ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ ನೋಡಿದ ಡಿಂಪಲ್ ಕ್ವೀನ್!

ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ ನೋಡಿದ ಡಿಂಪಲ್ ಕ್ವೀನ್!

ಬೆಂಗಳೂರು: ನಟ ದರ್ಶನ್ ಜೊತೆ ಬುಲ್ ಬುಲ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ ನಟಿ ರಚಿತಾ ರಾಮ್ ಅವರು ಈ ಬಾರಿ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿಯನ್ನು ನೀಡಿದ್ದಾರೆ.

ಈ ಕುರಿತಂತೆ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಾಕಿರುವ ಅವರು, ಎಲ್ಲರಿಗೂ ನಮಸ್ಕಾರ. ಈ ಬಾರಿ ಚಿತ್ರೀಕರಣ ಇರುವ ಕಾರಣ, ಅಕ್ಟೋಬರ್ 3ರಂದು ಹುಟ್ಟುಹಬ್ಬದ ಆಚರಣೆಯನ್ನು ನಾನು ಮಾಡಿಕೊಳ್ಳುತ್ತಿಲ್ಲ. ಎಲ್ಲರ ಕ್ಷಮೆಯಾಚಿಸುತ್ತೇನೆ. ಎಂದಿನಂತೆ ಪ್ರತಿ ಭಾನುವಾರ ಚಿತ್ರೀಕರಣ ಮುಗಿಸಿ ಬಂದ ನಂತರ ಸಿಗುತ್ತೇನೆ ಎಂದು ಪೋಸ್ಟ್ ನಲ್ಲಿ ಬರೆದಿದ್ದಾರೆ. ಲವ್ ಯು ಆಲ್ ಎಂದಿರುವ ರಚಿತಾ ರಾಮ್ ಪೋಸ್ಟ್ ಗೆ ಸಾಕಷ್ಟು ಕಮೆಂಟ್ ಬಂದಿದೆ. ಇದನ್ನೂ ಓದಿ: ಬೈರಾದೇವಿ ಚಿತ್ರ ನನ್ನ ಮುಂದಿನ ಭವಿಷ್ಯ ನಿರ್ಧರಿಸುತ್ತದೆ: ರಾಧಿಕಾ

ಇನ್ನು ರಚಿತಾ ಅವರ ಈ ಪೋಸ್ಟ್ ಗೆ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಇದು ಎಲ್ಲಾನು ದರ್ಶನ್ ಅವರಿಗೋಸ್ಕರ, ದರ್ಶನ್ ಅವರು ಜೈಲಿನಲ್ಲಿ ಇರುವುದರಿಂದ ನೀವು ಈ ಬಾರಿ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ ಎಂದು ಕಮೆಂಟ್ಗಳ ಸುರಿಮಳೆಯನ್ನೇ ಸುರಿದಿದ್ದಾರೆ.

ದರ್ಶನ್ ಜೈಲಿಗೆ ಹೋಗಿದ್ದಕ್ಕೆ ನೀವು ಬರ್ತ್ ಡೇ ಆಚರಿಸಿಕೊಳ್ತಿಲ್ಲ ಎನ್ನುವುದು ಗೊತ್ತು ಮೇಡಂ ಎಂದು ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ. ಈ ತ್ಯಾಗ ದರ್ಶನ್ ಗಾಗಿ, ಅವರು ಬಂದ್ಮೇಲೆ ಹುಟ್ಟುಹಬ್ಬವನ್ನು ಜೋರಾಗಿ ಮಾಡ್ಕೊಳ್ಳಿ ಎಂದು ಫ್ಯಾನ್ಸ್ ಸಲಹೆ ನೀಡಿದ್ದಾರೆ.

 

Related