ತೆಲುಗು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ವಿರುದ್ಧ ದೂರು ದಾಖಲು..!

  • In Cinema
  • May 25, 2022
  • 264 Views

ತೆಲುಗಿನ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಸದಾ ವಿವಾದಗಳ ಮೂಲಕವೇ ಸದ್ದು ಮಾಡುವ ಆರ್ ಜಿ ವಿ ಇದೀಗ ಸಂಕಷ್ಟದಲ್ಲಿ ಸಿಲುಕಿದ್ದಾರೆ. ನಿರ್ದೇಶಕ ರಾಮ್ ಗೋಪಾಲ್ ವರ್ಮಾ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ.

56 ಲಕ್ಷ ರೂಪಾಯಿ ಸಾಲ ಪಡೆದು ವಂಚಿಸಿದ್ದಾರೆ ಎಂದು ನಿರ್ಮಾಣ ಸಂಸ್ಥೆಯ ಮಾಲಿಕರೊಬ್ಬರು ದೂರು ನೀಡಿದ್ದಾರೆ. ಹೈದರಾಬಾದ್‌ನ ಮಿಯಾಪುರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

2019ರಲ್ಲಿ ರಾಮ್ ಗೋಪಾಲ್ ವರ್ಮಾ ಸ್ನೇಹಿತರ ಮೂಲಕ ದೂರುದಾರರನ್ನು ಭೇಟಿಯಾಗಿದ್ದರು. ಭೇಟಿಯಾದ ಮರು ವರ್ಷವೇ ತೆಲುಗು ಸಿನಿಮಾ ದಿಶಾ ಚಿತ್ರಕ್ಕಾಗಿ 8 ಲಕ್ಷ ರೂಪಾಯಿ ಸಾಲವನ್ನು ಪಡೆದಿದ್ದರು. ಮತ್ತೊಮ್ಮೆ 20 ಲಕ್ಷ ರೂಪಾಯಿ ಚೆಕ್ ಮೂಲಕ ಸಾಲ ಮೂಡುವಂತೆ ಕೇಳಿದ್ದಾರೆ ಎಂದು ದೂರುದಾರು ಆರೋಪಿಸಿದ್ದಾರೆ. ಇದನ್ನ ಆರು ತಿಂಗಳೊಳಗೆ ಮರುಪಾವತಿ ಮಾಡುವುದಾಗಿ ಭರವಸೆ ನೀಡಿದ್ದರು. ಅದರೆ ಮುಂದಿನ ತಿಂಗಳು ತುರ್ತು ಅವಶ್ಯಕತೆ ಇದೆ ಎಂದು ಹೇಳಿ 28 ಲಕ್ಷ ರೂಪಾಯಿ ಕೇಳಿದರು ಎಂದು ಹೇಳಿದ್ದಾರೆ.

Related