ದೇವಸ್ಥಾನ, ದರ್ಗಾಗಳ ಅಭಿವೃದ್ದಿಗೆ ಅಗತ್ಯ ಅನುದಾನ ಪೂರೈಕೆ

ದೇವಸ್ಥಾನ, ದರ್ಗಾಗಳ ಅಭಿವೃದ್ದಿಗೆ ಅಗತ್ಯ ಅನುದಾನ ಪೂರೈಕೆ

ಶಹಾಪುರ: ತಾಲೂಕಿನ ವ್ಯಾಪ್ತಿಯಲ್ಲಿರುವ ದೇವಸ್ಥಾನ, ದರ್ಗಾಗಳ ಅಭಿವೃದ್ದಿಗೆ ಅಗತ್ಯ ಅನುದಾನ ಒದಗಿಸಲಾಗುತ್ತಿದೆ ಮತ್ತು ಇದರ ಜೊತೆಗೆ ಗ್ರಾಮೀಣಾಭಿವೃದ್ದಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.

ತಾಲೂಕಿನ ಸಗರ ಗ್ರಾಮದ ಸೂಫಿ ಸರಮಸ್ತ ದರ್ಗಾಕ್ಕೆ ಬೇಟಿ ನೀಡಿ ಆರ್ಶೀವಾದ ಪಡೆದರು. ಬಳಿಕ ದರ್ಗಾದ ಆವರಣದಲ್ಲಿ ಪ್ರಗತಿಯಲ್ಲಿರುವ ಕೆಕೆಆರ್‌ಡಿಬಿ ಯೋಜನೆಯಡಿ 1ಕೋಟಿ ರೂ. ವೆಚ್ಚದ ಸಿಸಿ ರಸ್ತೆ, ದರ್ಗಾದ ಲೈಟಿಂಗ್ಸ್ ಹಾಗೂ ಇತರೆ ಕಾಮಗಾರಿ ವಿಕ್ಷಿಸಿ (ಬುಧವಾರ ಡಿ. 4) ರಂದು ಮಾತನಾಡಿದ ಅವರು, ಕ್ಷೇತ್ರದ ಜನರ ನಿರೀಕ್ಷೆಗೆ ತಕ್ಕಂತೆ ಕುಡಿಯುವ ನೀರು, ಆರೋಗ್ಯ ಸೇರಿ ಎಲ್ಲಾ ಮೂಲಭೂತ ಸೌಕರ್ಯ ಒದಗಿಸಲಾಗುತ್ತಿದೆ. ಇದರ ಜೊತೆಗೆ ಗ್ರಾಮೀಣ ಭಾಗಗಳಲ್ಲಿ ನಿರೀಕ್ಷೆ ಮತ್ತು ಅನುಕೂಲತೆಗಳಿಗೆ ತಕ್ಕಂತೆ ರಸ್ತೆಗಳ ಅಭಿವೃದ್ದಿಗೆ ಪ್ರಥಮ ಆದ್ಯತೆ ನೀಡಲಾಗುತ್ತಿದೆ ಇದಕ್ಕೆ ಸ್ಥಳಿಯ ಗ್ರಾಮಸ್ಥರು ಸಹಕಾರ ನೀಡಬೇಕು.

ಮತ್ತು ಸರ್ಕಾರದಿಂದ ಮಸೀದಿ ದರ್ಗಾಗಳ ಅಭಿವೃದ್ದಿಗೆ ಅನುದಾನ ಒದಗಿಸಲಾಗುತ್ತಿದೆ. ಇದರ ಜೊತೆಗೆ ಗ್ರಾಮೀಣ ಪ್ರದೇಶಗಳಲ್ಲಿ ಸಂಪರ್ಕ ವ್ಯವಸ್ಥೆ ಅಭಿವೃದ್ದಿಪಡಿಸಲಾಗುತ್ತಿದೆ. ರಸ್ತೆಗಳು ಅಭಿವೃದ್ದಿಯಾದರೆ ಅದು ಪ್ರಗತಿಯ ಸಂಕೇತವಾಗಿದ್ದು, ರಸ್ತೆಗಳ ಅಭಿವೃದ್ದಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಮತ್ತು ಈ ರಸ್ತೆಯಿಂದ ದರ್ಗಾಕ್ಕೆ ಬರುವ ಭಕ್ತರಿಗೆ ಅನುಕೂಲವಾಗಲಿದೆ. ಗ್ರಾಮೀಣ ಪ್ರದೇಶದಲ್ಲಿ ಮೂಲ ಸೌಲಭ್ಯಗಳು ಸಮರ್ಪಕವಾಗಿ ಜನರಿಗೆ ದೊರೆತಾಗ ಜನರು ಅಭಿವೃದ್ದಿ ಹೊಂದಲು ಸಾಧ್ಯ ಎಂದರು.

ಜನರ ಇಚ್ಚೇಯಂತೆ ಮಿನಿವಿಧಾನಸೌಧ ನಿರ್ಮಾಣ

ಮಿನಿವಿಧಾನಸೌಧ ನಿರ್ಮಾಣಕ್ಕೆ ಕೇಲ ಮುಖಂಡರು ಈ ಕುರಿತು ಅನೋಪಚಾರಿಕ ಸಭೆ ಮಾಡಿ ಹಲವಾರು ಅಭಿಪ್ರಾಯ ಮಂಡಿಸಿದ್ದು, ಈ ಹಿನ್ನಲೇ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರಜಾಸೌಧ ನಿರ್ಮಾಣ ಮಾಡುವುದು ನನ್ನ ಇಚ್ಛೇ ಇದ್ದು, ಈ ಕುರಿತು ಮತ್ತೊಂದಡೆ ಸ್ಥಳ ಪರಿಶೀಲನೆ ಮಾಡಿದ್ದು ಶಖಾಪುರ ಗ್ರಾಮದ ರೈತರು ನಗರದ ಆರಬೋಳ ಕಲ್ಯಾಣ ಮಂಟಪದ ಹಿಂದೆ ಮಿನಿವಿಧಾನಸೌಧ ನಿರ್ಮಾಣಕ್ಕೆ ಭೂಮಿ ಕೊಡಲು ಮುಂದೆ ಬಂದಿದ್ದು ಅಲ್ಲಿಯೇ ಮಿನಿವಿಧಾನಸೌದ ನಿರ್ಮಿಸಲು ಚಿಂತನೆ ನಡೆದಿದೆ. ಯಾವುದು ಸೂಕ್ತ ಸ್ಥಳ ಎನ್ನುವುದು ಜನರ ತಿರ್ಮಾನಕ್ಕೆ ಬಿಟ್ಟಿದ್ದು ಎಂದು ಸಚಿವ ಶರಣಬಸಪ್ಪಗೌಡ ದರ್ಶನಾಪುರ ಹೇಳದರು. ಇದನ್ನೂ ಓದಿ: ನ್ಯಾಯಕ್ಕಾಗಿ ಹೋರಾಟಕ್ಕಿಳಿದ ಮುರಾರ್ಜಿ ಶಾಲಾ ವಿದ್ಯಾರ್ಥಿಗಳು!

ಸೂಫಿ ದರ್ಗಾದ ಪೀಠಾಧಿಪತಿ ಸಜ್ಜಾದ ನಷೀನ್ ಸಯದ್ ಮುಜೀಬುದ್ದಿನ ಸರ್ಮಸ್ತ ಮಾತನಾಡಿ, ಈ ಮೊದಲು ದರ್ಗಾಕ್ಕೆ ಸೂಕ್ತ ರಸ್ತೆ ವ್ಯವಸ್ಥೆ ಇರಲಿಲ್ಲಾ. ಈ ಕುರಿತು ಸಚಿವರಿಗೆ ಮನವಿ ಮಾಡಿದ ತಕ್ಷಣ ಮೀನಾಮೇಷ ಎಣಿಸದೇ ಸುವ್ಯವಸ್ಥೆ ರಸ್ತೆ, ಮೂಲಭೂತ ಸೌಕರ್ಯ ಕಲ್ಪಿಸಿಕೊಟ್ಟಿದ್ದಾರೆ. ಇದು ಅವರಲ್ಲಿನ ಜ್ಯಾತ್ಯಾತೀತ ಮನೋಭಾವನೆಗೆ ಸಾಕ್ಷಿಯಾಗಿದೆ. ಸದಾಕಾಲ ಸಮಸ್ಯೆಗಳಿಗೆ ಸ್ಪಂದಿಸುವ ರಾಜಕಾರಣಿಯಾಗಿರುವ ದರ್ಶನಾಪುರ ಅವರು ಸದಾಕಾಲ ಇಂತಹ ನಾಯಕರು ಅಧಿಕಾರದಲ್ಲಿರಲಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಯದ್ ಶಾ ನಜಮುಲ್ಲ ಉಲ್ ಉದಾ ಸರ್ಮಸ್ತ, ಬಸಣಗೌಡ ಸುಬೇದಾರ, ಲಿಂಗಣ್ಣ ಪಡಶೆಟ್ಟಿ, ಚೆಂದಪ್ಪ ಸೇರಿ, ಲಕ್ಷ್ಮಣ ಹೊಸಳ್ಳಿ, ಸಂತೋಷಗೌಡ ಸುಬೇದಾರ, ಅಮೀನರೆಡ್ಡಿ, ಬಸವರಾಜ ಕನಗೊಂಡ, ಹಣಮಂತ ಗುರಳ್ಳಿ, ಸಲೀಂ ಸಗ್ರಾಂ, ಸೈಯದ್ ಚಾಂದ್ ಪಟೇಲ್, ತಲಖ್ ಚಾಂದ್, ಶೇಖ್ ಅಲೀಂ ತವಕಲಿ, ಸಯದ್ ಅಸಿಮ್ ಸರ್ಮಸ್ತ, ಸಾಯಿಬಣ್ಣ ಪುರ್ಲೆ, ಶರಣಬಸವ ಸಗರ, ರಫೀಕ್ ಚೌಧರಿ, ತಲಕ್ ಚಾಂದ್, ಕರೀಮ್ ದರ್ಬನ್, ಶಫಿ ಸರ್ಮಸ್ತ, ಸಯದ್ ಖಾದ್ರಿ, ಮುಸ್ತಫ ದರ್ಬಾನ್, ಇಸ್ಮಾಯಿಲ್ ಚಾಂದ್, ಸಯ್ಯದ್ ಚಾಂದ್ ಪಾಷಾ, ಶೇಖ್ ಖಲೀಮ್, ಅಲ್ಲಾ ಪಟೇಲ್ ಮಕ್ತಾಪುರ ಸೇರಿದಂತೆ ಗ್ರಾಮದ ಮುಖಂಡರು ಇದ್ದರು.

 

Related