ಡಿಜಿಟಲ್ ಮಾರ್ಕೆಟಿಂಗ್‌ ತರಬೇತಿ ಕಾರ್ಯಕ್ರಮ

ಡಿಜಿಟಲ್ ಮಾರ್ಕೆಟಿಂಗ್‌ ತರಬೇತಿ ಕಾರ್ಯಕ್ರಮ

ಬೆಂಗಳೂರು: 21ನೇ ಶತಮಾನದ ಡಿಜಿಟಲ್ ಶತಮಾನ‌ ಎಲ್ಲವು ಆಧೂನಿಕ ತಂತ್ರಜ್ಞಾನವನ್ನ ಅಳವಡಿಸಿಕೊಂಡು ಮುಂದೆ ಸಾಗಬೇಕಾಗಿದೆ, ಮಹಿಳೆ ಸಬಲೀಕರಣಕ್ಕಾಗಿ ಕರ್ನಾಟಕದ ನಿವೃತ್ತ ಕಾರ್ಯದರ್ಶಿ ರತ್ನಪ್ರಭ ನೇತೃತ್ವದ ಉಬುಂಟು ಸಂಸ್ಥೆಯಡಿ ಮಹಿಳಾ ಉದ್ಯಮಿಗಳಿಗಾಗಿ ‌‌‌ಡಿಜಿಟಲೀಕರಣ ಕುರಿತು‌ ಡಿಜಿಟಲ್ ಮಾರ್ಕೆಟಿಂಗ್‌ ತರಬೇತಿಯ ಬಗ್ಗೆ ಮಾಹಿತಿ ನೀಡಿದರು.

ಡಿಜಿಟಲ್ ಮಾರ್ಕೆಟಿಂಗ್ ತರಬೇತಿ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿಯಾದ ಶ್ರೀ ಅವಿನಾಶ್ ಮೆನನ್, ಗಿಡಕ್ಕೆ ನೀರು ಹಾಕುವ ಮೂಲಕ ಶುಕ್ರವಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಡಿಜಿಟಲ್ ಮಾರ್ಕೆಟಿಂಗ್ ತರಬೇತಿಯು ಇದು ಒಂದು ದಿನದ ತರಬೇತಿಯಾಗಿದ್ದು, ತರಬೇತಿ ಪಡೆದಂತಹ ಮಹಿಳಾ ಉದ್ಯಮಿಗಳಿಗೆ ಪ್ರಮಾಣ ಪತ್ರವನ್ನು ಈ ಕಾರ್ಯಕ್ರಮದಲ್ಲಿ ನೀಡಲಾಗುವುದು. ಡಿಜಿಟಲ್ ಮಾರ್ಕೆಟಿಂಗ್ ತರಬೇತಿಯನ್ನು ಪಡೆಯಲು ಕರ್ನಾಟಕದ ಹಲವಾರು ಜಿಲ್ಲೆಗಳಿಂದ ಮಹಿಳಾ ಉದ್ಯಮಿಗಳು ಇದರಲ್ಲಿ ಭಾಗವಹಿಸಿದ್ದಾರೆ.

ಡಿಜಿಟಲ್ ಮಾರ್ಕೆಟಿಂಗ್‌ ತರಬೇತಿ ಕಾರ್ಯಕ್ರಮವನ್ನು ಬಿಡದಿ, ರಾಮನಗರ, ಚನ್ನಪಟ್ಟಣ, ಮಂಡ್ಯ, ಕನಕಪುರ ಮತ್ತು ಬೆಂಗಳೂರು ಗ್ರಾಮಾಂತರಗಳಲ್ಲಿ ಹಮ್ಮಿಕೊಳ್ಳಲಾಗಿದೆ.

ಡಿಜಿಟಲ್ ಮಾರ್ಕೆಟಿಂಗ್ ತರಬೇತಿ ಕಾರ್ಯಕ್ರಮಕ್ಕಾಗಿ ಆಫ್‌ಲೈನ್ ಉಚಿತ ತರಬೇತಿ ಕಾರ್ಯಕ್ರಮವನ್ನು 17ನೇ ಫೆಬ್ರವರಿ 2023 ಶುಕ್ರವಾರ ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ನಡೆಯಲಿದೆ.

ಈ ಸಂದರ್ಭದಲ್ಲಿ ಶ್ರೀ ಅವಿನಾಶ್ ಮೆನನ್, ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಮನಗರ ಜಿಲ್ಲೆ, ಶ್ರೀ ರಾಜೇಂದ್ರ ಎಸ್‌. ಶ್ರೀಮತಿ. ಕೆ. ರತ್ನ ಪ್ರಭಾ, ಐಎಎಸ್ (ನಿವೃತ್ತ) ಮಾಜಿ ಮುಖ್ಯ ಕಾರ್ಯದರ್ಶಿ, ಕರ್ನಾಟಕ ಸರ್ಕಾರ ಮತ್ತು ಅಧ್ಯಕ್ಷ- ಉಬುಂಟು ಒಕ್ಕೂಟವು, ಅಧ್ಯಕ್ಷರು, ಬಿಡದಿ ಕೈಗಾರಿಕೆಗಳ ಸಂಘ, ಶ್ರೀ ಮುರಳಿ ಎ. ಕಾರ್ಯದರ್ಶಿಗಳು, ಬಡದಿ ಕೈಗಾರಿಕೆಗಳ ಸಂಘ, ಶ್ರೀ ಮಂಜ ಎನ್.ಎಲ್. ವ್ಯವಸ್ಥಾಪಕರು, ಅಸ್ ಫಾರಂ, ಹಾರೋಹಳ್ಳಿ, ಡಾ|| ರಾಜೇಶ್ವರಿ ಅಧ್ಯಕ್ಷರು, ಅವೇಕ್ ಶ್ರೀಮತಿ ಮಿಕಿಕೊ ತನಕಾ ಮುಖ್ಯಸ್ಥರು, ಯುನೆಸ್ಟ್ರಾಪ್ ದಕ್ಷಿಣ ಮತ್ತು ನೈಋತ್ಯ ಕಛೇರಿ, ನವದೆಹಲ ಉಪಸ್ಥಿತಿ ಇದ್ದರು.

 

Related