ಬೆಂಗ್ಳೂರಿನ ನಕಲಿ ಸ್ವಾಮೀಜಿಯ ಕಾಮಪುರಾಣ ಬಹಿರಂಗ..

  • In Crime
  • August 23, 2022
  • 134 Views
ಬೆಂಗ್ಳೂರಿನ ನಕಲಿ ಸ್ವಾಮೀಜಿಯ ಕಾಮಪುರಾಣ ಬಹಿರಂಗ..

ಬೆಂಗಳೂರು, ಆ 23: ಕಳೆದ 7 ವರ್ಷಗಳಿಂದ ಯುವತಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿ, ನಂತರ ‘ನೀನು ಮದುವೆಯಾಗಿ ಚೆನ್ನಾಗಿರು’ ಎಂದು ಹೇಳಿ ಇದೀಗ ಮದುವೆ ನಿಶ್ಚಿಯವಾಗಿದ್ದ ಮತ್ತೆ ಕಿರುಕುಳ ನೀಡಲು ಆರಂಭಿಸಿದ್ದಾನೆ. ಅಲ್ಲದೇ ಕಪಟ ಸ್ವಾಮೀಜಿಯ ಕಾಮಪುರಾಣಕ್ಕೆ ಆತನ ಪತ್ನಿಯೂ ಸಾಥ್ ನೀಡಿದ್ದಾರೆ ಎನ್ನಲಾಗುತ್ತಿದ್ದು, ಸ್ವಂತ ಪತ್ನಿಗೆ ‘ನಾನು ಶ್ರೀ ಕೃಷ್ಣ ನೀನು ರಾಧೆ ಇವಳು ರುಕ್ಮಿಣಿ ಎಂದು ಯುವತಿಯನ್ನ ಪರಿಚಯ ಮಾಡಿಕೊಟ್ಟಿದ್ದನು.

ಆರೋಪಿಯನ್ನು ಆನಂದ ಮೂರ್ತಿ ಎಂದು ಗುರುತಿಸಲಾಗಿದ್ದು, ಅವಲಹಳ್ಳಿ ಸಮೀಪ ಆಶ್ರಮ, ಮನೆ ಹೊಂದಿದ್ದಾನೆ. 7 ವರ್ಷಗಳ ಹಿಂದೆ ಸಂತ್ರಸ್ತ ಯುವತಿಗೆ ಕಪಟ ಸ್ವಾಮೀಜಿಯ ಪರಿಚಯವಾಗಿದ್ದು, ನಿನಗೂ ಹಾಗೂ ನಿನ್ನ ಕುಟುಂಬಕ್ಕೆ ದೋಷವಿದೆ. ಹೀಗಾಗಿ ಪೂಜೆ ಮಾಡಬೇಕು ಎಂದು ಆಶ್ರಮಕ್ಕೆ ಯುವತಿಯನ್ನು ಕರೆಸಿಕೊಂಡಿದ್ದನು. ಈ ವೇಳೆ ಯುವತಿಗೆ ಮತ್ತು ಬರುವ ಔಷಧ ನೀಡಿ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಆನಂದಮೂರ್ತಿಯ ಕುಕೃತ್ಯ ತಿಳಿದು ಯುವತಿಯ ಪೋಷಕರು ಕಂಗಾಲಾಗಿದ್ದು, ಇದೀಗ ಕೆ.ಆರ್.ಪುರಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Related