ಸಿದ್ದಗಂಗಾ ಶ್ರೀಗಳ ಭೇಟಿ ಮಾಡಿದ ದುನಿಯಾ ವಿಜಯ್

ಸಿದ್ದಗಂಗಾ ಶ್ರೀಗಳ ಭೇಟಿ ಮಾಡಿದ ದುನಿಯಾ ವಿಜಯ್

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ದುನಿಯಾ ವಿಜಯ್ ಅವರು ತಮ್ಮದೇ ಆದ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ.

ಇನ್ನು ದುನಿಯಾ ವಿಜಯ್ ನಟನೆ ಮತ್ತು ನಿರ್ದೇಶನ ಮಾಡಿರುವ ಭೀಮ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು ಇನ್ನೇನು ಕೆಲವೇ ದಿನಗಳಲ್ಲಿ ತೆರೆ ಮೇಲೆ ಅಪ್ಪಳಿಸಲಿದೆ. ಭೀಮ ಸಿನಿಮಾ ನೋಡಲು ಕರಿ ಚಿರತೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಇನ್ನು ನಟ ದುನಿಯಾ ವಿಜಯ್ ಅವರು ಶ್ರೀ ಸಿದ್ಧಗಂಗಾ ಮಠದ ಸ್ವಾಮೀಜಿ ಗಳನ್ನು ಭೇಟಿ ಮಾಡಿ ಶ್ರೀಗಳ ಆಶೀರ್ವಾದ ಪಡೆದುಕೊಂಡಿದ್ದಾರೆ.

ಹೌದು, ನಟ ದುನಿಯಾ ವಿಜಯ್ ನಟಿಸಿ, ನಿರ್ದೇಶನ ಮಾಡಿರುವ ‘ಭೀಮ’ ಸಿನಿಮಾ ಕೆಲವೇ ದಿನಗಳಲ್ಲಿ ತೆರೆ ಮೇಲೆ ಅಪ್ಪಳಿಸಲಿದೆ. ಈ ಹಿನ್ನೆಲೆಯಲ್ಲಿ ವಿಜಯ್ ಅವರು ಮತ್ತು ‘ಭೀಮ’ ಸಿನಿಮಾ ತಂಡದವರು ಇಂದು (ಶುಕ್ರವಾರ ಆಗಸ್ಟ್ 2) ರಂದು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದಾರೆ. ಸಿದ್ದಗಂಗಾ ಶ್ರೀಗಳ ಗದ್ದುಗೆಗೆ ಭೇಟಿ ನೀಡಿದ ನಟ ದುನಿಯಾ ವಿಜಯ್, ಗದ್ದುಗೆಗೆ ನಮಸ್ಕರಿಸಿದ ಬಳಿಕ ಮಠಕ್ಕೆ ತೆರಳಿ ಶ್ರೀಗಳನ್ನು ಭೇಟಿ ಮಾಡಿ ಕೆಲ ಹೊತ್ತು ಮಾತನಾಡಿದರು. ಇದನ್ನೂ ಓದಿ: ಖಡಕ್ ಲುಕ್ಕಿನಲ್ಲಿ ಮತ್ತೆ ಕನ್ನಡಕ್ಕೆ ಎಂಟ್ರಿ ಕೊಟ್ಟ ಸಂಜಯ್ ದತ್

ಭೀಮ ಸಿನಿಮಾ ನೀಡುತ್ತಿರುವ ಸಂದೇಶವನ್ನು ಶ್ರೀಗಳಿಗೆ ದುನಿಯಾ ವಿಜಯ್ ವಿವರಿಸಿದರು. ಈ ಸಿನಿಮಾ ಸಾಮಾಜಿಕ ಕಾಳಜಿ ಇರೋ ಚಿತ್ರ ಇದಾಗಿದ್ದು ಪ್ರತಿಯೊಬ್ಬರು ನೋಡಲೇ ಬೇಕೆಂದು ಶ್ರೀಗಳು ಹೇಳಿದರು.

ದುನಿಯಾ ವಿಜಯ್ ನಟಿಸಿ ನಿರ್ದೇಶನ ಮಾಡಿರುವ 2ನೇ ಸಿನಿಮಾ ‘ಭೀಮ. ಈ ಮೊದಲು ‘ಸಲಗ’ ಸಿನಿಮಾವನ್ನು ದುನಿಯಾ ವಿಜಯ್ ನಿರ್ದೇಶನ ಮಾಡಿದ್ದರು. ಭೀಮ ಸಿನಿಮಾ ಆಗಸ್ಟ್ 9 ರಂದು ಬಿಡುಗಡೆ ಆಗುತ್ತಿದೆ. ಸಿನಿಮಾದ ಕೆಲ ಹಾಡುಗಳು ಈಗಾಗಲೇ ಬಿಡುಗಡೆ ಆಗಿದ್ದು, ಸಖತ್ ಟ್ರೆಂಡ್ ಕ್ರಿಯೇಟ್ ಮಾಡಿವೆ.

ಇದರ ಜೊತೆಗೆ ಇದೀಗ  ಭೀಮ ಸಿನಿಮಾದ ಟ್ರೈಲರ್ ಕೂಡ ಇದೆ ಆಗಸ್ಟ್ 03 ರಂದು ಬಿಡುಗಡೆಯಾಗುತ್ತಿದ್ದು ಕರಿ ಚಿರತೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಈಗಾಗಲೇ ಹಾಡುಗಳ ಮೂಲಕವೇ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿರುವ ಭೀಮ ಸಿನಿಮಾ ಇನ್ನೇನು ಕೆಲವೇ ದಿನಗಳಲ್ಲಿ ತೆರೆ ಮೇಲೆ ಅಪ್ಪಳಿಸಲಿದೆ.

Related