ಡಾ. ಬಿಆರ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನಾಚರಣೆ

ಡಾ. ಬಿಆರ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನಾಚರಣೆ

ಹಟ್ಟಿಚಿನ್ನದಗಣಿ : ಸೋಮವಾರ ರಂದು ಪಟ್ಟಣದ ಸ್ಮಶಾನ ಭೂಮಿಯಲ್ಲಿ ಡಾ. ಬಿಆರ್ ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಮೌಡ್ಯ ವಿರೋಧಿ ವೈಚಾರಿಕ ಪ್ರಜ್ಞೆಯೊಂದಿಗೆ ಸಾಮಾಜಿಕ ಪರಿವರ್ತನೆ ಕಾರ್ಯಕ್ರಮ ಆಯೋಜಿಸಿ ಗೌರವ ಪೂರ್ವ ಪುಷ್ಪ ನಮನ ಸಲ್ಲಿಸಿದರು.

ಈ ಜ್ರಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ದಸಂಸ ಮುಖಂಡ ನಿಂಗಪ್ಪ ಪರಂಗಿಯವರು ಡಾ. ಬಿ.ಆರ್ ಅಂಬೇಡ್ಕರ್ ಅವರು ಈ ದೇಶದ ಶೋಷಿತ ಸಮುದಾಯಗಳ ಬಡವರ, ಮಹಿಳೆಯರ ಬದುಕಿನಲ್ಲಿ ಸ್ವಾಭಿಮಾನದ ಬೆಳಕು ತುಂಬಿದವರು.

ಈ ದೇಶಕ್ಕೆ ಬೃಹತ್ತಾದ ಸಂವಿಧಾನವನ್ನು ಕೊಟ್ಟವರು. ಸ್ವಾತಂತ್ರ, ಸಮಾನತೆ, ಸೋದರತೆ, ಸಹಬಾಳ್ವೆ ಮತ್ತು ಸಾಮಾಜಿಕ ನ್ಯಾಯ ಎಂಬ ಸಂವಿಧಾನದ ಆಶಯಗಳ ಮೂಲಕ ಸದೃಢ ಭಾರತ ನಿರ್ಮಾಣದ ಕನಸು ಕಂಡವರು.

ಅವರ ಈ ಕನಸುಗಳನ್ನು ಮತ್ತು ಆಶಯಗಳನ್ನು ನಾಶ ಮಾಡುವ ಪ್ರಯತ್ನವನ್ನು ಮನುವಾದಿಗಳು ಮತ್ತು ಲಾಭಕೋರ ಕಾರ್ಪೊರೇಟ್ ಶಕ್ತಿಗಳು ಸಂಸ್ಕೃತಿ, ಧರ್ಮ-ದೇವರು ಜಾತಿ ಮೌಢ್ಯ ಮತ್ತು ಕಂದಾಚಾರ ಹೆಸರಿನಲ್ಲಿ ಜನರ ಶೋಷಣೆ ಮಾಡುವಲ್ಲಿ ಈ ಶಕ್ತಿಗಳು ಕಾರ್ಯ ಪ್ರವೃತ್ತರಾಗಿ ಶೋಷಿತ ಸಮುದಾಯಗಳನ್ನು ಸಾಮಾಜಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಮೂಲೆಗುಂಪು ಮಾಡುವ ಉನ್ನಾರ ಮುಂದುವರೆದಿದೆ.
ಯುವ ಮುಖಂಡ ವಿಜಯಕುಮಾರ್ ಮಾತನಾಡಿ, ಇಂದಿನ ನಮ್ಮ ಸಮಾಜ ಅನೇಕ ರೀತಿ ತಾರತಮ್ಯಗಳು ಮತ್ತು ಶೋಷಣೆಗಳಿಂದ ಒಳಗಾಗಿದೆ.

ಸಂವಿಧಾನದ ಪೀಠಿಕೆಯಲ್ಲಿ ಹೇಳಿರುವ ಸಮಾಜವಾದ ಜಾತ್ಯಾತೀತತೆ ಮತ್ತು ಒಕ್ಕೂಟದ ವ್ಯವಸ್ಥೆಯ ಆಶಯಗಳನ್ನೇ ಮೇಲೆ ಪದೇಪದೇ ದಾಳಿಗಳು ನಡೆಯುತ್ತಿವೆ ಸ್ವಾತಂತ್ರ‍್ಯ, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಆಶಯಗಳನ್ನು ದುರ್ಬಲಗೊಳಿಸುವ ಶಕ್ತಿಗಳು, ತಮ್ಮ ಮನುವಾದಿ ಕಾರ್ಯಸೂಚಿಯನ್ನು ವ್ಯವಸ್ಥಿತವಾಗಿ ಜಾರಿಗೊಳಿಸುವ ಪ್ರಯತ್ನ ಮಾಡುತ್ತಿದೆ. ಧರ್ಮ ರಾಜಕಾರಣ ಮತ್ತು ಬಂಡವಾಳಶಾಹಿ ವ್ಯವಸ್ಥೆಗಳ ನಡುವಿನ ಅನೈತಿಕ ಮೈತ್ರಿ ದೇಶದ ಸಹಬಾಳ್ವೆ ಮತ್ತು ಸಹಿಷ್ಣುತೆಯ ಧೀಮಂತರ ಪರಂಪರೆಯನ್ನು ನಾಶಮಾಡುತ್ತಿದೆ.

ಇಂತಹ ಕಾಲಘಟ್ಟದಲ್ಲಿ ಶೋಷಿತ ಸಮುದಾಯಗಳಲ್ಲಿ ಅದರಲ್ಲೂ ಪ್ರಮುಖವಾಗಿ ಯುವ ಜನರಲ್ಲಿ ವೈಚಾರಿಕ ಪ್ರಜ್ಞೆಯನ್ನು ಮೂಡಿಸುವ ಅನಿವಾರ್ಯತೆ ಕಂಡುಬರುತ್ತಿ, ಈ ಕಾರ್ಯಕ್ರಮವು ನಿರ್ಧರಿಸಿಕೊಂಡು ಆಯೋಜಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ವ್ಯಕ್ತಪಡಿಸಿದರು.
ಅದೇ ರೀತಿಯಾಗಿ ಹಟ್ಟಿ ಪಟ್ಟಣದಲ್ಲಿ ಪ್ರಥಮ ಬಾರಿಗೆ ಮೌಢ್ಯ ವಿರೋಧಿ ಸಂಕಲ್ಪ ದಿನವನ್ನು ಸ್ಮಶಾದಲ್ಲಿ ಮೌಢ್ಯವನ್ನು ಧಿಕ್ಕರಿಸಿ ಸ್ಥಳದಲ್ಲಿ ಅಡುಗೆ ಮಾಡಿ ಆಹಾರ ಸೇವಿಸಲಾಯಿತು.

ಈ ಸಂದರ್ಭದಲ್ಲಿ ಹಿರಿಯ ಮುಂಖಡ ಗುಂಡಪ್ಪ ಗೌಡ ಪೋ. ಪಾ, ಬಿ.ಎಸ್. ಹಾಜಿ. ಆನಂದಪ್ಪ, ಅಮ್ಜದ್ ಶೇಠ್, ಡಾ. ಮೋಸಿನ್, ಚಿನ್ನಪ್ಪ ಕಂದಳ್ಳಿ, ದುರುಗಪ್ಪ ಅಗ್ರಹಾರ, ಶೇಗರನ್ ಪ್ಲಾಜಾ, ಇಸ್ಮ್ಮಾಹಿಲ್ ಕಾದ್ರಿ, ಮೌನೇಶ ಕಾಕನಗರ, ಎಮ್.ಸಿ. ಚಂದ್ರಶೇಖರ್, ರಾಮಾಜೀನಯ್ಯ ಮೌಲಸಾಬ, ರಮೇಶ ವೀರಾಪೂರು ಅನಿಲ್, ಸಿದ್ದು, ಜಯ ಪ್ರಕಾಶ, ಗದ್ಯಪ್ಪ ಚಿತ್ತಾಪೂರು, ಅಮರೇಶ ಆನೆಹೊಸೂರು ಅನಿಲ್ ವೀರಾಪೂರು ಮಲ್ಲಿಕಾರ್ಜುನ ಕಡೆಚುರು, ಸುನಿಲ್, ಲಾಲ್‌ಪೀರ್, ವಿನೋದ್ ಕಮಲದಿನ್ನಿ, ರಾಜಮಹ್ಮದ್, ಸಲ್ಮಾನ್, ಕಾರ್ಯಕ್ರಮ ನಿರುಪಣೆ ಸುರೇಶ ಮಾಚನೂರು, ಸೇರಿದಂತೆ ಇತರರು ಪ್ರಗತಿಪರ ವಿಚಾರವಾದಿಗಳು ಇನ್ನಿತರರಿದ್ದರು.

Related