ಅಪಪ್ರಚಾರ ನಂಬಬೇಡಿ: ಶಾಸಕ ಎಂ. ಸತೀಶ್ ರೆಡ್ಡಿ

ಅಪಪ್ರಚಾರ ನಂಬಬೇಡಿ: ಶಾಸಕ ಎಂ. ಸತೀಶ್ ರೆಡ್ಡಿ

ಬೊಮ್ಮನಹಳ್ಳಿ: ಶಾಸಕರ ಕಚೇರಿ ಕಟ್ಟಡದ ಮೇಲಿರುವ ನಾಮ ಫಲಕವನ್ನು ಹಾಗೂ ಕಟ್ಟಡದ ಭಾವಚಿತ್ರವನ್ನು ಮಾರ್ಫಿಂಗ್ ಮಾಡಿ ಪಕ್ಷದ ಕಾರ್ಯಕರ್ತರ ಫೋಟೋಗಳನ್ನು ಮಾರ್ಫಿಂಗ್ ಮಾಡಿಸಿ, ನಕಲಿ ದಾಖಲೆಗಳನ್ನು ಸೃಷ್ಠಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಬಗ್ಗೆ ಶಾಸಕ ಎಂ. ಸತೀಶ್ ರೆಡ್ಡಿಯವರು ಪತ್ರಿಕಾಗೋಷ್ಠಿ ಕರೆದು ಮಾತನಾಡಿದರು.

ಕವಿತಾ ರೆಡ್ಡಿ ಎಂಬ ಸ್ವಯಂ ಘೋಷಿತ ಕಾಂಗ್ರೆಸ್ ನಾಯಕಿ ಸುದ್ದಿಗಳ ನೈಜತೆಯನ್ನು ಪರಿಶೀಲಿಸದೆ ಅವನ್ನು ವಾಟ್ಸ್ಆಪ್ ಗ್ರೂಪ್ ಗಳಲ್ಲಿ ಹರಿಬಿಟ್ಟು ನಗೆ ಪಾಟಲಾಗಿರುವುದು ಹೊಸದೇನಲ್ಲ.

ಅವರ ಒನ್ ಪಾಯಿಂಟ್ ಏಜೆಂಡ ಏನೆಂದರೆ ಬಿಜೆಪಿ ಪಕ್ಷ  ಮತ್ತು ಪಕ್ಷದ ನಾಯಕರನ್ನು ಕೆಟ್ಟ ರೀತಿಯಲ್ಲಿ ಬಿಂಬಿಸುವುದು. ಫೋಟೋ ಮತ್ತು ವಿಡಿಯೋಗಳನ್ನು ತಿರುಚಿ ವಿನಾಕಾರಣ ಸಾರ್ವಜನಿಕರ ಗಮನ ಸೆಳೆಯುವ ಉದ್ದೇಶ ಅವರದ್ದು. ಈ ಕಾರಣದಿಂದಾಗಿಯೇ ಅವರ ವಿರುದ್ಧ ಕೆಲವು ಪೊಲೀಸ್ ಕೇಸ್ಗಳು ದಾಖಲಾಗಿವೆ.

ದಿ ನ್ಯೂಸ್ ಮಿನಿಟ್ ಎಂಬ ಸಂಸ್ಥೆ ಮತದಾನದ ಗುರುತಿನ ಚೀಟಿ ಬಗ್ಗೆ ವರದಿ ಮಾಡಿದೆ. ಸರ್ಕಾರವು ಸಹ ಈ ಕುರಿತು ಕ್ರಮ ಕೈಗೊಂಡು ಮೂರು ಅಧಿಕಾರಿಗಳನ್ನು ಸಹ ಅಮಾನತು ಗೊಳಿಸಿದೆ. ಚಿಲುಮೆ ಸಂಸ್ಥೆ ಮಾಲೀಕನನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ತನಿಖೆ ಪೂರ್ಣವಾದ ನಂತರ ಅಪರಾಧಿಗಳಿಗೆ ಶಿಕ್ಷೆಯಗುವುದು. ಕವಿತಾ ರೆಡ್ಡಿ ತನಿಖಾಧಿಕಾರಿಯಾಗುವ  ಅವಶ್ಯಕತೆ ಇಲ್ಲ ಎಂದರು ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ.

ಪ್ರಚಾರದ ತೆವಲಿಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಇಲ್ಲ ಸಲ್ಲದ ಸುದ್ದಿಗಳನ್ನು ಹರಿಬಿಟ್ಟು ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇದನ್ನು ಸೂಕ್ಷ್ಮವಾಗಿ ಪರಿಗಣಿಸಬಾರದಾಗಿ ಈ ಮೂಲಕ ತಿಳಿಸಲಾಗಿದೆ.

Related