ಅಭಿವೃದ್ಧಿ ಕಾಮಗಾರಿಗೆ ಮಾಜಿ ಸಚಿವ ಲಿಂಬಾವಳಿ ಚಾಲನೆ

ಅಭಿವೃದ್ಧಿ ಕಾಮಗಾರಿಗೆ ಮಾಜಿ ಸಚಿವ ಲಿಂಬಾವಳಿ ಚಾಲನೆ

ಕೆಆರ್ ಪುರ-ಶಾಸಕರ ಅನುದಾನ ಹಾಗು ಹುವಯ್ ಕಂಪನಿಯ ಸಹಭಾಗಿತ್ವದಲ್ಲಿ ಅವಶ್ಯಕತೆಯಿರುವ ಕಡೆ ಶುದ್ದ ಕುಡಿಯುವ ನೀರಿನ ಘಟಕ ಆರಂಭಿಸಲಾಗುವುದು ಎಂದು ಮಾಜಿ ಅರಣ್ಯ ಹಾಗು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.
ಕ್ಷೇತ್ರದ ವರ್ತೂರು, ಹಗದೂರು, ಕಾಡುಗೂಡಿ ಹೂಡಿ ಹಾಗು ಗರುಡಾಚಾರ್ ಪಾಳ್ಯ ವಾರ್ಡ್ ಗಳ ರಸ್ತೆ ಹಾಗು ಚರಂಡಿ ಅಭಿವೃದ್ಧಿ ಕಾಮಗಾರಿ ಚಾಲನೆ ನೀಡಿ ಮಾತನಾಡಿದರು. ಕ್ಷೇತ್ರದಲ್ಲಿ ಮಳೆಯಿಂದ ಸಂಭವಿಸಬಹುದಾದ ತೊಂದರೆಗಳನ್ನು ತಪ್ಪಿಸುವ ಉದ್ದೇಶದಿಂದ ಅವಶ್ಯಕತೆಯಿರುವ ಕಡೆ ರಸ್ತೆ ಮತ್ತು ಚಂರAಡಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು. ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಿಸುವ ಉದ್ದೇಶದಿಂದ ಶಾಸಕರ ಅನುದಾನ ಹಾಗು ಹುವಾಯ್ ಕಂಪನಿಯ ಸಹಯೋಗದಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಆರಂಭಿಸಲು ಭೂಮಿ ಪೂಜೆ ಮಾಡಲಾಯಿತು ಎಂದರು.
ಕ್ಷೇತ್ರದ ಬಹುತೇಕ ಭಾಗದಲ್ಲಿ ಈಗಾಗಲೆ ಕುಡಿಯುವ ನೀರಿನ ಘಟಕ ಆರಂಭಿಸಿದ್ದು ಉಳಿಕೆಯಿರುವ ಕಡೆ ಕಾಮಗಾರಿ ಆರಂಭಿಸಲಾಗುವುದು ಎಂದ್ದು ಮನೆಗಳಿಗೆ ಮಳೆ ನೀರು ನುಗ್ಗದಂತೆ ಕ್ರಮ ವಹಿಸಲು ಹಾಗೂ ಚರಂಡಿ ಮತ್ತು ರಾಜಕಾಲುವೆಗಳಲ್ಲಿ ಸರಾಗವಾಗಿ ನೀರು ಹರಿಯಲು ಅಭಿವೃದ್ಧಿ ಪಡಿಸಲು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. ಮಳೆಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ಕಾಮಗಾರಿ ತ್ವರಿತವಾಗಿ, ಗುಣಮಟ್ಟದಿಂದ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ಅದ್ಯಕ್ಷ ಮನೋಹರ ರೆಡ್ಡಿ, ಮಾಜಿ ಪಾಲಿಕೆ ಸದಸ್ಯರಾದ ನಿತೀಶ್ ಪುರುಷೋತ್ತಮ್, ಶ್ರೀನಿವಾಸ, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಗಳಾದ ಹೂಡಿ ಪಿಳ್ಳಪ್ಪ, ರಾಜೇಶ್, ಮುಖಂಡರಾದ ರಾಜಾರೆಡ್ಡಿ, ಜಯಚಂದ್ರಾರೆಡ್ಡಿ, ಅನಂತರಾಮಯ್ಯ, ಮಹೇಂದ್ರ ಮೋದಿ, ರಾಮು, ಇ.ಇ.ಮುನಿರೆಡ್ಡಿ ಸೇರಿದಂತೆ ಇನ್ನಿತರರು ಇದ್ದರು.

Related