ಸಹಕಾರ ಕ್ಷೇತ್ರದಲ್ಲಿ ಬದ್ಧತೆ ಬೇಕು; ಸಚಿವ ಎಸ್ ಟಿ ಎಸ್

ಸಹಕಾರ ಕ್ಷೇತ್ರದಲ್ಲಿ ಬದ್ಧತೆ ಬೇಕು; ಸಚಿವ ಎಸ್ ಟಿ ಎಸ್

ಮಂಗಳೂರು: ಸಹಕಾರ ಕ್ಷೇತ್ರದಲ್ಲಿ ಬದ್ಧತೆ ಇದ್ದು, ಕೆಲಸ ಮಾಡಿದರೆ ಮಾತ್ರ ಸುದೀರ್ಘವಾಗಿ ಬೆಳೆಯುತ್ತದೆ. ಆ ಕೆಲಸವನ್ನು ದಕ್ಷಿಣ ಕನ್ನಡ ಡಿಸಿಸಿ ಬ್ಯಾಂಕ್ ಮಾಡುತ್ತಿದೆ. ಅಲ್ಲದೆ, ಎಲ್ಲ ರೀತಿಯ ಸಾಲಗಳನ್ನು ನೂರಕ್ಕೆ ನೂರರಷ್ಟು ವಸೂಲಾತಿಯನ್ನು ಮಾಡುತ್ತಿದೆ. ಇದು ಉತ್ತಮ ಬೆಳವಣಿಗೆ ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಸಹಕಾರ ಇಲಾಖೆ ಮೂಲಕ ಕೊರೋನಾ ವಾರಿಯರ್ಸ್ ಗಳಾದ ಆಶಾ ಕರ‍್ಯರ‍್ತೆಯರಿಗೆ ತಲಾ 3 ಸಾವಿರ ರೂಪಾಯಿ ಪ್ರೋತ್ಸಾಹಧನ ವಿತರಣೆ ಕರ‍್ಯಕ್ರಮಕ್ಕೆ ಚೆಕ್ ನೀಡುವ ಮೂಲಕ ಚಾಕನೆ ನೀಡಿ ಮಾತನಾಡಿದರು.

21 ಡಿಸಿಸಿ ಬ್ಯಾಂಕ್ ಗಳಿದ್ದು, ಈ ಎಲ್ಲ ಬ್ಯಾಂಕ್ ಗಳಿಗಿಂತ ಉತ್ತಮವಾಗಿ ದಕ್ಷಿಣ ಕನ್ನಡ ಡಿಸಿಸಿ ಬ್ಯಾಂಕ್ ಕರ‍್ಯನರ‍್ವಹಿಸುತ್ತಿದೆ. ಇನ್ನು ಎಲ್ಲರನ್ನೂ ಒಟ್ಟಾಗಿ ಕೊಂಡೊಯ್ಯುವ ಕೆಲಸವನ್ನು ಎಸ್ ಸಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ರಾಜೇಂದ್ರಕುಮಾರ್ ಅವರು ಮಾಡುತ್ತಿದ್ದಾರೆ. ಸಹಕಾರ ಕ್ಷೇತ್ರದಲ್ಲಿ ಅಸಹಕಾರ ಇರಕೂಡದು. ಎಲ್ಲಿ ಸಹಕಾರ ಇರುತ್ತದೋ ಅಲ್ಲಿ ಅಭಿವೃದ್ಧಿಯಾಗುತ್ತದೆ ಎಂದು ಸಚಿವ ಎಸ್ ಟಿ ಎಸ್ ಹೇಳಿದರು.

Related