ಶಹಾಪುರ: ಬಿಜೆಪಿಯವರಿಗೆ ಬೇರೆ ಕೆಲಸನೇ ಇಲ್ಲ. ತಮ್ಮ ಹೆಸರು ಪಕ್ಷದ ಪ್ರಚಾರ ಮಾಡಿಸಿಕೊಳ್ಳುವುದಕ್ಕಾಗಿ ಇಂಥ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ದೇಶದಲ್ಲಿ ಮಹಾ ನಾಯಕರ ಫೋಟೋಗಳಿಗೆ ಅವಮಾನ ಮಾಡುವುದು, ಸಂವಿಧಾನ ಸುಡುತ್ತೇವೆ ಎನ್ನುವುದು, ಹೊಸ ಸಂವಿಧಾನ ರಚನೆ ಮಾಡುತ್ತೇವೆ ಎನ್ನುವುದು, ಮುಸ್ಲಿಮರದ ಬಗ್ಗೆ ಮಾತನಾಡುವುದು ಅವರ ಚಾಳಿಯಾಗಿದೆ ಎಂದು ದಲಿತ ಮುಖಂಡ ಹೊನ್ನಪ್ಪ ಗಂಗನಾಳ ಶಹಾಪುರ್ ರವರು ಹೇಳಿದರು.
ಈ ಕುರಿತು ನಗರದಲ್ಲಿ ಮಾತನಾಡಿದ ಅವರು, ಇಂಥವರ ಬಗ್ಗೆ ಪ್ರತಿದಿನಾ ಪತ್ರಿಕೆ-ಟಿವಿಗಳಲ್ಲಿ ನೋಡಿದದೇವೆ. ಹೇಳಿಕೆ ಕೊಡುವುದರಿಂದ ಹೀರೋ ಆಗುತ್ತಾರೆ ಅದಕ್ಕಾಗಿ ಅಂತವರ ಬಗ್ಗೆ ನಾವು ಡೋಂಟ್ ಕೇರ್ ಎನ್ನಬೇಕು ಎಂದರು.