ತರಾತುರಿಯಲ್ಲಿ ರಿಪೇರಿ ಮಾಡೋದಕ್ಕೆ ಹೋಗಿ ಮತ್ತೆ ಏನೇನೋ ಅವಾಂತರ ಮಾಡಬೇಡ: ಹೆಚ್​ಡಿಕೆ

ತರಾತುರಿಯಲ್ಲಿ ರಿಪೇರಿ ಮಾಡೋದಕ್ಕೆ ಹೋಗಿ ಮತ್ತೆ ಏನೇನೋ ಅವಾಂತರ ಮಾಡಬೇಡ: ಹೆಚ್​ಡಿಕೆ

ಬೆಂಗಳೂರು: ತುಂಗಭದ್ರಾ ಜಲಾಶಯ 19ನೇ ಗೇಟ್ ಚೈನ್​ ಲಿಂಕ್ ಕಟ್ಟಾಗಿರುವುದರಿಂದ ಈಗಾಗಲೇ ಹಲವಾರು ರೀತಿ ತೊಂದರೆಯಾಗಿದೆ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಕೊಡುತ್ತಿದ್ದಾರೆ.

ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಚೀಪ್ ಇಂಜಿನಿಯರಿಂಗ್ ಗೆ ಎಷ್ಟು ಫಿಕ್ಸ್ ಮಾಡಿದ್ದೀರಿ ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ‘ಸೇಫ್ಟಿ ಮೆಜಾರಿಟಿ ಕಮಿಟಿಗೆ ಒಂದು ಫಾರ್ಮೇಟ್ ಕೊಟ್ಟಿರುತ್ತಾರೆ. ಪ್ರತಿಯೊಂದು ವಸ್ತುಗಳನ್ನು ಚೆಕ್ ಮಾಡಬೇಕು. ಪ್ರತಿವರ್ಷ ಲೂಬ್ರಿಕೇಷನ್ ಮಾಡಬೇಕಾಗುತ್ತದೆ. ಈ ಹಿನ್ನಲೆ ಕೇಂದ್ರ ಸರ್ಕಾರ 2021 ರಲ್ಲಿ ಹೊಸ ಕಾನೂನು ತಂದರು, ಇದರ ಪ್ರಕಾರ ಕೇಂದ್ರ ಸರ್ಕಾರದಿಂದ ಒಬ್ಬ, ರಾಜ್ಯ ಸರ್ಕಾರದಿಂದ ಒಬ್ಬ ಅಧಿಕಾರಿ ಇರುತ್ತಾರೆ. ಚೀಫ್ ಇಂಜಿನಿಯರ್​ನ ನೇಮಕ ಮಾಡೋಕೆ ಎಷ್ಟೆಷ್ಟು ಫಿಕ್ಸ್ ಮಾಡಿದ್ದಿರಾ ಅದನ್ನ ನಿಲ್ಲಿಸಿ. ಇದನೆಲ್ಲಾ ನಾನು ಅನುಭವಿಸಿದ್ದೇನೆ. ಎಂಡಿ, ಚೀಫ್ ಇಂಜಿನಿಯರ್​ಗೆ ಇಷ್ಟು ಅಂತಾ ಫಿಕ್ಸ್ ಮಾಡಿದ್ದಾರೆ ಎಂದು ಕಾಂಗ್ರೆಸ್​ ಸರ್ಕಾರದ ವಿರುದ್ದ ಕಿಡಿಕಾರಿದರು. ಇದನ್ನೂ ಓದಿ: ಯತ್ನಾಳ್ ಅವರ ಪಾದಯಾತ್ರೆಗೆ ನನ್ನ ಅಭ್ಯಂತರವಿಲ್ಲ: ವಿಜಯೇಂದ್ರ

ತುಂಗಭದ್ರಾ ಡ್ಯಾಂಗೆ 70 ವರ್ಷ ಆಗಿದೆ. ಇದು ಟಿಬಿ ಬೋರ್ಡ್​ಗೆ ಬರುತ್ತದೆ. ಆಂಧ್ರ, ಕೇಂದ್ರ ಸರ್ಕಾರದ ಜವಾಬ್ದಾರಿ ಇದೆ. ಈ ಕುರಿತು ರಿಪೊರ್ಟ್ ಕೊಡೊದಕ್ಕೆ ಎಂದು ಒಂದು ಕಮಿಟಿ ಇದೆ. 122 ಟಿಎಂಸಿ ನಮ್ಮ ರಾಜ್ಯಕ್ಕೆ ಸಿಗಬೇಕು, 73 ಟಿಎಂಸಿ ನೀರು ಆಂಧ್ರಕ್ಕೆ ಸಿಗಬೇಕು. 103 ಟಿಎಂಸಿ ಈಗ ಸಿಗ್ತಿದೆ. ಇನ್ನು ದುಡ್ಡು ಕೊಟ್ಟು ಬಂದವನು ಈ ಡ್ಯಾಂ ಏನಾಗಿದೆ, ಗೇಟ್ ಏನಾಗಿದೆ ಅಂತಾ ಯಾಕೆ ನೋಡ್ತಾನೆ ಎಂದರು. ಈಗ ತರಾತುರಿಯಲ್ಲಿ ರಿಪೇರಿ ಮಾಡೋದಕ್ಕೆ ಹೋಗಿ ಮತ್ತೆ ಏನೇನೋ ಅವಾಂತರ ಆಗುವುದು ಬೇಡ, ರೈತರಿಗೆ ಕಾನ್ಫಿಡೆನ್ಸ್ ಬರುವಂತೆ ಮಾಡಿ. ನಿಮ್ಮ ಊಹೆ ಮೇಲೆ ನಿರ್ಧಾರ ಮಾಡಿ ರೈತರ ಬೆಳೆ ನಷ್ಟ ಮಾಡಬೇಡಿ ಎಂದು ಕೈ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.

 

Related