ಲಕ್ಷ್ಮಿ ಹೆಬ್ಬಾಳ್ಕರ್ ಗೆ ಭರ್ಜರಿ ಗೆಲುವು

ಲಕ್ಷ್ಮಿ ಹೆಬ್ಬಾಳ್ಕರ್ ಗೆ ಭರ್ಜರಿ ಗೆಲುವು

ಬೆಳಗಾವಿ: ಬೆಳಗಾವಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ನಡುವೆ ಭರ್ಜರಿ ಪೈಪೋಟಿ ನಡೆದಿದ್ದು, ಇದರಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಲಕ್ಷ್ಮಿ ಹೆಬ್ಬಾಳ್ಕರ್ ಗೆದ್ದು ನಗೆ ಬೀರಿದ್ದಾರೆ.

ಬೆಳಗಾವಿ ಗ್ರಾಮೀಣ ಕಾಂಗ್ರೆಸ್ ಪಕ್ಷದ  ಲಕ್ಷ್ಮಿ ಹೆಬ್ಬಾಳ್ಕರ್ ಗೆಲುವು ಸಾಧಿಸಿದ್ದಾರೆ. ಬೆಳಗಾವಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಪಕ್ಷಗಳ ನಡುವೆ ನೇರ ಹಣಾಹಣಿಯಿದ್ದು, ಕಾಂಗ್ರೆಸ್ ಅಭ್ಯರ್ಥಿಯಾಗಿ ಲಕ್ಷ್ಮಿ ರವೀಂದ್ರ ಹೆಬ್ಬಾಳ್ಕರ್, ಬಿಜೆಪಿಯ ನಾಗೇಶ್ ಮನೋಲ್ಕರ್ ಮತ್ತು ಜೆಡಿಎಸ್ ಪಕ್ಷದ ಶಂಕರಗೌಡ ರುದ್ರಗೌಡ ಪಾಟೀಲ್ ಚುನಾವಣಾ ಕಣದಲ್ಲಿದ್ದರು.

2008ರಲ್ಲಿ ಸಂಜಯ್ ಬಿ ಪಾಟೀಲ್ ಮೂಲಕ ಬಿಜೆಪಿ ಇಲ್ಲಿ ಖಾತೆ ತೆರೆದಿತ್ತು. 2013ರ ಚುನಾವಣೆಯಲ್ಲಿ ವರ್ಚಸ್ಸು ಕಡಿಮೆಯಾದರೂ ಸಂಜಯ್ ಮತ್ತೊಮ್ಮೆ ಗೆದ್ದು ಬಂದರು. 2018ರಲ್ಲಿ ಕಾಂಗ್ರೆಸ್‌ನ ಲಕ್ಷ್ಮಿ ಹೆಬ್ಬಾಳ್ಕರ್ ಬರೋಬ್ಬರಿ 51,724 ಮತಗಳ ಅಂತರದಿಂದ ಸಂಜಯ್ ಬಿ ಪಾಟೀಲರನ್ನು ಸೋಲಿಸಿ, ಬಿಜೆಪಿ ಪ್ರಾಬಲ್ಯವಿರುವಲ್ಲಿ ಕಾಂಗ್ರೆಸ್ ಪತಾಕೆ ಹಾರಿಸಿದ್ದರು.

 

 

Related