ಮೈಸೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರು ತಿಂಗಳಿನಿಂದ ಜೈಲು ಸೆರೆವಾಸ ಅನುಭವಿಸಿ ಬೆಲ್ ಮೇಲೆ ಹೊರಬಂದಿರುವ ನಟ ದರ್ಶನ್ ಅವರು ಇದೀಗ ಮೈಸೂರಿನಲ್ಲಿರುವ ತಮ್ಮ ಫಾರಂ ಹೌಸ್ ಅಲ್ಲಿ ಫುಲ್ ರಿಲ್ಯಾಕ್ಸ್ ಮೂಡಲ್ಲಿ ಇದ್ದಾರೆ.
ಇನ್ನು ತಮ್ಮ ಫಾರಂ ಹೌಸ್ ನಲ್ಲಿ ರೆಸ್ಟ್ ತೆಗೆದುಕೊಳ್ಳುತ್ತಿರುವ ನಟ ದರ್ಶನ್ ಅವರಿಗೆ ಮತ್ತೆ ಇದೀಗ ಬೆನ್ನು ನೋವು ಕಾಣಿಸಿಕೊಂಡಿರುವುದರಿಂದ ಮೈಸೂರಿನಲ್ಲಿರುವ ಕಾಮಾಕ್ಷಿ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆಯಲು ಮುಂದಾಗಿದ್ದಾರೆ.
ಆಸ್ಪತ್ರೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನಟ ದರ್ಶನ್ ಅವರ ಅಭಿಮಾನಿಗಳು ದರ್ಶನ್ ಜೊತೆ ಫೋಟೋ ತೆಗೆದುಕೊಳ್ಳಲು ನಾ ಮುಂದು ತಾ ಮುಂದು ಎಂದು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ದರ್ಶನ್ ಗೆ ಬೆಲ್ ಸಿಗುತ್ತಿದ್ದಂತೆ ಬೆನ್ನು ನೋವೇ ಮಾಯ!
ಒಟ್ಟಿನಲ್ಲಿ ಅದೇನೆ ಆಗಲಿ ಜೈಲು ಸೆರೆವಾಸ ಅನುಭವಿಸಿ ಬಂದರೂ ಕೂಡ ನಟನ ಮೇಲಿರುವ ಅಭಿಮಾನ ಮಾತ್ರ ಕಡಿಮೆಯಾಗಿಲ್ಲ.