ಮಗಳಿಗೆ ದುಬಾರಿ ಗಿಫ್ಟ್ ಕೊಟ್ಟ ದುನಿಯಾ ವಿಜಯ್..!

  • In Cinema
  • August 17, 2022
  • 121 Views
ಮಗಳಿಗೆ ದುಬಾರಿ ಗಿಫ್ಟ್ ಕೊಟ್ಟ ದುನಿಯಾ ವಿಜಯ್..!

ಚಂದನವನದ ಬ್ಲ್ಯಾಕ್ ಕೋಬ್ರಾ ಮತ್ತೆ ಸುದ್ದಿಯಲ್ಲಿದ್ದಾರೆ. ಸಲಗ ಚಿತ್ರದ ಸಕ್ಸಸ್ ನಂತರ ಮತ್ತೆ ಕೌಟುಂಬಿಕ ವಿಚಾರವಾಗಿ ಸದ್ದು ಮಾಡ್ತಿದ್ದಾರೆ. ತಮ್ಮ ಮುದ್ದು ಮಗಳು ಮೋನಿಕಾ ಅವರಿಗೆ ಭರ್ಜರಿ ಗಿಫ್ಟ್ ನೀಡಿ, ನೆಟ್ಟಿಗರ ಗಮನ ಸೆಳೆದಿದ್ದಾರೆ.

ದುನಿಯಾ ವಿಜಯ್ `ಸಲಗ’ ಚಿತ್ರದ ಮೂಲಕ ನಟನಾಗಿ ಮಾತ್ರವಲ್ಲ, ನಿರ್ದೇಶಕನಾಗಿಯೂ ಕೂಡ ಸಕ್ಸಸ್ ಕಂಡವರು. ಇದೀಗ ಭೀಮ ಚಿತ್ರದ ಜತೆಗೆ ಟಾಲಿವುಡ್ ಅಖಾಡದಲ್ಲೂ ವಿಜಯ್ ಸೌಂಡ್ ಮಾಡ್ತಿದ್ದಾರೆ. ಈಗ ಮಗಳು ಮೋನಿಕಾ ಹುಟ್ಟುಹಬ್ಬಕ್ಕೆ ದುಬಾರಿ ಕಾರೋಂದನ್ನ ಗಿಫ್ಟ್ ನೀಡಿದ್ದಾರೆ.

ಕುಟುಂಬದಲ್ಲಿ ಅದೇನೇ ಸಮಸ್ಯೆ ಇದ್ದರು ಮಕ್ಕಳ ಪಾಲಿಗೆ ಬೆಸ್ಟ್ ಅಪ್ಪನಾಗಿ, ಮಕ್ಕಳ ಖುಷಿಗೆ ವಿಜಯ್ ಶ್ರಮಿಸುತ್ತಿದ್ದಾರೆ. 3 ಮಕ್ಕಳ ತಂದೆಯಾಗಿರುವ ವಿಜಯ್ ಈಗ ವೈಯಕ್ತಿಕ ವಿಚಾರವಾಗಿ ನೆಟ್ಟಿಗರ ಗಮನ ಸೆಳೆದಿದ್ದಾರೆ.

ಮಗಳು ಮೋನಿಕಾ ಹುಟ್ಟುಹಬ್ಬಕ್ಕೆ ದುಬಾರಿ ಕಾರು ಗಿಫ್ಟ್ ಮಾಡಿ, ಮುದ್ದು ಮಗಳ ಖುಷಿಗೆ ವಿಜಯ್ ಪಾತ್ರರಾಗಿದ್ದಾರೆ. ಅಪ್ಪ ಮತ್ತು ಕಾರಿನ ಜತೆಯಿರುವ ಫೋಟೋವನ್ನ ಮೋನಿಕಾ ಶೇರ್ ಮಾಡಿ, ಲವ್ ಯೂ ಅಪ್ಪ ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Related