ಮುಡಾ ಸೈಟ್​ ಪಡೆದವರಿಗೆ ಫುಲ್ ಟೆನ್ಷನ್! ​

ಮುಡಾ ಸೈಟ್​ ಪಡೆದವರಿಗೆ ಫುಲ್ ಟೆನ್ಷನ್! ​

ಮೈಸೂರು: ಕರ್ನಾಟಕ ರಾಜ್ಯದಲ್ಲಿ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಗಂಭೀರ ಆರೋಪವಾಗಿದ್ದು ಈಗಾಗಲೇ ಇವರ ಮೇಲಿರುವ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ಕೋರ್ಟ್ ನಲ್ಲಿ ಚರ್ಚೆ ನಡೆಯುತ್ತಿದೆ.

ಇನ್ನು ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರ ನಿವೇಶನ ಹಂಚಿಕೆಯಲ್ಲಿ ಹಗರಣಕ್ಕೆ ಇದೀಗ ಮಹಾ ತಿರುವು ಪಡೆದುಕೊಂಡಿದ್ದು ಮುಡಾದಲ್ಲಿ ಸೈಟು ಪಡೆದುಕೊಂಡಿರುವವರಿಗೆ ಈಗ ಢವ ಢವ ಶುರುವಾಗಿದೆ.

ಮುಡಾದಿಂದ ಹಂಚಿಕೆಯಾಗಿದ್ದ ನಿವೇಶನಗಳನ್ನು ರದ್ದುಗೊಳಿಸುವಂತೆ ಬಿಜೆಪಿ ಶಾಸಕ ಬರೆದಿದ್ದ ಪತ್ರಕ್ಕೆ ಸಿಎಂ ಸಿದ್ದರಾಮಯ್ಯ ಅವರು ಸಮ್ಮತಿ ಸೂಚಿಸಿದ್ದಾರೆ. ಇದನ್ನೂ ಓದಿ: ಖರ್ಗೆ ಖಡಕ್​ ಸೂಚನೆ ಡಿಕೆಶಿ ತಮ್ಮ ವರಸೆಯನ್ನೇ ಬದಲಿಸಿದ್ರಾ?

ಮೈಸೂರು ಬಿಜೆಪಿ ಶಾಸಕ ಟಿ.ಎಸ್​ ಶ್ರೀವತ್ಸ್​ 2020ರಲ್ಲಿ 50:50 ಅನುಪಾತದಲ್ಲಿ ಹಂಚಿಕೆಯಾಗಿದ್ದ ಮುಡಾ ನಿವೇಶನಗಳನ್ನು ರದ್ದುಗೊಳಿಸುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು. ಶಾಸಕ ಟಿಎಸ್​ ಶ್ರೀವತ್ಸ್​ ಅವರ ಪತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮ್ಮತಿ ಸೂಚಿಸಿದ್ದಾರೆ. 50:50 ಅನುಪಾತದ ನಿವೇಶನಗಳನ್ನು ಹಿಂಪಡೆಯಲು ಅಗತ್ಯ ಕ್ರಮಕೈಗೊಳ್ಳಿ ಎಂದು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ಲಿಖಿತ ಸೂಚನೆ ನೀಡಿದ್ದಾರೆ. ಇದರಿಂದ 50:50 ಅನುಪಾತದಲ್ಲಿ ನಿವೇಶನ ಪಡೆದವರಿಗೆ ಟೆನ್ಷನ್ ಶುರುವಾಗಿದೆ.

 

Related