ರಾಜ್ಯದ ನಾನಾ ಯೋಜನೆಗಳ ಕುರಿತು ಮೋದಿಗೆ ಡಿಕೆಶಿ ಮನವಿ

ರಾಜ್ಯದ ನಾನಾ ಯೋಜನೆಗಳ  ಕುರಿತು  ಮೋದಿಗೆ ಡಿಕೆಶಿ ಮನವಿ

ದೆಹಲಿ:  ಡಿಸಿಎಂ ಹಾಗೂ ಬೆಂಗಳೂರು ಅಭಿವೃದ್ದಿ ಸಚಿವರು ಆಗಿರು ಡಿಕೆಶಿ  ದೆಹಲಿ ಪ್ರವಾಸಬ ವೇಳೆ ಪ್ರಧಾನ ಮಂತ್ರಿ ಮೋದಿಯನ್ನು ಬೇಟಿ ಮಾಡಿ ರಾಜ್ಯದ ಹಲವಾರು ಅಭಿವೃದ್ದಿ ಕೆಲಸಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಸುಮಾರು 77.6 ಕಿಮೀನಷ್ಟು ವಿವಿಧ ರಾಷ್ಟ್ರೀಯ ಹೆದ್ದಾರಿ ರಸ್ತೆ ಜಾಲವು ಬೆಂಗಳೂರು ನಗರದಲ್ಲಿ ಹಾದು ಹೋಗುತ್ತದೆ. ಹೊಸೂರು- ಬಳ್ಳಾರಿ ರಸ್ತೆ ಮತ್ತು ಕೆ.ಆರ್ ಪುರಂ ಇಂದ ಮೈಸೂರು ರಸ್ತೆಯ ತನಕ ಸುರಂಗ ರಸ್ತೆ ಮತ್ತು ಎಲೆವೇಟೆಡ್ ಕಾರಿಡಾರ್ ನಿರ್ಮಾಣದಿಂದ ಸಂಚಾರ ದಟ್ಟಣೆ ತಪ್ಪಿಸಬಹುದು. ಈ ಯೋಜನೆಗಳಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಡಿಯಲ್ಲಿ ಕೇಂದ್ರ ಸರ್ಕಾರ ಸಹಕಾರ ನೀಡಬೇಕು.

* ಮೆಟ್ರೋ ಮಾರ್ಗ ಹಾಗೂ ಮೇಲ್ಸೇತುವೆ ಇರುವಂತಹ ಡಬಲ್ ಡೆಕ್ಕರ್ (IMRF integration of metro and Road Flyover) ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನಿಡಬೇಕು.

* ಬೆಂಗಳೂರಿಗೆ ಹೊರಗಿನಿಂದ ಬರುವವರ ಸಂಖ್ಯೆ ಸೇರಿದಂತೆ ಅನೇಕ ಉದ್ದಿಮೆಗಳು ಬೆಳವಣಿಗೆಯಾಗುತ್ತಿವೆ. ಇದರಿಂದ ನಗರದ ವ್ಯಾಪ್ತಿ ಹೆಚ್ಚುತ್ತಾ ಹೋಗಿರುವ ಕಾರಣಕ್ಕೆ ಪೆರಿಫೆರಲ್ ಹೊರವರ್ತುಲ ರಸ್ತೆ ನಿರ್ಮಾಣ ಮಾಡಬೇಕಾಗಿದೆ. ಈ ಕಾರಣಕ್ಕೆ ನಗರದ ಸುತ್ತ ಸುಮಾರು 73.01 ಕಿಮೀ ಉದ್ದದ ಫೆರಿಫೆರಲ್ ಹೊರವರ್ತುಲ ರಸ್ತೆ ನಿರ್ಮಾಣವನ್ನು ಪಿಪಿಪಿ ಮಾದರಿಯಲ್ಲಿ ಮಾಡಲು ಸರ್ಕಾರ ಮುಂದಾಗಿದೆ. ಇದಕ್ಕೆ ಅಂದಾಜು 27 ಸಾವಿರ ಕೋಟಿ ಖರ್ಚಾಗಬಹುದು ಇದರಲ್ಲಿ ಸುಮಾರು 21 ಸಾವಿರ ಕೋಟಿ ಹಣ ಭೂಸ್ವಾಧೀನಕ್ಕೆ, 6 ಸಾವಿರ ಕೋಟಿ ನಿರ್ಮಾಣ ವೆಚ್ಚಕ್ಕೆ ಎಂದು ಅಂದಾಜಿಸಲಾಗಿದೆ. ಈ ಯೋಜನೆಗೆ ಕೇಂದ್ರ ಬಜೆಟ್ ಅಲ್ಲಿ ಅನುದಾನ ಮೀಸಲಿಡಬೇಕು.

* ಹವಾಮಾನ ವೈಪರಿತ್ಯದ ಕಾರಣಕ್ಕೆ ಕಡಿಮೆ ಅವಧಿಯಲ್ಲಿ ಭಾರಿ ಮಳೆಯುವ ಬೆಂಗಳೂರಿನಲ್ಲಿ ಸುರಿಯುತ್ತಿದೆ. ಇದರಿಂದ ನಗರ ಭಾಗದಲ್ಲಿ ಪ್ರವಾಹ ಉಂಟಾಗುತ್ತಿದೆ. ನಗರದ ಮಳೆನೀರು ಕಾಲುವೆಗಳ ಮತ್ತು ಕೆರೆಗಳ ಸಾಮರ್ಥ್ಯ ಹೆಚ್ಚು ಮಳೆಯನ್ನು ತಡೆಯುತ್ತಿಲ್ಲ, ಆದ ಕಾರಣ ಸುಮಾರು ರೂ. 3000 ಸಾವಿರ ಕೋಟಿ ಮೊತ್ತದ ಯೋಜನೆಯ ಪ್ರಸ್ತಾವನೆಯನ್ನು ವಿಶ್ವ ಬ್ಯಾಂಕಿಗೆ ಸಲ್ಲಿಸಲಾಗಿದೆ. ಹಾಗೂ ಈ ಪ್ರಸ್ತಾವನೆಯು ಆರ್ಥಿಕ ವ್ಯವಹಾರಗಳ ಇಲಾಖೆಗೆ ತಲುಪಿದ್ದು ಅನುಮೋದನೆಗಾಗಿ ಕಾಯಲಾಗುತ್ತಿದೆ. ಈ ಯೋಜನೆ ಅನುದಾನಕ್ಕಾಗಿ ಕೇಂದ್ರ ಸರ್ಕಾರ ವಿಶ್ವ ಬ್ಯಾಂಕಿಗೆ ಒತ್ತಡ ಹೇರಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

* ಬೆಂಗಳೂರು ಹಾಗೂ ಸುತ್ತಲಿನ ನೀರಿನ ಮೂಲಗಳ ಅಭಿವೃದ್ಧಿ 15 ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ಸುಮಾರು ರೂ. 6 ಸಾವಿರ ಕೋಟಿ ರಾಜ್ಯದ ಪಾಲಿನ ಅನುದಾನಗಳನ್ನು ಬಿಡುಗಡೆ ಮಾಡಬೇಕು ಎನ್ನುವ ವಿಚಾರವನ್ನು ಮನವಿಯಲ್ಲಿ ಸಲ್ಲಿಸಲಾಗಿದೆ.
* ನಗರೀಕರಣದಿಂದ ಸಾಕಷ್ಟು ನೀರಿನ ಮೂಲಗಳು ಹಾಳಾಗುತ್ತಿವೆ ಇವುಗಳ ಪುರುಜ್ಜೀವನಕ್ಕಾಗಿ ಪಿಕ್ ಅಪ್ ಡ್ಯಾಂಗಳು, ಬ್ಯಾರೇಜ್ ಗಳು, ಸಣ್ಣ ಕೆರೆಗಳ ನಿರ್ಮಾಣ ಈ ಯೋಜನೆಯಲ್ಲಿದೆ. ಏತ ನೀರಾವರಿಯಿಂದ ಸುಮಾರು 2 ಸಾವಿರ ಹೆಕ್ಟೇರ್ ನಷ್ಟು ಭೂಮಿ ಅಭಿವೃದ್ಧಿ ಸಾಧ್ಯವಾಗಲಿದೆ.

* ಬೆಂಗಳೂರಿನಲ್ಲಿ ಸುಮಾರು 6500 ಸಾವಿರ ಮೆಟ್ರಿಕ್ ಟನ್ ಕಸ ರಸ್ತೆ ಹಾಗೂ ಕೆರೆಗಳ ಪಕ್ಕ ಪ್ರತಿದಿನ ಉತ್ಪಾದನೆಯಾಗುತ್ತಿದೆ. ಇದನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕಾಗಿದೆ. ಬಿಬಿಎಂಪಿ 8 ಘಟಕಗಳಲ್ಲಿ ಹಸಿ ಕಸವನ್ನು ವಿಂಗಡಿಸಲಾಗುತ್ತಿದೆ. ಈ ಕಾರಣಕ್ಕೆ ಮುಂದಿನ 25- 30 ವರ್ಷಗಳನ್ನು ಗಮದಲ್ಲಿ ಇಟ್ಟುಕೊಂಡು ವೈಜ್ಞಾನಿಕ ಕಸ ವಿಲೇವಾರಿ ಮಾಡಬೇಕಾಗಿದೆ. ಇದಕ್ಕಾಗಿ ರೂ. 3200 ಕೋಟಿ ಹಣ ವೆಚ್ಚವಾಗಲಿದೆ. ಸ್ವಚ್ಚ ಭಾರತ ಅಭಿಯಾನ 2.0 ದ ಅಡಿ ಈ ಹಿಂದೆ ಸುಮಾರು ರೂ.960 ಕೋಟಿ ಹಣವನ್ನು ಒದಗಿಸಲಾಗಿತ್ತು. ಒಟ್ಟು ವೆಚ್ಚದಲ್ಲಿ ಶೇ 30 ರಷ್ಟು ಹಣವನ್ನು ಕೇಂದ್ರ ಸರ್ಕಾರ ನೀಡಬೇಕಾಗಿದೆ. ಆದ ಕಾರಣ ಬಾಕಿ ಹಣವನ್ನು ಬಿಡುಗಡೆ ಮಾಡಬೇಕು.

* ಬೆಂಗಳೂರಿನಲ್ಲಿ ಒಂದಷ್ಟು ಭೂಮಿಯು ರಕ್ಷಣಾ ಇಲಾಖೆಯ ಅಧೀನದಲ್ಲಿವೆ. ಅಭಿವೃದ್ದಿ ಕೆಲಸಗಳಿಗೆ ಒಂದಷ್ಟು ಭೂಸ್ವಾಧೀನ ಅಗತ್ಯವಾಗಿದ್ದು ಈ ಪ್ರಕ್ರಿಯೆಯನ್ನು ಸರಳ ಮಾಡಬೇಕು. ಬೆಂಗಳೂರಿನ ಅಭಿವೃದ್ದಿಗೆ ಕೇಂದ್ರ ಸರ್ಕಾರ ಕೈ ಜೋಡಿಸಬೇಕು.

ನೀರಾವರಿ ಯೋಜನೆಗಳಿಗೆ ಸಂಬಂಧಿಸಿದ ಮನವಿ

* ಸಂಕಷ್ಟದ ಸಂದರ್ಭಗಳಲ್ಲಿ ತಮಿಳುನಾಡಿಗೆ ನೀರು ಹರಿಸಲು ಹಾಗೂ ಬೆಂಗಳೂರಿನ ಕುಡಿಯುವ ನೀರಿನ ತೊಂದರೆ ತಪ್ಪಿಸಲು 4.75 ಟಿಎಂಸಿ ನೀರು, ಸುಮಾರು 400 ಮೆ.ವ್ಯಾ ವಿದ್ಯುತ್ ಉತ್ಪಾದನೆಗೆ ಅನುಕೂಲವಾಗುವ ಮೇಕೆದಾಟು ಅಣೆಕಟ್ಟು ಯೋಜನೆಗೆ ಕೇಂದ್ರ ಅನುಮತಿ ನೀಡಬೇಕು. ಸಿಡ್ಲ್ಯೂಸಿ ಯು 01.02.2024 ರ ಸಿಡ್ಲ್ಯೂ ಎಂಎ ಗೆ ಮೇಕೆದಾಟು ವಿಚಾರವಾಗಿ ಸಾಧಕ- ಭಾದಕಗಳ ಪಟ್ಟಿ ಮಾಡಿ ಎಂದು ಸೂಚಿಸಿತ್ತು. ಈ ಯೋಜನೆಯಿಂದ ತಮಿಳುನಾಡು ಪಾಲಿನ ನೀರಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ ಇದನ್ನು ಮನಗಂಡು ಅಣೆಕಟ್ಟು ನಿರ್ಮಾಣಕ್ಕೆ ಅನುಮತಿ ನೀಡಬೇಕು.

* ಕೃಷ್ಣ ನದಿ ನೀರಿನ ವಿವಾದದ ವಿಚಾರದಲ್ಲಿ ಎರಡನೇ ಟ್ರಿಬ್ಯೂನಲ್ ಕರ್ನಾಟಕ್ಕೆ 173 ಟಿಎಂಸಿ ನೀರನ್ನು ಹಂಚಿಕೆ ಮಾಡಿತ್ತು. ಇದರಲ್ಲಿ 130 ಟಿಎಂಸಿ ನೀರು ಮೂರನೇ ಹಂತಕ್ಕೆ ಹಂಚಿಕೆ ಮಾಡಲಾಗಿದೆ. ನಮ್ಮ ಪಾಲಿನ ನೀರಿನ ಬಳಕೆಯನ್ನು ಮಾಡಲು ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು ಹೆಚ್ಚಿಸಬೇಕು. ಇದರಿಂದ 5.94 ಲಕ್ಷ ಹೆಕ್ಟೇರ್ ಪ್ರದೇಶ ನೀರಾವರಿಗೆ ಒಳಪಡಲಿದೆ. ಈ ಯೋಜನೆಯ ಮೊತ್ತ ರೂ 17,850 ಕೋಟಿ. ಇದು ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಇದನ್ನು ಗೆಜೆಟ್ ನೋಟಿಫಿಕೇಶನ್ ಮಾಡಬೇಕು ಎಂದು ಮನವಿ ಮಾಡಲಾಗಿದೆ.

* ಮಹದಾಯಿ ಯೋಜನೆಯಿಂದ ಹುಬ್ಬಳ್ಳಿ ದಾರವಾಡ ನಗರಕ್ಕೆ ಕುಡಿಯುವ ನೀರನ್ನು ಒದಗಿಸಬಹುದು. ಈ ಯೋಜನೆಗೆ ಕೇಂದ್ರ ಜಲ ಆಯೋಗ ಒಪ್ಪಿಗೆ ಸೂಚಿಸಿದೆ. ಈ ಯೋಜನೆಗೆ ಪರಿಸರ ಇಲಾಖೆಯ ಅನುಮತಿ ಬಾಕಿಯಿದೆ. ಈ ಯೋಜನೆ ಸಾಕಾರಗೊಳಿಸಲು ಪರಿಸರ ಇಲಾಯಿಂದ ಅನುಮತಿ ಪತ್ರವನ್ನು ಕೇಂದ್ರ ಸರ್ಕಾರ ಕೊಡಿಸಬೇಕು.

* ಪ್ರಸ್ತಾವಿತ ಗೋದಾವರಿ- ಕಾವೇರಿ ನದಿ ಜೋಡಣೆ ಯೋಜನೆಯಲ್ಲಿ ಕರ್ನಾಟಕಕ್ಕೆ ನ್ಯಾಯಯುತವಾಗಿ ನೀರು ಹಂಚಿಕೆಯಾಗಬೇಕು. 147.932 ಟಿಎಂಸಿ ನೀರಿನಲ್ಲಿ ಕರ್ನಾಟಕಕ್ಕೆ 15.89 ಟಿಎಂಸಿ ನೀರು ಎಂದು ಅಂದಾಜಿಸಲಾಗಿದೆ. ಈ ಅನ್ಯಾಯವನ್ನು ಸರಿಪಡಿಸಬೇಕು.

Related