಗರ ಮತ್ತೊಮ್ಮೆ ಐತಿಹಾಸಿಕ ದಾಖಲೆಗೆ ಸಾಕ್ಷಿಯಾಗುತ್ತಿದೆ. ನಾಲ್ಕೈದು ವರ್ಷಗಳ ಹಿಂದೆ ಡೆಡ್ ಸ್ಟೋರೇಜ್ತಲುಪಿದ್ದ ಈ ಜಲಾಶಯ ಈಗ ತುಂಬಿ ಕೋಡಿ ಬೀಳೋಕೆ ತುದಿಗಾಲಲ್ಲಿ ನಿಂತಿದ್ದು 6 ದಶಕಗಳ ಬಳಿಕ ಕೋಡಿ ಬೀಳೋ ದೃಶ್ಯವನ್ನ ಕಣ್ತುಂಬಿಕೊಳ್ಳೋಕೆ ಜಿಲ್ಲೆಯ ಜನರು ಕಾತರಾಗಿದ್ದಾರೆ.

ವಾಣಿ ವಿಲಾಸ ಸಾಗರ ಮೈಸೂರು ಅರಸರ ಕಾಲದಲ್ಲಿ ನಿರ್ಮಿಸಿದ್ದ ಜಿಲ್ಲೆಯ ಜೀವನಾಡಿ. ಅದು ನಿರ್ಮಾಣವಾದ ಬಳಿಕ 1932 ರಲ್ಲಿ 125.50, 1933 ರಲ್ಲಿ 135.25, 1934 ರಲ್ಲಿ 130.24 ಅಡಿ ನೀರು ಸಂಗ್ರಹವಾಗಿದ್ದು ಇತಿಹಾಸ. ಬಳಿಕ 1956ರಲ್ಲಿ 125 ಅಡಿ, 1957ರಲ್ಲಿ 125.05 ಅಡಿ, 1958 ರಲ್ಲಿ 124.25 ಅಡಿ ನೀರು ಸಂಗ್ರಹವಾಗಿತ್ತು. ಇದಾದ ಬಳಿಕ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿ, ವೇದಾವತಿ ನದಿ ನೀರು ಕೂಡ ಹರಿದು ಬಂದು ಜಲಾಶಯ ಸೇರಲಿಲ್ಲ.

ವರ್ಷಕ್ಕೊಮ್ಮೆ ಮಳೆಗಾಲದಲ್ಲಿ ಸುರಿಯೋ ಮಳೆಗೊ ಸ್ವಲ್ಪ ಪ್ರಮಾಣದ ನೀರು ಬಂದ್ರೆ. ಆ ನೀರು ಜಿಲ್ಲೆಯ ಹಿರಿಯೂರು, ಚಿತ್ರದುರ್ಗ, ಚಳ್ಳಕೆರೆ, ಸೇರಿದಂತೆ ಹಲವೆಡೆಗೆ ಕುಡಿಯೋಕೆ ಸರಬರಾಜು ಮಾಡೋಕು ಕಷ್ಟದ ಪರಿಸ್ಥಿತಿಯನ್ನ ಜಿಲ್ಲೆಯ ಜನರು ಅನುಭವಿಸಿದ್ದಾರೆ. ಅಷ್ಟೆ ಅಲ್ಲದೇ ವಿವಿ ಸಾಗರ ಡ್ಯಾಂನಲ್ಲಿ ನೀರು ಕಡಿಮೆ ಆಗುತ್ತಿದ್ದಂತೆ ಇದರ ವ್ಯಾಪ್ತಿಯ ಎಲ್ಲಾ ಹಳ್ಳಿಗಳಲ್ಲೂ ಅಂತರ್ಜಲ ಮಟ್ಟ ಕಡಿಮೆ ಆಗಿ ಬೋರ್​ವೆಲ್​ಗಳಲ್ಲಿ ನೀರು ಬಾರದದೇ ರೈತರು ಕಂಗಾಲಾಗಿದ್ದರು.

Related