ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಕ್ತರ ಆಕೋಶ್ರ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಕ್ತರ ಆಕೋಶ್ರ

ಸುಬ್ರಹ್ಮಣ್ಯ : ಸರ್ಕಾರದ ಆದೇಶ ಪಾಲನೆಯ ಕಾರಣಕ್ಕೆ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಬುಧವಾರ ಸರ್ಪ ಸಂಸ್ಕಾರ ಸೇವೆ ಬಂದ್ ಮಾಡಲಾಗಿದೆ.

ಈ ಮಾಹಿತಿ ಅರಿಯದೆ ದೂರದ ಊರುಗಳಿಂದ ಪ್ರಸಿದ್ಧ ನಾಗಕ್ಷೇತ್ರವಾಗಿರುವ ಕುಕ್ಕೆಗೆ ಬಂದಿರುವ ಭಕ್ತರು, ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡರು.

‘ಸರ್ಪ ಸಂಸ್ಕಾರ ನಡೆಸಲು ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದಿದ್ದೆವು. 2-3 ತಿಂಗಳುಗಳ ಹಿಂದೆ ಸರ್ಪ ಸಂಸ್ಕಾರ ಸೇವೆಯನ್ನು ಬುಕ್ ಮಾಡಲಾಗಿತ್ತು. ನಮಗೆ ನೀಡಿದ್ದ ದಿನಾಂಕಕ್ಕೆ ಅನುಗುಣವಾಗಿ ಬುಧವಾರ ದೇವಾಲಯಕ್ಕೆ ಬಂದಿದ್ದೇವೆ. ದೂರದ ಊರುಗಳಿಂದ ಪ್ರಯಾಣ ಮಾಡಿ ಬಂದಿರುವ ನಮಗೆ, ಈಗ ಸೇವೆ ಲಭ್ಯ ಇಲ್ಲ ಎಂಬ ಮಾಹಿತಿ ನೀಡುತ್ತಿದ್ದಾರೆ’ ಎಂದು ಭಕ್ತರು ದೂರಿದರು.

Related