ಬೆಂಗಳೂರು: ರೋಗಿಯು ಬೀಳುವುದನ್ನು ತಡೆಗಟ್ಟುವ ಸಮಗ್ರ ಸುರಕ್ಷತೆಯ ಮುನ್ನೆಚ್ಚರಿಕಾ ಕ್ರಮ ಅನಾವರಣಗೊಳಿಸಿದ ಡೋಝೀ . ಭಾರತದ ಪ್ರಪ್ರಥಮ ಎಐ-ಆಧಾರಿತ, ರೋಗಿಯ ಸಮೀಪಕ್ಕೆ ಬಾರದೆ ನಿಯಂತ್ರಿಸುವ ಪದ್ಧತಿ (RPM) ಮತ್ತು ಆರಂಭಿಕ ಎಚ್ಚರಿಕೆ ಸಿಸ್ಟಮ್ (EWS) ಆದ ಡೋಝೀ(Dozee), ಆಸ್ಪತ್ರೆಗಳಲ್ಲಿ ರೋಗಿಯ ಸುರಕ್ಷತೆಯನ್ನು ಕ್ರಾಂತಿಕಾರಕಗೊಳಿಸುವ ಗುರಿ ಹೊಂದಿರುವ ತನ್ನ ವಿನೂತನ ರೋಗಿಯ ಸುರಕ್ಷತೆಗಾಗಿ ಬೀಳುವುದನ್ನು ತಡೆಗಟ್ಟುವ ಮುನ್ನೆಚ್ಚರಿಕಾ ಕ್ರಮ (Fall Prevention Alert (FPA)) ಅಂಶದ ಪ್ರಾರಂಭವನ್ನು ಘೋಷಿಸಿತು. ಬೆಂಗಳೂರಿನಲ್ಲಿ ನಡೆದ ಪ್ರತಿಷ್ಠಿತ 11ನೆ ಅಂತರರಾಷ್ಟ್ರೀಯ ಆರೋಗ್ಯ ಸಂವಾದ (International Health Dialogue)ದಲ್ಲಿ ಈ ಅನಾವರಣ ನೆರವೇರಿತು.
ಎಮ್‌ಎಸ್ ರಾಮಯ್ಯ ಹಾಸ್ಪಿಟಲ್‌ನ ಸಮಾಲೋಚಕರಾದ ಡಾ. ಸಂದೀಪ್ ರೆಡ್ಡಿ, ಡೋಝೀದ ಸಿಇಒ ಹಾಗೂ ಸಹಸ್ಥಾಪಕ ಶ್ರೀ ಮುದಿತ್ ದಂಡವತೆ, ಇಸ್ರೋ ದ ಅಧ್ಯಕ್ಷರಾದ ಎಸ್. ಸೋಮನಾಥ್, ಮತ್ತಿತರರು ಉಪಸ್ಥಿತರಿದ್ದರು.