ಔರದ: ಸಂತಪೂರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಿ ಹೆಂಗರ್ ಪ್ರಾಜೆಕ್ಟ್ ಸಂಸ್ಥೆ ಬೆಂಗಳೂರು ಅಡಿಯಲ್ಲಿ ಇಂದು ಸಂತಪುರ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಶ್ರೀಮತಿ ರೇಣುಕಾ ನಾಗರಾಳ್ಕರ್ ಅವರಿಂದ ಸಂತಪೂರ ಸರಕಾರಿ ಶಾಲೆಯ ಮಕ್ಕಳಿಗೆ ಹಲ್ಲುಗಳ ತಪಾಸಣೆ ಮಾಡಲಾಯಿತು. ಇದನ್ನೂ ಓದಿ: ರಾಜಸ್ಥಾನದಲ್ಲಿ ಕನ್ನಡ ನಾಡಿನ ಸಂಸ್ಕೃತಿಯ ಪರಿಚಯ
ಕಾರ್ಯಕ್ರಮ ಅದ್ಯಕ್ಷಸ್ಥಾನ ಅಲಂಕಾರಿಸಿ ಶ್ರೀಮತಿ ಮಾದೇವಿ ಪಾಟೀಲ ಮಾತನಾಡಿ, ಮನುಷ್ಯನ ಎಲ್ಲಾ ಅಂಗಗಳಲ್ಲಿ ಹಲ್ಲುಕೂಡ ಬಹಳ ಮಹತ್ವದಾಗಿದೆ ಹೀಗಾಗಿ ನಾವು ನಮ್ಮ ಶರೀರದಲ್ಲಿ ಹಲ್ಲಿನ ರಕ್ಷಣೆಗೆ ಒತ್ತು ನಿಡಿವುದು ಬಹಳ ಮುಖ್ಯವಾಗಿದೆ ಎಂದು ತಿಳಿದರು. ಇಂದಿನ ವಿದ್ಯಾಮಾನದಲ್ಲಿ ಅನೇಕರು ಮಾದಕವಸ್ತುಗಳಿಗೆ ಒಳಗಾಗಿ ಶರೀರದ ಅನೇಕ ಭಾಗಗಳು ಹಾನಿ ಮಾಡಿಕೊಳ್ಳುತ್ತಿದಾರೆಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಶ್ರೀಮತಿ ಅನಸೂಯಾ ದೊಡ್ಡಿ, ಮಾಲಾಶ್ರಿಕೋಟೆ, ಭಾರತಿ ಚಂದಾಪುರೇ, ಶೃತಿ ಗುರು ಅಂಕಲಗಿ ಭಾಗಿಯಾಗಿದ್ದರು.