ದರ್ಗಾ ಕಾಣಿಕೆ ಹುಂಡಿಗೆ ಬೆಂಕಿ, ನೋಟುಗಳು ಭಸ್ಮ

ದರ್ಗಾ ಕಾಣಿಕೆ ಹುಂಡಿಗೆ ಬೆಂಕಿ, ನೋಟುಗಳು ಭಸ್ಮ

ದಾವಣಗೆರೆ : ತಾಲೂಕಿನ ದೊಡ್ಡಬಾತಿ ಗ್ರಾಮದ ದರ್ಗಾದಲ್ಲಿ ಕಾಣಿಕೆ ಹುಂಡಿಗೆ ಬೆಂಕಿ ಬಿದ್ದು ಅದರಲ್ಲಿ ಸಂಗ್ರಹವಾಗಿದ್ದ ಲಕ್ಷಾಂತರ ರೂಪಾಯಿ ನೋಟುಗಳು ಸುಟ್ಟು ಕರಕಲಾಗಿರುವ ಫಟನೆ ನಡೆದಿದೆ.

2 ಸಾವಿರ, 500, 200, 100 ಸೇರಿದಂತೆ ನಾನಾ ಮುಖಬೆಲೆಯ ನೋಟುಗಳು ಸುಟ್ಟು ಹೋಗಿವೆ. ಹುಂಡಿಯಿಂದ ಬೆಂಕಿ ಬರುತ್ತಿರುವುದನ್ನು ದರ್ಗಾದ ಸಿಬ್ಬಂದಿ, ಭಕ್ತರು ಗಮನಿಸಿದ್ದಾರೆ. ತಕ್ಷಣ ನೀರು ಹಾಕಿ ಬೆಂಕಿ ನಂದಿಸಿದ್ದಾರೆ.

ಬೆಂಕಿ ಬಿದ್ದ ಕುರಿತು ತಕ್ಷಣವೇ ವಕ್ಫ್ ಮಂಡಳಿ ಹಾಗೂ ಪೊಲೀಸರು ಮಾಹಿತಿ ರವಾನೆ ಮಾಡಲಾಗಿದೆ. ಹುಂಡಿಯಲ್ಲಿದ್ದ ಅರೆಬರೆ ಸುಟ್ಟಿದ್ದ ನೋಟುಗಳನ್ನು ದರ್ಗಾ ಸಿಬ್ಬಂದಿ ಜೊತೆಗೂಡಿ ಬೇರ್ಪಡಿಸಲಾಗಿದೆ. ಹುಂಡಿಯಲ್ಲಿದ್ದ ಹಣವನ್ನು ಎಣಿಕೆ ಮಾಡಲಾಗುತ್ತಿದೆ.

ದರ್ಗಾದಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ದಾವಣಗೆರೆ ಗ್ರಾಮಾಂತರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ತಹಶೀಲ್ದಾರ್ ಬಿ. ಎನ್. ಗಿರೀಶ್ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Related