ಮದ್ವೆ ವಿಳಂಬ ; ಯುವಕ ಆತ್ಮಹತ್ಯೆ

ಮದ್ವೆ ವಿಳಂಬ ; ಯುವಕ ಆತ್ಮಹತ್ಯೆ

ಮೈಸೂರು : ಮದುವೆಯಾದ ನಂತರ ಸಂಸಾರದ ಜಂಜಾಟ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಗಳು ಇದೆ, ಆದರೆ ಇಲ್ಲೋರ್ವ ಯುವಕ ಕುಟುಂಬದವರು ತನಗೆ ಮದುವೆ ಮಾಡಲಿಲ್ಲವೆಂದು ಬೇಸರಗೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೈಸೂರಿನ ಮಂಡಿ ಮೊಹಲ್ಲಾದಲ್ಲಿ ಈ ಘಟನೆ ನಡೆದಿದ್ದು,

ಮಹಮ್ಮದ್ ಸಲ್ಮಾನ್ (22) ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಯುವಕ ತನಗೆ ಮದುವೆ ಮಾಡುವಂತೆ ಮನೆಯವರಿಗೆ ಒತ್ತಾಯಿಸುತ್ತಿದ್ದನಂತೆ. ಆದರೆ ಇದೇ ವೇಳೆ ನಿನಗಿನ್ನೂ ಚಿಕ್ಕ ವಯಸ್ಸು, ಇಷ್ಟು ಬೇಗ ಮದುವೆ ಬೇಡ, ಮೊದಲು ಮನೆ ಕಟ್ಟುವ ನಂತರ ಮದುವೆ ಮಾಡುತ್ತೇನೆ ಎಂದು ಹೇಳಿದ್ದರು.

ಇದೇ ಕಾರಣಕ್ಕೆ ಮನನೊಂದ ಮಹಮ್ಮದ್ ಸಲ್ಮಾನ್, ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಸಂಬಂಧ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related