ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಹಬ್ಬವನ್ನ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು ಈ ಬಾರಿಯೂ ಕೂಡ ಮೈಸೂರು ದಸರಾದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಹಲವಾರು ರೀತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ನಾಡ ಹಬ್ಬ ಮೈಸೂರು ದಸರಾ ಪ್ರತಿಯೊಬ್ಬರ ಬಾಳಲ್ಲಿ ಧೈರ್ಯ, ಶಕ್ತಿ ತುಂಬಲಿ ಎಂದು ಅಶ್ವಿನಿ ಪುನೀತ್ ರಾಜಕುಮಾರ್ ಅವರು ಹೇಳಿದ್ದಾರೆ. ಇದನ್ನೂ ಓದಿ: ದಸರಾ ಪೂಜೆಯಲ್ಲಿ ಕುಡಿದು ಕುಪ್ಪಳಿಸಿದ ಮಹಿಳೆಯರು..!
ಮೈಸೂರು ದಸರಾ ಅಂಗವಾಗಿ ಮೈಸೂರು ನಗರ ಹೊರವಲಯ ಉತ್ತನಹಳ್ಳಿಯಲ್ಲಿ ಆಯೋಜಿಸಿದ ಯುವ ದಸರಾ ಕಾರ್ಯಕ್ರಮವನ್ನು ಕನ್ನಡ ಚಲಚಿತ್ರ ನಿರ್ಮಾಪಕರಾದ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಉದ್ಘಾಟಿಸಿ ಮಾತನಾಡಿ ಅವರು, ಮೈಸೂರು ದಸರಾ ಇತಿಹಾಸವನ್ನು ಸಾರುವ ಹಬ್ಬ. ಈ ಹಬ್ಬವನ್ನು ವಿವಿಧ ರೀತಿಯಲ್ಲಿ ಆಚರಿಸಲಾಗುತ್ತದೆ, ಈ ಹಬ್ಬವು ಕರ್ನಾಟಕ ಹಾಗೂ ಮೈಸೂರಿಗೆ ಹೆಚ್ಚಿನ ಮೆರಗನ್ನು ನೀಡುವ ಹಬ್ಬವಾಗಿದೆ. ಇದು ನಮ್ಮ ನಾಡ ಹಬ್ಬ ಈ ಹಬ್ಬವು ಪ್ರತಿಯೊಬ್ಬರಿಗೂ ಧೈರ್ಯ, ಶಕ್ತಿ, ಭಕ್ತಿಯನ್ನು ತೋರುತ್ತದೆ ಎಂದು ತಿಳಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಕೂಡ ಧನ್ಯವಾದಗಳನ್ನು ಅರ್ಪಿಸಿದರು.