“ಡಿಜಿಟಲ್ ಮಾರ್ಕೆಟಿಂಗ್ ತರಬೇತಿ” ಮಹಿಳಾ ಉದ್ಯಮಿಗಳಿಗಾಗಿ ತರಬೇತಿ ಕಾರ್ಯಕ್ರಮ

“ಡಿಜಿಟಲ್ ಮಾರ್ಕೆಟಿಂಗ್ ತರಬೇತಿ” ಮಹಿಳಾ ಉದ್ಯಮಿಗಳಿಗಾಗಿ ತರಬೇತಿ ಕಾರ್ಯಕ್ರಮ

ಮೈಸೂರು: 21ನೇ ಶತಮಾನದ ಡಿಜಿಟಲ್ ಶತಮಾನ‌ ಎಲ್ಲವು ಆಧೂನಿಕ ತಂತ್ರಜ್ಞಾನವನ್ನ ಅಳವಡಿಸಿಕೊಂಡು ಮುಂದೆ ಸಾಗಬೇಕಾಗಿದೆ, ಮಹಿಳೆ ಸಬಲೀಕರಣಕ್ಕಾಗಿ ಕರ್ನಾಟಕದ ನಿವೃತ್ತ ಕಾರ್ಯದರ್ಶಿ ರತ್ನಪ್ರಭ ನೇತೃತ್ವದ ಉಬುಂಟು ಸಂಸ್ಥೆಯಡಿ ಮಹಿಳಾ ಉದ್ಯಮಿಗಳಿಗಾಗಿ ‌‌‌ಡಿಜಿಟಲೀಕರಣ ಕುರಿತು‌ ಒಂದು ದಿನ‌ದ ತರಬೇತಿ ‌ಶಿಬಿರವನ್ನ ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ಅಯೋಜಿಸಲಾಗಿತ್ತು.

ಉಬುಂಟು ಒಕ್ಕೂಟ ಮಹಿಳಾ ಉದ್ಯಮಿಗಳ ಆರ್ಥಿಕ ಅಭಿವೃದ್ಧಿಗಾಗಿ ಕೆಲಸ ಮಾಡುವ ಲಾಭರಹಿತ ಸಂಸ್ಥೆಯಾಗಿದೆ ಮತ್ತು 9 ರಾಜ್ಯಗಳನ್ನು ಒಳಗೊಂಡ 21000 ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ 36 ಮಹಿಳಾ ಉದ್ಯಮಿ ಸಂಘಗಳ ಸದಸ್ಯತ್ವವನ್ನು ಪಡೆದುಕೊಂಡಿದೆ.

ಸಂಘವು ಕರ್ನಾಟಕ ಸರ್ಕಾರ, ಕಾರ್ಪೊರೇಟ್‌ಗಳು ಮತ್ತು ವ್ಯಾಪಾರ ಸಂಸ್ಥೆಗಳು ಮತ್ತು ಕೈಗಾರಿಕಾ ಸಂಘಗಳು, ಎನ್‌ಜಿಒಗಳೊಂದಿಗೆ ವ್ಯಾಪಾರ ನೆಟ್‌ವರ್ಕಿಂಗ್, ಪುದರ್ಶನಗಳು, ಸೆಮಿನಾರ್‌ಗಳು, ಸಾಗರೋತ್ತರ ವ್ಯಾಪಾರ ಅವಕಾಶಗಳಿಗಾಗಿ ವ್ಯಾಪಾರ ನಿಯೋಗಗಳು ಮತ್ತು ಅವರ ವ್ಯಾಪಾರಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ತರಬೇತಿ ಕಾರ್ಯಕ್ರಮಗಳ ಮೂಲಕ ವ್ಯಾಪಾರದಲ್ಲಿ ಉನ್ನತೀಕರಿಸಲು ಕೆಲಸಮಾಡುತ್ತಿದೆ..

ಈ ದಿಕ್ಕಿನಲ್ಲಿ ಶ್ರೀಮತಿ ಕೆ. ರತ್ನಪ್ರಭಾ IAS, (ಮಾಜಿ ಮುಖ್ಯ ಕಾರ್ಯದರ್ಶಿ ಕರ್ನಾಟಕ ಸರ್ಕಾರ) ಸಂಸ್ಥಾಪಕ ಅಧ್ಯಕ್ಷರು ಉಬುಂಟು ಒಕ್ಕೂಟ UNESCAP (ಯುನೈಟೆಡೇಷನ್ ಎಕನಾಮಿಕ್ ಅಂಡೋಶಿಯಲಮಿಷನ್ಮಾರ್ಏಷ್ಯಾ ಮತ್ತುಪೆಸಿಫಿಕ್) ಅನ್ನು ಡಿಜಿಟಲ್ ಮಾರ್ಕೆಟಿಂಗ್‌ನಲ್ಲಿ ಕರ್ನಾಟಕದ ಮಹಿಳಾ ಉದ್ಯಮಿಗಳ ಅನುಕೂಲಕ್ಕಾಗಿ ತರಬೇತಿ ಕಾರ್ಯಕ್ರಮವನ್ನು ಕಾರ್ಯಗತ ಗೊಳಿಸುವಲ್ಲಿ ಜ್ಞಾನಪಾಲುದಾರರಾಗಿ ಒಪ್ಪಿರುತ್ತಾರೆ.

ಈ ತರಬೇತಿಯು ಇಂದಿನ ವ್ಯವಹಾರವನ್ನು ನಡೆಸಲು ಅಗತ್ಯವಿರುವ ಕೌಶಲ್ಯಗಳ ತರಬೇತಿಯಾಗಿರುತ್ತದೆ.

ಉಬುಂಟು ಒಕ್ಕೂಟ ಈ ಹಿಂದೆ ಆಗಸ್ಟ್ 22 ರಂದು ಬೆಂಗಳೂರಿನಲ್ಲಿ ಎರಡು ದಿನಗಳ ತರಬೇತಿಯನ್ನು ಯಶಸ್ವಿಯಾಗಿ ಆಯೋಜಿಸಿತ್ತು, ಇದನ್ನು ಗೌರವಾನ್ವಿತ ಮುಖ್ಯಮಂತ್ರಿಗಳಾದ ಶ್ರೀ. ಬಸವರಾಜಬೊಮ್ಮಾಯಿ ಯವರು ಉದ್ಘಾಟಿಸಿರುತ್ತಾರೆ.

ತರಬೇತಿ ಕಾರ್ಯಕ್ರಮದಲ್ಲಿ 157 ಮಹಿಳಾ ಉದ್ಯಮಿಗಳು ಭಾಗವಹಿಸಿದ್ದರು. ತರಬೇತಿ ಕಾರ್ಯಕ್ರಮವು ಅತ್ಯುತ್ತಮ ಪ್ರತಿಕ್ರಿಯೆಯನ್ನು ಪಡೆದಿದ್ದು 89% ಭಾಗವಹಿಸುವವರು ಇದು ತುಂಬಾ ಉಪಯುಕ್ತವಾಗಿದೆ ಎಂದು ಅಭಿಪ್ರಾಯಪಟ್ಟಿರುತ್ತಾರೆ.

ತರಬೇತಿಯ ನಂತರ, ಕಾರ್ಯಕ್ರಮದ ಪ್ರತಿಕ್ರಿಯೆಯನ್ನು ತೆಗೆದುಕೊಳ್ಳಲಾಯಿತು, ಮತ್ತು 3 ತಿಂಗಳಲ್ಲಿ ಅನೇಕ ಮಹಿಳಾ ಉದ್ಯಮಿಗಳು ಉತ್ತಮ ವ್ಯಾಪಾರ ವಹಿವಾಟು ನಡೆಸಿರುತ್ತಾರೆ. ಒಬ್ಬ ಮಹಿಳಾ ಉದ್ಯಮಿ 6 ಲಕ್ಷ ಆನ್‌ಲೈನ್ ವ್ಯವಹಾರ ಮತ್ತು ಆಫ್ ಲೈನ್ ವ್ಯವಹಾರ ರೂ. 50 ಲಕ್ಷಗಳು ಮತ್ತು ಸಾಧಿಸಿದ ಕಡಿಮೆ ವ್ಯಾಪಾರವು ರೂ. 1 ಲಕ್ಷ ಆದ್ದರಿಂದ, ಡಿಜಿಟಲ್ ಮಾರ್ಕೆಟಿಂಗ್ ತರಬೇತಿ ಕಾರ್ಯಕ್ರಮವು ಮಹಿಳಾ ಉದ್ಯಮಿಗಳ ವ್ಯವಹಾರಗಳನ್ನು ಉತ್ತೇಜಿಸುವಲ್ಲಿ ಮತ್ತು ಉನ್ನತಿಕರಣದಲ್ಲಿ ಭಾರಿ ಯಶಸ್ಸನ್ನು ಕಂಡಿದ್ದು, ನಮ್ಮ ಸದಸ್ಯ ಸಂಘಗಳ ಅನುಕೂಲಕ್ಕಾಗಿ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಇದೇ ರೀತಿಯ ಕಾರ್ಯಕ್ರಮಗಳನ್ನು ಅಯೋಜಿಸುತ್ತಿದ್ದವೆ.

ಮಹಿಳಾ ಉದ್ಯಮಿಯಾಗಿರುವುದು ಮತ್ತು ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಕಾಣುವುದು ದೊಡ್ಡ ಸವಾಲಾಗಿದೆ. ಆಧುನಿಕ ಮಾರ್ಕೆಟಿಂಗ್ ತಂತ್ರಜ್ಞಾನದೊಂದಿಗೆ ಸಾಮಾಜಿಕ ಮಾಧ್ಯಮ ಮತ್ತು ಬ್ಯಾಗ್‌ಗಳೊಂದಿಗೆ ಅಂತರಜಾಲ ಸವಲತ್ತುಗಳಿಂದ ವ್ಯಾಪಾರ ಅಭಿವೃದ್ಧಿ ಹೊಂದುವುದು ಅನಿವಾರ್ಯವಾಗಿದೆ.

ನಿಮ್ಮ ವ್ಯಾಪಾರವು ಯಾವುದೇ ಉದ್ಯಮವಾಗಿದ್ದರೂ ಬಹುತೇಕ ಯಾರನ್ನಾದರೂ ತಲುಪಲು ನಿಮಗೆ ಸಹಕಾರಿಯಗುತ್ತದೆ. ಆದ್ದರಿಂದ, ವ್ಯವಹಾರದಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಕೌಶಲ್ಯ ಬಹುಮುಖ್ಯವಾಗಿರುತ್ತದೆ.

ಇನ್ನು ಈ ಕಾರ್ಯಕ್ರಮದಲ್ಲಿ ನಿವೃತ್ತ ಕಾರ್ಯದರ್ಶಿ ರತ್ನಪ್ರಭ, ಮೈಸೂರಿನ‌ ಜಿಲ್ಲಾದಿಕಾರಿ ಕೆ.ವಿ ರಾಜೇಂದ್ರ, ಮೈಸೂರಿನ ಮಹಾಪೌರ ಶಿವಕುಮಾರ್, ಮೈಸೂರು ಛೇಂಬರ್ ಆಪ್ ಕಾಮರ್ಸ್ ಕೆ.ಬಿ‌.ಲಿಂಗರಾಜು ಮತ್ತು ಏಷ್ಯನ್ ಪೈಂಟ್ಸ್ ಕಿರಣ್ ಪಟ್ಟಾಥೀಲ್ ಮುಂತಾದವರು ಭಾಗವಹಿಸಿದ್ದರು.

 

 

 

 

Related