ನಕಲಿ ಸಿಮ್ ಕಾರ್ಡ್ಸ್, ಬ್ಯಾಂಕ್ ಅಕೌಂಟ್ಗಳನ್ನು ಸೃಷ್ಟಿಸಿ ವಂಚಿಸುತ್ತಿದ್ದ ಆರೋಪಿಯ ಬಂಧನ..!!

ನಕಲಿ ಸಿಮ್ ಕಾರ್ಡ್ಸ್, ಬ್ಯಾಂಕ್ ಅಕೌಂಟ್ಗಳನ್ನು ಸೃಷ್ಟಿಸಿ ವಂಚಿಸುತ್ತಿದ್ದ ಆರೋಪಿಯ ಬಂಧನ..!!

ಬೆಂಗಳೂರು, ಜೂ 24 : ಈಶಾನ್ಯ ವಿಭಾಗದ ಸೈಬರ್ ಕ್ರೈಮ್​ ಪೊಲೀಸರು ಕಾರ್ಯಾಚರಣೆ ನಡೆಸಿ ನಕಲಿ ಸಿಮ್ ಮತ್ತು ನಕಲಿ ಬ್ಯಾಂಕ್ ಅಕೌಂಟ್ ಸೃಷ್ಟಿಸಿ ವಂಚಿಸುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ.

ತ್ರಿಪುರ ಮೂಲದ ಮೋನಿಕುಮಾರ್ ಬಂಧಿತ ಆರೋಪಿ. ಬಂಧಿತನಿಂದ ಒಂದು ಮೊಬೈಲ್, 2 ಸಿಮ್ ಕಾರ್ಡ್ ಜಪ್ತಿಪಡಿಸಿಕೊಳ್ಳಲಾಗಿದೆ. ಈತ ಬುಡಕಟ್ಟು ಜನಾಂಗದವರಿಗೆ ಹಣ ಕೊಟ್ಟು ಅವರ ಹೆಸರಲ್ಲಿ ಸಿಮ್ಕಾರ್ಡ್, ಅಕೌಂಟ್ ಮಾಡಿಸುತ್ತಿದ್ದ. ಅವರಿಗೆ 2 ರಿಂದ 3ಸಾವಿರ ಹಣ ನೀಡಿ, ಸಿಮ್ಕಾರ್ಡ್ ಮತ್ತು ಬ್ಯಾಂಕ್ ಖಾತೆ ಮಾಡಿಸುತ್ತಿದ್ದ. ನಂತರ ಅವುಗಳನ್ನು ತೆಗೆದುಕೊಂಡು ಬಂದು ಬೆಂಗಳೂರಿನಲ್ಲಿವಾಸಿಸುತ್ತಿರುವ ದಕ್ಷಿಣ ಆಫ್ರಿಕಾಮೂಲದ ವ್ಯಕ್ತಿಗಳಿಗೆ ಮಾರುತ್ತಿದ್ದ.

ವಿದೇಶಿ ಪ್ರಜೆಗಳಿಗೆ ಸಿಮ್ ಕಾರ್ಡ್, ಬ್ಯಾಂಕ್ ಅಕೌಂಟ್ ನೀಡಿ ಹೆಚ್ಚಿನ ಹಣ ಸಂಪಾದಿಸುತ್ತಿದ್ದ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಈ ಸಂಬಂಧ ಈಶಾನ್ಯ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related